Credit Card Safety : ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿರಾ? ಹಾಗಿದ್ರೆ ಎಚ್ಚರ..!

ಕೆಲವರ ನಿರ್ಲಕ್ಷ್ಯದಿಂದ ಹಲವು ಬಾರಿ ಕ್ರೆಡಿಟ್ ಕಾರ್ಡ್ ಮೂಲಕವೂ ನಷ್ಟ ಅನುಭವಿಸುತ್ತಾರೆ. 

Written by - Channabasava A Kashinakunti | Last Updated : Jul 24, 2022, 04:54 PM IST
  • ಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಮೂಲಕವೂ ಆನ್‌ಲೈನ್ ಪಾವತಿ
  • ಬಳಕೆಯ ಮುನ್ನ ಇರಲಿ ಈ ಮುನ್ನೆಚ್ಚರಿಕೆ!
  • ಅನುಸರಿಸಿ ಈ ನಿಯಮಗಳನ್ನು
Credit Card Safety : ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿರಾ? ಹಾಗಿದ್ರೆ ಎಚ್ಚರ..! title=

Credit Card Payment : ಪ್ರಸ್ತುತ ದಿನಗಳಲ್ಲಿ ಜನ ಆನ್‌ಲೈನ್ ಹಣ ಪಾವತಿಗೆ ಹೆಚ್ಚು ಒಟ್ಟು ನೀಡುತ್ತಿದ್ದಾರೆ. ಇದು ಜನತೆಗೆ  ತುಂಬಾ ಸುಲಭವಾಗಿದೆ. ಆನ್‌ಲೈನ್ ಪಾವತಿಗೆ ಹಲವು ವಿಧಾನಗಳಿವೆ. ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಮೂಲಕವೂ ಆನ್‌ಲೈನ್ ಪಾವತಿ ಮಾಡಬಹುದು. ಆದ್ರೆ, ಕ್ರೆಡಿಟ್ ಕಾರ್ಡ್‌ಗಳ ಇತರ ಹಲವು ಪ್ರಯೋಜನಗಳಿವೆ. ಕ್ರೆಡಿಟ್ ಕಾರ್ಡ್ ಮೂಲಕ, ಜನ ಯಾವುದೇ ರೀತಿಯ ಬಿಲ್ ಪಾವತಿಸಬಹುದು. ಹೀಗಾಗಿ ಹೆಚ್ಚಿನ ಜನ ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ಆದರೆ, ಕೆಲವರ ನಿರ್ಲಕ್ಷ್ಯದಿಂದ ಹಲವು ಬಾರಿ ಕ್ರೆಡಿಟ್ ಕಾರ್ಡ್ ಮೂಲಕವೂ ನಷ್ಟ ಅನುಭವಿಸುತ್ತಾರೆ. 

ಬಳಕೆಯ ಮುನ್ನ ಇರಲಿ ಈ ಮುನ್ನೆಚ್ಚರಿಕೆ!

ಇಂದಿನ ಕಾಲದಲ್ಲಿ ಅನೇಕ ಜನ ಕ್ರೆಡಿಟ್ ಕಾರ್ಡ್‌ಗಳ ಬಳಕೆ ಹೆಚ್ಚಾಗಿದೆ. ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕು. ಕ್ರೆಡಿಟ್ ಕಾರ್ಡ್ ಮೂಲಕ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೆ, ನೀವು ಮೋಸ ಹೋಗಬಹುದು. ಹೀಗಾಗಿ, ಕ್ರೆಡಿಟ್ ಕಾರ್ಡ್ ಬಳಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಇದರಿಂದ ಯಾವುದೇ ರೀತಿಯ ನಷ್ಟವನ್ನು ತಪ್ಪಿಸಬಹುದು.

ಇದನ್ನೂ ಓದಿ : ಮತ್ತೆ ತರಕಾರಿ ಬೆಲೆಯಲ್ಲಿ ಭಾರೀ ವ್ಯತ್ಯಯ: ಹೀಗಿದೆ ನೋಡಿ ಈರುಳ್ಳಿ, ಟೊಮ್ಯಾಟೋ ಬೆಲೆ

ಅನುಸರಿಸಿ ಈ ನಿಯಮಗಳನ್ನು

- ಯಾರಿಗೂ ಕ್ರೆಡಿಟ್ ಕಾರ್ಡ್ ಕೊಡಬೇಡಿ. ನಿಮ್ಮೊಂದಿಗೆ ಇಟ್ಟುಕೊಳ್ಳಿ.
- ಕ್ರೆಡಿಟ್ ಕಾರ್ಡ್ ಮಂತ್ಲಿ ಸ್ಟೇಟ್ಮೆಂಟ್ ಗಳನ್ನು ಎಚ್ಚರಿಕೆಯಿಂದ ಓದಿ.
- ಯಾವುದೇ ಅನುಮಾನಾಸ್ಪದ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಬಳಸಬೇಡಿ.
- ನಿಮ್ಮ ಕಾರ್ಡ್ ಕಳುವಾಗಿದ್ದರೆ ಅಥವಾ ಕಳೆದುಹೋದರೆ, ತಕ್ಷಣವೇ ನಿಮ್ಮ ಬ್ಯಾಂಕ್‌ಗೆ ತಿಳಿಸಿ.
- ನಿಮ್ಮ ಕ್ರೆಡಿಟ್ ಕಾರ್ಡ್ ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
- ಕ್ರೆಡಿಟ್ ಕಾರ್ಡ್‌ನ ಪಿನ್ ಅನ್ನು ಬದಲಾಯಿಸುತ್ತಿರಿ. ನಿಮ್ಮ ಕ್ರೆಡಿಟ್ ಕಾರ್ಡ್ ಪಿನ್ ಅನ್ನು ಕನಿಷ್ಠ 6 ತಿಂಗಳಿಗೊಮ್ಮೆ ಬದಲಾಯಿಸಿ.
- ಕ್ರೆಡಿಟ್ ಕಾರ್ಡ್ ನೀಡಿದ ಬ್ಯಾಂಕ್‌ನಿಂದ ನಿಮಗೆ ಲಿಂಕ್ ಕಳುಹಿಸಲಾಗಿದೆ ಎಂದು ಹೇಳುವ ಯಾವುದೇ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.

ಇದನ್ನೂ ಓದಿ : Arecanut today Price: ಇಂದಿನ ರಾಶಿ ಅಡಿಕೆ ಧಾರಣೆ, ಯಾವ ಜಿಲ್ಲೆಯಲ್ಲಿ ಎಷ್ಟಿದೆ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News