CWG 2022: ಕುಸ್ತಿಯಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡ ಪೂಜಾ ಗೆಹಲೋತ್, ಭಾರತಕ್ಕೆ 31ನೇ ಪದಕ

Pooja Gehlot wins Bronze Medal: ಸ್ಕಾಟ್ಲೆಂಡ್‌ನ ಕ್ರಿಸ್ಟೆಲ್ಲೆ ಲೆಮೊಫಾಕ್ ಅವರನ್ನು 12-2 ಅಂಕಗಳಿಂದ ಸೋಲಿಸಿ, ಕುಸ್ತಿಯಲ್ಲಿ ಭಾರತಕ್ಕೆ 7ನೇ ಪದಕ ತಂದುಕೊಟ್ಟಿದ್ದಾರೆ.  

Written by - Nitin Tabib | Last Updated : Aug 6, 2022, 10:14 PM IST
  • ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಕಂಚು
  • ಫ್ರೀ ಸ್ಟೈಲ್ ಕುಸ್ತಿಯಲ್ಲಿ ಪದಕ ತಂದು ಕೊಟ್ಟ ಪೂಜಾ ಗೆಹಲೋಟ್
CWG 2022: ಕುಸ್ತಿಯಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡ ಪೂಜಾ ಗೆಹಲೋತ್, ಭಾರತಕ್ಕೆ 31ನೇ ಪದಕ title=
Commonwealth Games 2022

Pooja Gehlot wins Bronze Medal in CWG 2022: ಕುಸ್ತಿಯಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭಿಸಿದೆ. ಈ ಬಾರಿ ಭಾರತಕ್ಕೆ ಕುಸ್ತಿಪಟು ಪೂಜಾ ಗೆಹ್ಲೋಟ್ ಕಂಚಿನ ಪದಕ ಗೆದ್ದು ತಂದಿದ್ದಾರೆ. ಫ್ರೀಸ್ಟೈಲ್ ಕುಸ್ತಿಯ 50 ಕೆಜಿ ವಿಭಾಗದಲ್ಲಿ ಅವರು ಕಂಚಿನ ಪದಕ ಗೆದ್ದಿದ್ದಾರೆ. ಪೂಜಾ 12-2 ಅಂಕಗಳ ಮೂಲಕ ಸ್ಕಾಟ್ಲೆಂಡ್‌ನ ಕ್ರಿಸ್ಟೆಲ್ಲೆ ಲೆಮೊಫಾಕ್ ಅವರನ್ನು ಸೋಲಿಸಿದ್ದಾರೆ. ಇದು ಕುಸ್ತಿಯಲ್ಲಿ ಭಾರತಕ್ಕೆ ಏಳನೇ ಪದಕವಾಗಿದೆ.

ಇದು 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ 31 ನೇ ಪದಕವಾಗಿದೆ. ಇದೇ ವೇಳೆ ಇದು ಕುಸ್ತಿಯಲ್ಲಿ ಭಾರತಕ್ಕೆ ಏಳನೇ ಪದಕ ಮತ್ತು ಮೂರನೇ ಕಂಚಿನ ಪದಕವಾಗಿದೆ. ನಿನ್ನೆ ಮತ್ತು ಮೊನ್ನೆ ದಿವ್ಯಾ ಕಕ್ರಾನ್ ಮತ್ತು ಮೋಹಿತ್ ಗ್ರೆವಾಲ್ ಕೂಡ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು.

ಇದನ್ನೂ ಓದಿ-CWG 2022: ಭಾರತೀಯ ಪುರುಷರ ತಂಡದ ಕಮಾಲ್ ! ಲಾನ್ ಬೌಲ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ

ಬಾಕ್ಸಿಂಗ್‌ನಲ್ಲಿ ಜಾಸ್ಮಿನ್ ಕಂಚಿನ ಪದಕ ಗೆದ್ದಿದ್ದಾರೆ
ಕಾಮನ್‌ವೆಲ್ತ್ ಗೇಮ್ಸ್ 2022 ರ 9 ನೇ ದಿನವಾದ ಇಂದು ಭಾರತೀಯ ಆಟಗಾರರ ಅದ್ಭುತ ಪ್ರದರ್ಶನ ಮುಂದುವರೆದಿದೆ. ಇದೀಗ ಮಹಿಳೆಯರ 57-60 ಕೆಜಿ ಲೈಟ್ ವೇಟ್ ಬಾಕ್ಸಿಂಗ್ ವಿಭಾಗದಲ್ಲಿ ಜಾಸ್ಮಿನ್ ಮತ್ತೊಂದು ಪದಕವನ್ನು ಭಾರತದ ಪದಕಪಟ್ಟಿಗೆ ಸೇರಿಸಿದ್ದಾರೆ. ಜಾಸ್ಮೀನ್ ಕಂಚಿನ ಪದಕವನ್ನು ಗೆದ್ದಿದ್ದಾರೆ. ಇದಕ್ಕೂ ಮೊದಲು ಭಾರತದ ಮಹಿಳಾ ಬಾಕ್ಸರ್ ಸೆಮಿಫೈನಲ್‌ನಲ್ಲಿ ಸೋಲನ್ನು ಅನುಭವಿಸಿದ್ದಾರೆ, ಹೀಗಾಗಿ ಅವರು ಕಂಚಿನ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವೇಳೆ , ಇದು ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತಕ್ಕೆ 30 ನೇ ಪದಕವಾಗಿದೆ.

ಇದನ್ನೂ ಓದಿ-CWG 2022: ಪಾಕ್ ಕುಸ್ತಿಪಟುವನ್ನು ಸದೆಬಡಿದು ಭಾರತಕ್ಕೆ ಬೆಳ್ಳಿ ಪದಕ ಖಚಿತಪಡಿಸಿದ ರವಿ ದಹಿಯಾ

ಜಾಸ್ಮಿನ್ ನ್ಯೂಜಿಲೆಂಡ್‌ನ ಟ್ರಾಯ್ ಗಾರ್ಟನ್ ಅವರನ್ನು ಸೋಲಿಸಿದ್ದಾರೆ
ಭಾರತದ ಬಾಕ್ಸರ್ ಜಾಸ್ಮಿನ್ ಕ್ವಾರ್ಟರ್ ಫೈನಲ್‌ನಲ್ಲಿ ನ್ಯೂಜಿಲೆಂಡ್‌ನ ಟ್ರಾಯ್ ಗಾರ್ಟನ್ ಅವರನ್ನು ಸೋಲಿಸಿದ್ದಾರೆ. ತನ್ಮೂಲಕ ಬಾಕ್ಸಿಂಗ್ ನಲ್ಲಿ ಭಾರತಕ್ಕೆ 5ನೇ ಪದಕವನ್ನು ಜಾಸ್ಮಿನ್ ಖಚಿತಪಡಿಸಿದ್ದಾರೆ. ಜಾಸ್ಮಿನ್ ಕ್ವಾರ್ಟರ್ ಫೈನಲ್‌ನಲ್ಲಿ ನ್ಯೂಜಿಲೆಂಡ್‌ನ ಟ್ರಾಯ್ ಗಾರ್ಟನ್ ಅವರನ್ನು 4-1 ರಿಂದ ಸೋಲಿಸಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News