ಕೆಲವು ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದ್ದು, ಅವುಗಳು ವ್ಯಕ್ತಿಯ ಜೀವನದಲ್ಲಿ ಸಕಾರಾತ್ಮಕತೆ, ಸಂತೋಷ ಮತ್ತು ಸಮೃದ್ಧಿಯನ್ನು ತರಲು ಕೆಲಸ ಮಾಡುತ್ತದೆ. ಜೀವನದ ಪ್ರತಿಯೊಂದು ಸಣ್ಣ ವಿಷಯದಲ್ಲೂ ವಾಸ್ತುವಿನ ಕೆಲವು ನಿಯಮಗಳನ್ನು ಹೇಳಲಾಗಿದೆ. ವಾಸ್ತು ತಜ್ಞರ ಪ್ರಕಾರ ಸಿಂಧೂರಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಹೇಳಲಾಗಿದೆ. ಸಿಂಧೂರವನ್ನು ನಿರ್ಲಕ್ಷಿಸಿದರೆ ಅಥವಾ ಅದರ ಬಗ್ಗೆ ಅಸಡ್ಡೆ ತೋರಿದರೆ ದೊಡ್ಡಮಟ್ಟದಲ್ಲಿ ಸಮಸ್ಯೆ ಎದುರಿಸಬೇಕಾಗಬಹುದು. ವಿವಾಹಿತ ಮಹಿಳೆಯರು ಈ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.
ಇದನ್ನೂ ಓದಿ: ಎನ್‌ಎಫ್‌ಟಿಯಿಂದ ಕಿಚ್ಚನ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್: ಕಿಚ್ಚ ವರ್ಸ್ ಲಾಂಚ್
ಹಿಂದೂ ಧರ್ಮದಲ್ಲಿ ವಿವಾಹಿತ ಮಹಿಳೆಯರು ಸಿಂಧೂರವನ್ನು ಕಡ್ಡಾಯವಾಗಿ ಧರಿಸಬೇಕು. ಈ ಸಿಂಧೂರಕ್ಕೆ ವಿಶೇಷ ಮಹತ್ವವಿದೆ. ಹಿರಿಯರು ಹೇಳುತ್ತಾರೆ ಎಂದು ಸಿಂಧೂರವನ್ನು ತೊಟ್ಟರೆ ಗಂಡನ ಆಯುಷ್ಯ ದೀರ್ಘವಾಗುವುದಿಲ್ಲ. ಬದಲಿಗೆ, ವಾಸ್ತುದಲ್ಲಿ ಕೆಲವು ನಿಯಮಗಳನ್ನು ಹೇಳಲಾಗಿದೆ.
ಹಿಂದೂ ಧರ್ಮದಲ್ಲಿ ಸಿಂಧೂರಕ್ಕೆ ವಿಶೇಷ ಮಹತ್ವವಿದೆ. ಸಿಂಧೂರ ಇಡುವುದರಿಂದ ಗಂಡನ ಸಮಸ್ಯೆಗಳನ್ನು ಪರಿಹಾರ ಮಾಡಬಹುದು. ಅಷ್ಟೇ ಅಲ್ಲದೆ, ಪತಿಯ ದೀರ್ಘಾಯುಷ್ಯ ಸಹ ಕಾಪಾಡಬಹುದು.
ವಿವಾಹಿತ ಮಹಿಳೆಯರು ಹಣೆಯಲ್ಲಿ ಸಿಂಧೂರವನ್ನು ಹಚ್ಚಬೇಕು ಎಂದು ಹಿಂದೂ ಪುರಾಣ, ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಸಿಂಧೂರವನ್ನು ಕಾಟಾಚಾರಕ್ಕೆ ಹಚ್ಚಬೇಡಿ. ಹೀಗೆ ಮಾಡಿದರೆ ನಿಮ್ಮ ಪತಿಗೆ ಆರ್ಥಿಕ ಸಮಸ್ಯೆ ಎದುರಾಗಬಹುದು. ಇನ್ನು ನಿಮ್ಮ ಹಣೆಯಿಂದ ಸಿಂಧೂರವನ್ನು ತೆಗೆದು ಬೇರೊಬ್ಬರ ಹಣೆಗೆ ಹಚ್ಚುವುದನ್ನು ಸಹ ಅಶುಭ ಎಂದು ಪರಿಗಣಿಸಲಾಗಿದೆ.
ವಾಸ್ತು ಪ್ರಕಾರ, ವಿವಾಹಿತ ಮಹಿಳೆಯರು ಯಾವಾಗಲೂ ತಮ್ಮ ಪತಿಯಿಂದ ಅಥವಾ ತಮ್ಮ ಸ್ವಂತ ಹಣದಿಂದ ಖರೀದಿಸಿದ ಸಿಂಧೂರವನ್ನು ಹಚ್ಚಬೇಕು. ಬೇರೊಬ್ಬರ ಹಣದಿಂದ ಸಿಂಧೂರವನ್ನು ಎಂದಿಗೂ ಖರೀದಿಸಬೇಡಿ.
ಇದನ್ನೂ ಓದಿ: ಮೊಗ್ಗಿನ ಮನಸ್ಸಿನಿಂದ ಕೆಜಿಎಫ್‌ವರೆಗೆ ರಾಕಿಂಗ್ ಸ್ಟಾರ್ ಯಶ್ 14 ವರ್ಷಗಳ ಸಿನಿಪಯಣ!!
ಕೆಲ ಮಹಿಳೆಯರು ಬೆಳಗ್ಗಿ ಕಾರ್ಯ ಮುಗಿಸಿದ ಬಳಿಕ, ಸ್ನಾನ ಮಾಡಿ ಸಿಂಧೂರವನ್ನು ಹಚ್ಚುತ್ತಾಳೆ. ಆದರೆ ಹೀಗೆ ಮಾಡಿದ್ದಲ್ಲಿ ಸಮಸ್ಯೆ ಉಂಟಾಗಬಹುದು. ಒದ್ದೆಯಾದ ಕೂದಲಿರುವಾಗ ಸಿಂಧೂರವನ್ನು ಹಚ್ಚಿದರೆ ಮನೆಯ ಸುಖ-ಶಾಂತಿ ದೂರವಾಗುತ್ತದೆ. ವ್ಯಕ್ತಿಯ ಮನಸ್ಸಿನಲ್ಲಿ ಅನೇಕ ರೀತಿಯ ಕೆಟ್ಟ ಆಲೋಚನೆಗಳು ಬರಲು ಪ್ರಾರಂಭಿಸುತ್ತವೆ. ಸ್ನಾನದ ನಂತರ, ಕೂದಲನ್ನು ಚೆನ್ನಾಗಿ ಒಣಗಿಸಿ ಬಳಿಕ ಹಣೆಗೆ ಸಿಂಧೂರವನ್ನು ಹಚ್ಚಬೇಕು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.