ಒಂದೆಡೆ ‘ಜನತಾ ಜಲಧಾರೆ’ ಮತ್ತೊಂದೆಡೆ ಕಣ್ಣೀರಧಾರೆ: ಬಿಜೆಪಿ ವ್ಯಂಗ್ಯ

ಮುಂದಿನ ಚುನಾವಣೆಯಲ್ಲಿ ಕಣ್ಣೀರಿನ ಮೂಲಕವಾದರೂ ಇರುವ 30 ಉಳಿಸಿಕೊಳ್ಳಲು ಜೆಡಿಎಸ್‌ ಹೆಣಗಾಡುತ್ತಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.

Written by - Puttaraj K Alur | Last Updated : Aug 1, 2022, 12:19 PM IST
  • ಜನತಾ ಜಲಧಾರೆ ಕಾರ್ಯಕ್ರಮ ಮೀರಿಸುವ ರೀತಿ ಇನ್ನೊಂದು ಯೋಜನೆ ರೂಪಿಸಿದ್ದೀರಿ
  • ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ಶುಭಾಶಯಗಳು, ಜೆಡಿಎಸ್ ಕಣ್ಣೀರಧಾರೆ ಯಶಸ್ವಿಯಾಗಲಿ
  • ಇದು ಮುಂದಿನ ಚುನಾವಣೆ ನಂತರ JDS ಮುಳುಗಲಿದೆ ಎಂಬುದರ ಸೂಚನೆ ಎಂದು ಬಿಜೆಪಿ ಟೀಕೆ
ಒಂದೆಡೆ ‘ಜನತಾ ಜಲಧಾರೆ’ ಮತ್ತೊಂದೆಡೆ ಕಣ್ಣೀರಧಾರೆ: ಬಿಜೆಪಿ ವ್ಯಂಗ್ಯ  title=
ಜೆಡಿಎಸ್ ಕಣ್ಣೀರೋತ್ಸವ ಎಂದು ಬಿಜೆಪಿ ಟೀಕೆ

ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಆಯೋಜಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇಗೇಗೌಡರ ಸ್ಥಿತಿ ಕಂಡು ಎಚ್‍.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ಕಣ್ಣೀರು ಹಾಕಿದ್ದರು. ಜೆಡಿಎಸ್ ನಾಯಕರು ಹರಿಸಿರುವ ಕಣ್ಣೀರಧಾರೆಗೆ ಬಿಜೆಪಿ ವ್ಯಂಗ್ಯವಾಡಿದೆ.

#ಜೆಡಿಎಸ್‌ಕಣ್ಣೀರೋತ್ಸವ ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಶುಭಾಶಯಗಳು. ನಿಮ್ಮ ಜನತಾ ಜಲಧಾರೆ ಕಾರ್ಯಕ್ರಮವನ್ನು ಮೀರಿಸುವ ರೀತಿ ಇನ್ನೊಂದು ಯೋಜನೆ ರೂಪಿಸಿದ್ದೀರಿ. ಜೆಡಿಎಸ್ ಕಣ್ಣೀರಧಾರೆ ಯಶಸ್ವಿಯಾಗಲಿ!’ ಎಂದು ಟೀಕಿಸಿದೆ.

ಇದನ್ನೂ ಓದಿ: ʼಕರಾವಳಿಯಲ್ಲಿ ದೊಡ್ಡಮಟ್ಟದ ಕೋಮು ಸಂಘರ್ಷ ಸ್ಫೋಟʼ ವದಂತಿ: ಇದು ಸುಳ್ಳು ಸುದ್ದಿ ಎಂದ ಪೊಲೀಸ್‌

‘ಅಳು ಸಹಜ ಧರ್ಮಅಳಿಸುವುದು ಪರಧರ್ಮ. ಅಳಿಸುತಲಿ ಅಳಿಸುವುದು ಅತಿಶಯದ ಕುಮಾರಸ್ವಾಮಿ ಧರ್ಮ! ಈ ಬಾರಿ ಪೂರ್ಣ ಬಹುಮತ ನೀಡದಿದ್ದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ಕಣ್ಣೀರು ಸುರಿಸುತ್ತಿರುವ ಕುಮಾರಸ್ವಾಮಿ ಅವರು ಸಿದ್ದರಾಮೋತ್ಸವಕ್ಕೆ ಪೈಪೋಟಿ ನೀಡುತ್ತಿದ್ದಾರೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಒಂದೆಡೆ ಜನತಾ ಜಲಧಾರೆ ಮತ್ತೊಂದೆಡೆ ಕಣ್ಣೀರಧಾರೆ. ಒಟ್ಟಿನಲ್ಲಿ ನೀರೋ, ನೀರು! ಮುಂದಿನ ಚುನಾವಣೆಯ ನಂತರ ಜೆಡಿಎಸ್‌ ಪಕ್ಷ ಮುಳುಗಲಿದೆ ಎಂಬುದರ ಸೂಚನೆಯಿದು. ಜೆಡಿಎಸ್ ದೋಣಿಯಲ್ಲಿ ಅಪ್ಪ, ಮಕ್ಕಳು, ಮೊಮ್ಮಕ್ಕಳಷ್ಟೇ ದಡ ಸೇರಬಹುದು, ಮಿಕ್ಕವರು ಮುಳುಗುವುದು ಪಕ್ಕಾ!’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: "ಸಮಾಜವಿರೋಧಿ ಶಕ್ತಿಗಳ ವಿರುದ್ದ ಹೋರಾಡುತ್ತಿರುವ ತಮಿಳು ಬಂಧುಗಳು ನಮಗೆಲ್ಲ ಸ್ಪೂರ್ತಿ"

‘ಮುಂದಿನ ಚುನಾವಣೆಯಲ್ಲಿ ಕಣ್ಣೀರಿನ ಮೂಲಕವಾದರೂ ಇರುವ 30 ಉಳಿಸಿಕೊಳ್ಳಲು ಜೆಡಿಎಸ್‌ ಹೆಣಗಾಡುತ್ತಿದೆ. ಹವಾಮಾನ ಇಲಾಖೆ ನೀಡುವ ಮಳೆಯ ಲೆಕ್ಕವಾದರೂ ತಪ್ಪಬಹುದು ಆದರೆ ಚುನಾವಣೆ ಹತ್ತಿರದಲ್ಲಿರುವಾಗ ಜೆಡಿಎಸ್‌ ನಾಯಕರ ಕಣ್ಣೀರಿನ ಮಳೆಯ ಲೆಕ್ಕ ಎಂದಿಗೂ ತಪ್ಪದು. ಇಲ್ಲದ ಕಣ್ಣೀರು ಒತ್ತರಿಸಿ ಬರುವುದು ಇಲ್ಲಿ ಸಾಮಾನ್ಯ!’ವೆಂದು ಬಿಜೆಪಿ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News