Commonwealth Games 2022: ಕಾಮನ್‌ವೆಲ್ತ್ ಗೇಮ್ಸ್‌ನ 4ನೇ ದಿನದ ಪೂರ್ಣ ವೇಳಾಪಟ್ಟಿ ಇಲ್ಲಿದೆ

ಇಂದು ಭಾರತದ ಗಮನ ನಾಲ್ಕನೇ ದಿನದತ್ತ ಇದೆ. ಕಾರಣ ಅಮಿತ್ ಪಂಗಲ್ ಅವರು ಇಂದು ಬಾಕ್ಸಿಂಗ್‌ನಲ್ಲಿ ಅಬ್ಬರಿಸಲಿದ್ದಾರೆ. ಇನ್ನೊಂದೆಡೆ ಭಾರತೀಯ ಪುರುಷರ ಹಾಕಿ ತಂಡವು ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದೆ. ಜೊತೆಗೆ ಬ್ಯಾಡ್ಮಿಂಟನ್‌ನಲ್ಲಿ ಭಾರತ ತಂಡವು ಮಿಶ್ರ ತಂಡ ಸ್ಪರ್ಧೆಯಲ್ಲಿ ಫೈನಲ್‌ಗೆ ಪ್ರವೇಶಿಸುವ ಭರವಸೆ ಹೊಂದಿದೆ.

Written by - Bhavishya Shetty | Last Updated : Aug 1, 2022, 09:53 AM IST
  • ಭಾರತದ ಗಮನ ಇಂದು ನಾಲ್ಕನೇ ದಿನದತ್ತ ಇದೆ
  • ಭಾರತೀಯ ಪುರುಷರ ಹಾಕಿ ತಂಡವು ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದೆ
  • ಕಾಮನ್‌ವೆಲ್ತ್ ಗೇಮ್ಸ್‌ನ 4ನೇ ದಿನದ ಪೂರ್ಣ ವೇಳಾಪಟ್ಟಿ ಹೀಗಿದೆ
Commonwealth Games 2022: ಕಾಮನ್‌ವೆಲ್ತ್ ಗೇಮ್ಸ್‌ನ 4ನೇ ದಿನದ ಪೂರ್ಣ ವೇಳಾಪಟ್ಟಿ ಇಲ್ಲಿದೆ title=
Commonwealth Games

ಕಾಮನ್‌ವೆಲ್ತ್ ಕ್ರೀಡಾಕೂಟದ ಮೂರನೇ ದಿನ ಭಾರತ ಪ್ರಾಬಲ್ಯ ಮೆರೆದಿದ್ದು, ತಮ್ಮ ಪದಕಗಳ ಬುಟ್ಟಿಗೆ ಎರಡು ಚಿನ್ನದ ಪದಕವನ್ನು ಸೇರಿಸಿಕೊಂಡಿದೆ. ವೇಟ್‌ಲಿಫ್ಟರ್‌ಗಳಾದ ಜೆರೆಮಿ ಲಾಲ್ರಿನ್ನುಂಗಾ ಮತ್ತು ಅಚಿಂತಾ ಶೆಯುಲಿ ಕ್ರಮವಾಗಿ 67 ಕೆಜಿ ಮತ್ತು 73 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ. ಭಾರತೀಯ ಪುರುಷರ ಟೇಬಲ್ ಟೆನಿಸ್ ತಂಡವೂ ಸೆಮಿಫೈನಲ್‌ಗೆ ಮುನ್ನಡೆದರೆ, ಪುರುಷರ ಹಾಕಿ ತಂಡವು ಘಾನಾದ ಸವಾಲನ್ನು ಬದಿಗೊತ್ತಿ ತನ್ನ ಅಭಿಯಾನವನ್ನು ಮುಂದುವರೆಸಿದೆ. ಬ್ಯಾಡ್ಮಿಂಟನ್‌ನಲ್ಲೂ ಭಾರತ ಮಿಶ್ರ ತಂಡ ಸ್ಪರ್ಧೆಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. 

ಇದನ್ನೂ ಓದಿ: ಇಂದಿನಿಂದ ಬದಲಾಗಿದೆ ಈ ನಿಯಮಗಳು, ಜನಸಾಮಾನ್ಯರ ಮೇಲೆ ಆಗಲಿದೆ ಭಾರೀ ಪರಿಣಾಮ

ಇಂದು ಭಾರತದ ಗಮನ ನಾಲ್ಕನೇ ದಿನದತ್ತ ಇದೆ. ಕಾರಣ ಅಮಿತ್ ಪಂಗಲ್ ಅವರು ಇಂದು ಬಾಕ್ಸಿಂಗ್‌ನಲ್ಲಿ ಅಬ್ಬರಿಸಲಿದ್ದಾರೆ. ಇನ್ನೊಂದೆಡೆ ಭಾರತೀಯ ಪುರುಷರ ಹಾಕಿ ತಂಡವು ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದೆ. ಜೊತೆಗೆ ಬ್ಯಾಡ್ಮಿಂಟನ್‌ನಲ್ಲಿ ಭಾರತ ತಂಡವು ಮಿಶ್ರ ತಂಡ ಸ್ಪರ್ಧೆಯಲ್ಲಿ ಫೈನಲ್‌ಗೆ ಪ್ರವೇಶಿಸುವ ಭರವಸೆ ಹೊಂದಿದೆ.

ಕಾಮನ್‌ವೆಲ್ತ್ ಗೇಮ್ಸ್‌ನ 4ನೇ ದಿನದ ಪೂರ್ಣ ವೇಳಾಪಟ್ಟಿ : 
ಲಾನ್ ಬೌಲ್ಸ್ (1 PM)-- ಮಹಿಳೆಯರ ನಾಲ್ಕು ಸೆಮಿ-ಫೈನಲ್‌ಗಳು
ವೇಟ್ ಲಿಫ್ಟಿಂಗ್ (2PM)-- ಪುರುಷರ 81 ಕೆಜಿ (ಅಜಯ್ ಸಿಂಗ್), ಮಹಿಳೆಯರ 71 ಕೆಜಿ (ಹರ್ಜಿಂದರ್ ಕೌರ್ 11 PM)

ಜೂಡೋ (2:30 PM)
ಪುರುಷರ 66 ಕೆಜಿ ಎಲಿಮಿನೇಷನ್ ರೌಂಡ್ ಆಫ್ 16 (ಜಸ್ಲೀನ್ ಸಿಂಗ್ ಸೈನಿ ವರ್ಸಸ್ ವನವಾಟುವಿನ ಮ್ಯಾಕ್ಸೆನ್ಸ್ ಕುಗೋಲಾ)
ಪುರುಷರ 60 ಕೆಜಿ ಎಲಿಮಿನೇಷನ್ ಸುತ್ತು 16 (ವಿಜಯ್ ಕುಮಾರ್ ಯಾದವ್ ವಿರುದ್ಧ ವಿನ್ಸ್ಲಿ ಗಂಗಯಾ)
ಮಹಿಳೆಯರ 48 ಕೆಜಿ ಕ್ವಾರ್ಟರ್ ಫೈನಲ್ಸ್ (ದೇವಿಲಾ ವಿರುದ್ಧ ಬಾನ್‌ಫೇಸ್)
ಮಹಿಳೆಯರ 57 ಕೆಜಿ ಎಲಿಮಿನೇಷನ್ ಸುತ್ತು 16 (ಸುಚಿಕಾ ತರಿಯಾಲ್ ವಿರುದ್ಧ ರೀಟಾ ರಬಿಂದಾ)

ಈಜು (3:51PM)
ಪುರುಷರ 100 ಮೀ ಬಟರ್‌ಫ್ಲೈ ಹೀಟ್ 6 (ಸಾಜನ್ ಪ್ರಕಾಶ್)
ಪುರುಷರ 100 ಮೀ ಬಟರ್‌ಫ್ಲೈ ಸೆಮಿಫೈನಲ್ (ಸಾಜನ್ ಪ್ರಕಾಶ್-12:27AM)
ಪುರುಷರ 50 ಮೀ ಬ್ಯಾಕ್‌ಸ್ಟ್ರೋಕ್ ಫೈನಲ್ (ಶ್ರೀಹರಿ ನಟರಾಜ್ 1:07 AM)

ಬ್ಯಾಡ್ಮಿಂಟನ್ 3.30PM/10 PM)-- ಮಿಶ್ರ ತಂಡ ಸೆಮಿಫೈನಲ್

ಸ್ಕ್ವಾಷ್ (4:30 PM)
ಮಹಿಳೆಯರ ಸಿಂಗಲ್ಸ್ ಪ್ಲೇಟ್ ಕ್ವಾರ್ಟರ್‌ಫೈನಲ್‌ಗಳು (ಸುನಯ್ನಾ ಸಾರಾ ಕುರುವಿಲ್ಲಾ ವಿರುದ್ಧ ಟಿಬಿಡಿ)
ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ (ಜೋಶನಾ ಚಿನಪ್ಪ ವಿರುದ್ಧ ಕೆನಡಾದ ಹಾಲಿ ನಾಟನ್-ಸಂಜೆ 6)
ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ಗಳು (ಸೌರವ್ ಘೋಷಾಲ್ ವಿರುದ್ಧ ಸ್ಕಾಟ್ಲೆಂಡ್‌ನ ಗ್ರೆಗ್ ಲೋಬ್ಬನ್ -ಸಂಜೆ 6:45 )

ಬಾಕ್ಸಿಂಗ್ (4.45 PM)
48-51kg ಗಿಂತ ಹೆಚ್ಚು (16 ರ ಸುತ್ತು, ಅಮಿತ್ ಪಂಗಲ್ ವಿರುದ್ಧ ನಮ್ರಿ ಬೆರ್ರಿ)
54-57kg ಗಿಂತ ಹೆಚ್ಚು (16 ರ ಸುತ್ತು, ಹುಸಾಮುದ್ದೀನ್ ಮೊಹಮ್ಮದ್ vs ಮೊಹಮ್ಮದ್ ಸಲೀಂ ಹೊಸೇನ್, 6 PM)
75-80kg ಗಿಂತ ಹೆಚ್ಚು (16 ರ ಸುತ್ತು, ಆಶಿಶ್ ಕುಮಾರ್ ವಿರುದ್ಧ ಟ್ರಾವಿಸ್ ಟಪಟುಟೊವಾ 1 AM)

ಸೈಕ್ಲಿಂಗ್ (6.32PM)
ಮಹಿಳೆಯರ ಕೀರಿನ್ ಮೊದಲ ಸುತ್ತು (ತ್ರಿಯಾಶಾ ಪೌಲ್, ಸುಶಿಕಲಾ ಅಗಾಶೆ, ಮಯೂರಿ ಲೂಟ್)
ಪುರುಷರ 40 ಕಿ.ಮೀ ಅಂಕಗಳ ಓಟ- ಅರ್ಹತಾ ಸುತ್ತು (ನಮನ್ ಕಪಿಲ್, ವೆಂಕಪ್ಪ ಕೆಂಗಲಗುತ್ತಿ, ದಿನೇಶ್ ಕುಮಾರ್, ವಿಷಜೀತ್ ಸಿಂಗ್, ಸಂಜೆ 6:52)
ಪುರುಷರ 100 ಮೀ. ಟೈಮ್ ಟ್ರಯಲ್ ಫೈನಲ್ಸ್ (ರೊನಾಲ್ಡೊ ಲೈಟೊಂಜಮ್, ಡೇವಿಡ್ ಬೆಕ್‌ಹ್ಯಾಮ್, 8:02 PM)
ಮಹಿಳೆಯರ 10km ಸ್ಕ್ರ್ಯಾಚ್ ರೇಸ್ ಫೈನಲ್ (ಮೀನಾಕ್ಷಿ, 9:37 PM)

ಹಾಕಿ (8:30 PM) -- ಪುರುಷರ ಪೂಲ್ B ಭಾರತ vs ಇಂಗ್ಲೆಂಡ್

ಟೇಬಲ್ ಟೆನ್ನಿಸ್ (11:30 PM) ಪುರುಷರ ತಂಡ ಸೆಮಿಫೈನಲ್ (ಭಾರತ ವಿರುದ್ಧ ನೈಜೀರಿಯಾ)

ಪ್ಯಾರಾ-ಈಜು (12:46 AM) ಪುರುಷರ 50 ಮೀ ಫ್ರೀಸ್ಟೈಲ್ ಫೈನಲ್ (ನಿರಂಜನ್ ಮುಕುಂದನ್, ಸುಯಶ್ ನಾರಾಯಣ್, ಜಾಧವ್)

ಇದನ್ನೂ ಓದಿ: ಆಗಸ್ಟ್ ಮೊದಲ ದಿನವೇ ಸಿಹಿ ಸುದ್ದಿ : ಎಲ್‌ಪಿಜಿ ಬೆಲೆಯಲ್ಲಿ ಭಾರೀ ಇಳಿಕೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News