ತುಳಸಿ ಗಿಡಕ್ಕಾಗಿ ವಾಸ್ತು ಸಲಹೆ: ಹಿಂದೂ ಧರ್ಮದಲ್ಲಿ ತುಳಸಿ ಸಸ್ಯಕ್ಕೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ. ತುಳಸಿ ಗಿಡ ಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ ಎಂದು ನಂಬಲಾಗಿದೆ. ಹಾಗಾಗಿಯೇ, ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ. ಆದರೆ, ಮನೆಯಲ್ಲಿ ಸುಖ-ಸಮೃದ್ಧಿ ಸಂತೋಷ ನೆಲೆಸಲು ಬಯಸಿದರೆ ತುಳಸಿ ಗಿಡವನ್ನು ನೆಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡುವುದು ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಈ ಬಗ್ಗೆ ವಿವರಿಸಲಾಗಿದೆ.
ತುಳಸಿ ಗಿಡದಿಂದ ಗರಿಷ್ಠ ಲಾಭವನ್ನು ಪಡೆಯಲು ವಾಸ್ತು ಶಾಸ್ತ್ರದಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಈ ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ ತುಳಸಿ ಗಿಡವು ಮನೆಯಲ್ಲಿ ಹಣದ ಹೊಳೆಯನ್ನೇ ಹರಿಸುತ್ತದೆ ಎಂದು ಹೇಳಲಾಗುತ್ತದೆ.
ತುಳಸಿ ನೆಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ :
ಮನೆಯಲ್ಲಿ ತುಳಸಿ ಗಿಡವನ್ನು ನೆಡಲು ಗುರುವಾರ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಈ ದಿನವನ್ನು ಭಗವಾನ್ ವಿಷ್ಣುವಿಗೆ ಸಮರ್ಪಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಗುರುವಾರ ತುಳಸಿ ಗಿಡವನ್ನು ನೆಡುವುದರಿಂದ ವಿಷ್ಣುವಿನ ವಿಶೇಷ ಅನುಗ್ರಹಕ್ಕೆ ಪಾತ್ರರಾಗಬಹುದು. ಮಾತ್ರವಲ್ಲ ಈ ದಿನದಂದು ತುಳಸಿ ಗಿಡವನ್ನು ನೆಡುವುದರಿಂದ ಜಾತಕದಲ್ಲಿ ಗುರು ಗ್ರಹವು ಬಲಶಾಲಿ ಆಗಲಿದ್ದು, ಶುಭ ಫಲಿತಾಂಶ ದೊರೆಯುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ- Vastu Shastra: ಮನೆಯ ಯಾವ ದಿಕ್ಕಿನಲ್ಲಿ ನವಿಲುಗರಿಯನ್ನು ಸ್ಥಾಪಿಸಿದರೆ ಧನಲಾಭ, ಈ ರೀತಿ ಬಳಸಿ
ಜಾತಕದಲ್ಲಿ ಗುರು ಗ್ರಹವು ಶುಭ ಸ್ಥಾನದಲ್ಲಿದ್ದರೆ ವ್ಯಕ್ತಿಗೆ ಪ್ರತಿ ಕೆಲಸದಲ್ಲಿಯೂ ಅದೃಷ್ಟ ಕೈ ಹಿಡಿಯಲಿದ್ದು, ಯಶಸ್ಸು ಪ್ರಾಪ್ತಿಯಾಗಲಿದೆ. ಜೊತೆಗೆ ಅಪಾರ ಹಣ ವೃದ್ದಿಯಾಗಲಿದೆ ಎಂದು ಹೇಳಲಾಗುತ್ತದೆ.
ಶುಕ್ರವಾರದಂದು ತುಳಸಿ ಗಿಡವನ್ನು ನೆಡುವುದು ಒಳ್ಳೆಯದು ಏಕೆಂದರೆ ಈ ದಿನವು ಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ ಮತ್ತು ತುಳಸಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ.
ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಜನರು ಶನಿವಾರದಂದು ತುಳಸಿ ಗಿಡವನ್ನು ನೆಡುವುದರಿಂದ ಲಾಭ ಪಡೆಯಬಹುದು ಎನ್ನಲಾಗುತ್ತದೆ.
ಮಾಸಗಳ ಕುರಿತು ಹೇಳುವುದಾದರೆ ಕಾರ್ತಿಕ ಮಾಸದಲ್ಲಿ ತುಳಸಿ ಗಿಡವನ್ನು ನೆಡುವುದು ಅತ್ಯಂತ ಶ್ರೇಯಸ್ಕರ. ಇದಲ್ಲದೇ ನವರಾತ್ರಿಯಲ್ಲಿ (ವಿಶೇಷವಾಗಿ ಚೈತ್ರ ಮಾಸದ ನವರಾತ್ರಿ) ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದು ಕೂಡ ಮಂಗಳಕರ.
ತುಳಸಿ ಸಸ್ಯವನ್ನು ಈ ದಿಕ್ಕಿನಲ್ಲಿ ನೆಡುವುದು ಬಹಳ ಶುಭ:
ತುಳಸಿ ಗಿಡವನ್ನು ನೆಡಲು ಸರಿಯಾದ ಸಮಯ, ಮುಹೂರ್ತದ ಹೊರತಾಗಿ, ಅದನ್ನು ಇಡುವ ದಿಕ್ಕು ಕೂಡ ಬಹಳ ಮುಖ್ಯ. ಮನೆಯಲ್ಲಿ ತುಳಸಿ ಗಿಡವನ್ನು ಉತ್ತರ ದಿಕ್ಕಿನಲ್ಲಿ ಇಡಿ. ಇದು ಸಾಧ್ಯವಾಗದಿದ್ದರೆ, ನೀವು ಅದನ್ನು ಪೂರ್ವ ಮತ್ತು ಈಶಾನ್ಯದಲ್ಲಿ ಇರಿಸಬಹುದು.
ಇದನ್ನೂ ಓದಿ- ವಾಸ್ತು ನಿಯಮಗಳು: ತುಳಸಿಗೆ ನೀರನ್ನು ಅರ್ಪಿಸುವಾಗ ಈ ಮಂತ್ರ ಪಠಿಸಿ
ತುಳಸಿ ಸಸ್ಯವನ್ನು ಈ ದಿಕ್ಕಿನಲ್ಲಿ ನೆಡಬೇಡಿ:
ಅಪ್ಪಿತಪ್ಪಿಯೂ ಸಹ ತುಳಸಿ ಸಸ್ಯವನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ಇಡಬೇಡಿ. ಇದರಿಂದ ಹಾನಿಯಾಗುತ್ತದೆ.
ತುಳಸಿ ಗಿಡವನ್ನು ನೈಋತ್ಯ ದಿಕ್ಕಿನಲ್ಲಿ ಇಡಬೇಡಿ. ಹೀಗೆ ಮಾಡುವುದರಿಂದ ಜೀವನದಲ್ಲಿ ನಾನಾ ರೀತಿಯ ತೊಂದರೆಗಳು ಎದುರಾಗಲಿವೆ ಎಂದು ಹೇಳಲಾಗುತ್ತದೆ.
ಈ ದಿನಗಳಂದು ತುಳಸಿಯನ್ನು ನೆಡಬೇಡಿ:
ಸೂರ್ಯಗ್ರಹಣ, ಚಂದ್ರಗ್ರಹಣ, ಏಕಾದಶಿ ಮತ್ತು ಭಾನುವಾರದಂದು ತಪ್ಪಾಗಿ ತುಳಸಿ ಗಿಡವನ್ನು ನೆಡಬೇಡಿ. ಈ ಕಾಲದಲ್ಲಿ ತುಳಸಿಯನ್ನು ಮುಟ್ಟುವುದು ಕೂಡ ನಿಷಿದ್ಧ ಎಂದು ಹೇಳಲಾಗುತ್ತದೆ. ಇಲ್ಲದಿದ್ದರೆ, ಅದೃಷ್ಟ ಕೂಡ ದುರದೃಷ್ಟಕರವಾಗಿ ಬದಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.