ಮೆಕ್ಸಿಕನ್ ನೌಕಾಪಡೆ ಶುಕ್ರವಾರ ಕುಖ್ಯಾತ ಮಾದಕವಸ್ತು ಕಳ್ಳಸಾಗಣೆದಾರ ರಾಫೆಲ್ ಕ್ಯಾರೊನನ್ನು ಬಂಧಿಸಿದೆ. ಎಫ್ಬಿಐನ ಟಾಪ್ 10 ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳ ಪಟ್ಟಿಯಲ್ಲಿ ರಾಫೆಲ್ ಕ್ಯಾರೊ ಹೆಸರು ಕೂಡ ಸೇರಿದ್ದು, ಈತನನ್ನು ಬಂಧಿಸಲು ಎರಡು ದೇಶದ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು. ರಾಫೆಲ್ 1985 ರಲ್ಲಿ ಯುಎಸ್ ಡಿಇಎ ಏಜೆಂಟ್ನನ್ನು ಕೊಂದ ಆರೋಪ ಹೊತ್ತಿದ್ದಾನೆ. ಇನ್ನು ಈತನ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಒಂದು ಶ್ವಾನ ಎಂಬುದು ಗಮನಿಸಬೇಕಾದ ಸಂಗತಿ.
ಇದನ್ನೂ ಓದಿ: ಈ 4 ಸಲಹೆಗಳನ್ನು ಅನುಸರಿಸಿ ಕೆಲವೇ ದಿನಗಳಲ್ಲಿ ತೂಕ ಇಳಿಸಿ
ಮೆಕ್ಸಿಕನ್ ನೌಕಾಪಡೆಯು ರಾಫೆಲ್ ಕ್ಯಾರೊನನ್ನು ಬಂಧಿಸಲು ಕಾರ್ಯಾಚರಣೆಯನ್ನು ನಡೆಸಿತ್ತು. ಆದರೆ ಅವನ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದು 6 ವರ್ಷ ವಯಸ್ಸಿನ ನಾಯಿ. ಮ್ಯಾಕ್ಸ್ ಹೆಸರಿನ ಈ ನಾಯಿ ಇಡೀ ಕಾರ್ಯಾಚರಣೆಯ ದೊಡ್ಡ ಭಾಗವಾಗಿ ಹೊರಹೊಮ್ಮಿದೆ. ಬ್ಲಡ್ ಹೌಂಡ್ ತಳಿಯ ಈ ಹೆಣ್ಣು ನಾಯಿ ಮೆಕ್ಸಿಕನ್ ಮರೈನ್ನ ಭಾಗವಾಗಿದೆ. ಸಿನಾಲೋವಾದ ಸ್ಯಾನ್ ಸೈಮನ್ ನಗರದ ಅರಣ್ಯ ಪ್ರದೇಶದಲ್ಲಿ ರಾಫೆಲ್ ಕ್ಯಾರೊನನ್ನು ಪತ್ತೆಹಚ್ಚಲು ಈ ನಾಯಿ ಸಹಾಯ ಮಾಡಿದೆ.
2016 ರಲ್ಲಿ ಜನಿಸಿದ ಮ್ಯಾಕ್ಸ್ ಬೆಲೆ 78 ಪೌಂಡ್. ಬ್ಲಡ್ಹೌಂಡ್ ಮಿಲಿಟರಿ ಪಡೆಗಳೊಂದಿಗೆ ಹಲವಾರು ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಮ್ಯಾಕ್ಸ್ ಈ ಬಾರಿಯು ಭರ್ಜರಿ ತಪಾಸಣೆ ನಡೆಸಿದೆ. ಕ್ಯಾರೊ ಬಂಧನದ ನಂತರ, ಮೆಕ್ಸಿಕೊದ ಈ ಪ್ರಯತ್ನವನ್ನು ಅಮೆರಿಕ ಶ್ಲಾಘಿಸಿದೆ. ಇನ್ನು ಯುನೈಟೆಡ್ ಸ್ಟೇಟ್ಸ್ ಅಟಾರ್ನಿ ಜನರಲ್ ಮೆರಿಕ್ ಗಾರ್ಲ್ಯಾಂಡ್ ಅವರು ರಾಫೆಲ್ ಕ್ಯಾರೊನನ್ನು ತಕ್ಷಣವೇ ಮೆಕ್ಸಿಕೊಗೆ ಹಸ್ತಾಂತರಿಸುವಂತೆ ಒತ್ತಾಯಿಸುವುದಾಗಿ ಹೇಳಿದರು.
20 ಮಿಲಿಯನ್ ಡಾಲರ್ ಬಹುಮಾನ:
ಈ ಮೊದಲು ರಾಫೆಲ್ನನ್ನು ಹುಡುಕಿ ಕೊಟ್ಟವರಿಗೆ 20 ಮಿಲಿಯನ್ ಡಾಲರ್ ಬಹುಮಾನವನ್ನು ಘೋಷಿಸಲಾಗಿತ್ತು. ಅಷ್ಟೇ ಅಲ್ಲದೆ, ಪ್ರಪಂಚದ ಇತಿಹಾಸದಲ್ಲಿಯೇ ಮಾದಕ ವಸ್ತು ಕಳ್ಳ ಸಾಗಾಣೆದಾರನನ್ನು ಪತ್ತೆ ಹಚ್ಚಲು ಇಷ್ಟು ಮೊತ್ತದ ಬಹುಮಾನವನ್ನು ಘೋಷಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಇದೀಗ ರಾಫೆಲ್ ಯುಎಸ್ನಲ್ಲಿ ಜೋಕ್ವಿನ್ ಎಲ್ ಚಾಪೋ ಗುಜ್ಮಾನ್ ಲೋರಾ ಅವರಂತೆ ಜೀವಾವಧಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ: Arecanut Price: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ
ಯುಎಸ್ ಅಧಿಕಾರಿಗಳು ಮತ್ತು ಮೆಕ್ಸಿಕೋ ಮಿಲಿಟರಿ ಪಡೆ ಈಗಾಗಲೇ ರಾಫೆಲ್ ಹಸ್ತಾಂತರದ ಬಗ್ಗೆ ಮಾತುಕತೆ ನಡೆಸುತ್ತಿದೆ. ಈ ಹಿಂದೆ ಎರಡು ಬಾರಿ ಬಂಧನಕ್ಕೊಳಗಾಗಿದ್ದ ಕ್ಯಾರೋ ತಪ್ಪಿಸಿಕೊಂಡಿದ್ದ. ಇದೀಗ ಮ್ಯಾಕ್ಸ್ ಎಂಬ ನಾಯಿ ಸಹಾಯದಿಂದ ಮತ್ತೆ ಅರೆಸ್ಟ್ ಮಾಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.