ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ರಶ್ಮಿಕಾ ಫೋಟೋ ಪಡ್ಡೆ ಹುಡುಗರ ನಿದ್ದೆ ಗೆಡಿಸುತ್ತಿದೆ.
ಬೆಂಗಳೂರು : ನ್ಯಾಷನಲ್ ಕ್ರಶ್ ಎಂದೇ ಕರೆಸಿಕೊಳ್ಳುವ ರಶ್ಮಿಕಾ ಮಂದಣ್ಣ ಅದ್ಭುತ ಚೆಲುವೆ. ಕಿರಿಕ್ ಪಾರ್ಟಿ ಯಿಂದ ಹಿಡಿದು 'ಡಿಯರ್ ಕಾಮ್ರೇಡ್' ವರೆಗೆ ಅವರ ಪ್ರತಿಯೊಂದು ಚಿತ್ರವೂ ಅವರಿಗೆ ಹೆಸರು ತಂದು ಕೊಟ್ಟಿದೆ. ಇನ್ನೇನು ರಶ್ಮಿಕಾ ಬಾಲಿವುಡ್ ಮಿಂಚುವುದನ್ನು ನೋಡಲು ಅವರ ಅಭಿಮಾನಿಗಳು ಕಾತರರಾಗಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅವರ ಫೋಟೋ ಪಡ್ಡೆ ಹುಡುಗರ ನಿದ್ದೆ ಗೆಡಿಸುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
Indian couture week 15 ನೇ ಆವೃತ್ತಿಯಲ್ಲಿ ರಶ್ಮಿಕಾ ಮಂದಣ್ಣ ಪೋಸ್ ನೀಡಿದ್ದರು. ಆಕೆ ಧರಿಸಿರುವ ಉಡುಪನ್ನು ವರುಣ್ ಬಹ್ಲ್ ವಿನ್ಯಾಸಗೊಳಿಸಿದ್ದಾರೆ. ಈ ಧಿರಿಸಿನೊಂದಿಗೆ ರ್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದಾಗ ಎಲ್ಲರ ದೃಷ್ಟಿ ಅವರತ್ತ ನೆಟ್ಟಿತ್ತು.
ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಅವರ ಎಲ್ಲಾ ಫೋಟೋಗಳು ತುಂಬಾ ವಿಶೇಷವಾಗಿದೆ.
ಯಾರಾದರೂ ಅಷ್ಟು ಮುದ್ದಾಗಿರಳು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಈ ಫೋಟೋವನ್ನು ನೋಡುವಾಗ ಕಾಡದೇ ಇರದು. ಕೂದಲಿಗೆ ಹೂವು ಮುಡಿದುಕೊಂಡು ತಲೆ ಮೇಲೆ ಕೈ ಇಟ್ಟುಕೊಂದು ಕುಳಿತಿರುವ ಈ ಫೋಟೋವನ್ನು ಅವರ ಅಭಿಮಾನಿಗಳು ಬಹಳವಾಗಿ ಮೆಚ್ಚಿದ್ದಾರೆ.
ಜಗತ್ತನ್ನು ಬದಲಾಯಿಸಲು ಸಾಧ್ಯವಾಗದಿದ್ದಾಗ, ಜಗತ್ತನ್ನು ನೋಡುವ ದೃಷ್ಟಿಕೋನವನ್ನು ಬದಲಿಸಿ ಎಂದು ಹೇಳಲಾಗುತ್ತದೆ." ಹೀಗಂತ ಅದ್ಯಾವ ಮಹಾನ್ ವ್ಯಕ್ತಿ ಹೇಳಿದ್ದರೋ? ಆದರೆ ಈ ಫೋಟೋದಲ್ಲಿ ರಶ್ಮಿಕಾ ಕಣ್ಣಿಗೆ ಸಂತೋಷದ ಕನ್ನಡಕವನ್ನು ಹಾಕಿಕೊಂಡಿದ್ದಾರೆ. ರಶ್ಮಿಕಾ ಮತ್ತೊಮ್ಮೆ ಈ ಶೈಲಿಯ ಮೂಲಕ ಜನರ ಹೃದಯವನ್ನು ಗೆದ್ದಿದ್ದಾರೆ.
ನಿಮ್ಮ ಮುಂದೆ ಬದು ಕುಳಿತು ಯಾರಾದರೂ ಮಾತನಾಡುತ್ತಿದ್ದು ನಿಮಗೆ ಅದನ್ನು ಕೇಳಿಸಿಕೊಳ್ಳುವುದು ಇಷ್ಟವಿಲ್ಲದಿದ್ದರೆ ಹೀಗೆ ಸುಮ್ಮನೆ ಕಿವಿ ಮುಚ್ಚಿಕೊಂಡರೆ ಆಯಿತು.
ಕೋಪದಿಂದ ನೋಡುವ ಈ ನೋಟದಲ್ಲೂ ಪ್ರೀತಿ ಅಡಗಿದೆ ಅನ್ನಿಸುತ್ತದೆ. ಕೋಪವೋ ಬೇಸರವೋ ಆದರೆ ಆ ಮುಖದಲ್ಲಿ ಮುಗ್ದತೆ ಕೂಡಾ ಕಾಣಿಸುತ್ತಿದೆ.