ಭೋಪಾಲ್: ಸಮವಸ್ತ್ರಧಾರಿ ಪೊಲೀಸ್ ಸಿಬ್ಬಂದಿಯೊಬ್ಬ ವೃದ್ಧನೊಬ್ಬನ ಎದೆಗೆ ಒದ್ದು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಪೊಲೀಸಪ್ಪನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಗುರುವಾರ ಈ ಘಟನೆ ನಡೆದಿದೆ. ಪೊಲೀಸ್ ಸಿಬ್ಬಂದಿ ವೃದ್ಧನಿಗೆ ಒದೆಯುತ್ತಿರುವ ದೃಶ್ಯವನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಈ ವಿಡಿಯೋ ವೈರಲ್ ಅಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.
ಇದನ್ನೂ ಓದಿ: Viral Video: ಸೋರುವ ಸರ್ಕಾರಿ ಶಾಲೆ ಮೇಲ್ಛಾವಣಿ, ಛತ್ರಿ ಹಿಡಿದು ಪಾಠ ಕೇಳುವ ವಿದ್ಯಾರ್ಥಿಗಳು!
ವೈರಲ್ ವಿಡಿಯೋದಲ್ಲಿ ಏನಿದೆ..?
A video of a uniformed cop kicking an elderly man at Jabalpur railway station has given rise to a wave of outrage at police. A passenger at the railway station had broadcast it live at the time of the incident @ndtv @ndtvindia pic.twitter.com/5PpijBPcw1
— Anurag Dwary (@Anurag_Dwary) July 29, 2022
ವೈರಲ್ ಆಗಿರುವ ಈ ವಿಡಿಯೋದಲ್ಲಿ ರೈಲು ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬ ವೃದ್ಧನೊಬ್ಬನಿಗೆ ಒದೆಯುವ ದೃಶ್ಯವನ್ನು ಕಾಣಬಹುದು. ಎಷ್ಟೇ ಪರಿಪರಿಯಾಗಿ ಬೇಡಿಕೊಂಡರೂ ಬಿಡದೆ ವೃದ್ಧನ ಎದೆ ಮತ್ತು ಮುಖಕ್ಕೆ ಒದ್ದು ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಸಾಲದ್ದಕ್ಕೆ ಆ ವೃದ್ಧನನ್ನು ದರದರನೇ ಎಳೆದು ರೈಲ್ವೆ ಟ್ರ್ಯಾಕ್ಗೆ ಹಾಕಲು ಯತ್ನಿಸಿದ್ದಾನೆ.
ಪೊಲೀಸ್ ಸಿಬ್ಬಂದಿಯ ಕಾಲು ಹಿಡಿದು ಹೊಡೆಯಬೇಡವೆಂದು ವಯಸ್ಸಾದ ವ್ಯಕ್ತಿ ಮನವಿ ಮಾಡಿಕೊಂಡಿದ್ದಾನೆ. ಇದಕ್ಕೆ ಕ್ಯಾರೆ ಅನ್ನದ ಪೊಲೀಸಪ್ಪ ವೃದ್ಧನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ನೆರೆದಿದ್ದ ಪ್ರಯಾಣಿಕರು ಮೂಕಪ್ರೇಕ್ಷಕರ ರೀತಿ ನೋಡುತ್ತಾ ನಿಂತಿದ್ದಾರೆ. ವೃದ್ಧನನ್ನು ರೈಲ್ವೆ ಟ್ರ್ಯಾಕ್ನಲ್ಲಿ ಹಾಕಲು ಯತ್ನಿಸಿದಾಗಲೂ ಯಾರೂ ಸಹಾಯಕ್ಕೆ ಬಂದಿಲ್ಲ.
ಇದನ್ನೂ ಓದಿ: viral video : ರಸಗುಲ್ಲಾ ತಿನ್ನಿಸುವ ಭರದಲ್ಲಿ ವರನಿಗೆ ಮುತ್ತಿಟ್ಟ ನಾದಿನಿ..! ವಧು ಕಕ್ಕಾಬಿಕ್ಕಿ ..!
ಹಲ್ಲೆಗೊಳಗಾದ ವೃದ್ಧನನ್ನು ಗೋಪಾಲ್ ಪ್ರಸಾದ್ ಎಂದು ಗುರುತಿಸಲಾಗಿದೆ. ಆದರೆ, ಹಲ್ಲೆ ನಡೆಸಿರುವ ಪೊಲೀಸ್ ಸಿಬ್ಬಂದಿ ಯಾರೆಂದು ಗುರುತಿಸಲು ಸಾಧ್ಯವಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
‘ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದಾಗ ಒಬ್ಬ ವ್ಯಕ್ತಿ ನನ್ನನ್ನು ನೋಡಿ ನಿಂದಿಸುತ್ತಿದ್ದ. ಈ ಬಗ್ಗೆ ನಾನು ಪೊಲೀಸ್ ಸಿಬ್ಬಂದಿಗೆ ತಿಳಿಸಿದೆ. ಆದರೆ ಆತ ನನ್ನ ಮೇಲೆಯೇ ಹಲ್ಲೆ ಮಾಡಲು ಪ್ರಾರಂಭಿಸಿದ. ನನಗೆ ಆ ಪೊಲೀಸನ ಪರಿಚಯವಿಲ್ಲ’ವೆಂದು ಹಲ್ಲೆಗೊಳಗಾದ ವೃದ್ಧ ಗೋಪಾಲ್ ಪ್ರಸಾದ್ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಕಾರಿಗಳು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.