/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ಕೂದಲಿಗೆ ಮನೆಮದ್ದು: ಇತ್ತೀಚಿನ ಜೀವನಶೈಲಿಯಲ್ಲಿ ಕೂದಲು ಉದುರುವಿಕೆ ಒಂದು ಸಾಮಾನ್ಯ ಸಮಸ್ಯೆ ಆಗಿದೆ. ಕೂದಲು ಉದುರುವಿಕೆ ಹಲವರಿಗೆ ಚಿಂತೆಯ ವಿಷಯವಾಗಿದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೂದಲು ಉದುರುವಿಕೆ ಸಮಸ್ಯೆಯಿಂದ ಪರಿಹಾರ ಪಡೆಯಲು ಮತ್ತು ನಿಮ್ಮ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ನೀವು ಬಯಸಿದರೆ ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ನಿಮಗೆ ಸಹಕಾರಿ ಆಗಿವೆ. ಆರೋಗ್ಯಕರವಾದ ದಪ್ಪವಾದ, ಉದ್ದವಾದ, ಹೊಳೆಯುವ ಕೂದಲು ನಿಮ್ಮದಾಗಬೇಕಾದರೆ ಅಕ್ಕಿ ಮತ್ತು ಮೆಂತ್ಯ ನಿಮಗೆ ಸಹಕಾರಿ ಆಗಿದೆ.

ಅಕ್ಕಿ ನೀರಿನಿಂದ ಪರಿಹರಿಸಲಾಗದ ಕೂದಲಿನ ಸಮಸ್ಯೆ ಇಲ್ಲ. ಇದಕ್ಕಿಂತ ಹೆಚ್ಚಾಗಿ, ಇದು ವಿಟಮಿನ್‌ಗಳು, ಅಮೈನೋ ಆಮ್ಲಗಳು ಮತ್ತು ಸತು, ಮೆಗ್ನೀಸಿಯಮ್, ವಿಟಮಿನ್ ಬಿ ಮತ್ತು ಸಿ ಮುಂತಾದ ಇತರ ಖನಿಜಗಳಿಂದ ತುಂಬಿರುತ್ತದೆ. ಜೊತೆಗೆ, ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಮೆಂತ್ಯ ಬೀಜಗಳಲ್ಲಿ ಫೋಲಿಕ್ ಆಮ್ಲ, ವಿಟಮಿನ್ ಎ, ಕೆ ಮತ್ತು ಸಿ ಸಮೃದ್ಧವಾಗಿದೆ ಮತ್ತು ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳ ಉಗ್ರಾಣವಾಗಿದೆ. ಈ ಮಿಶ್ರಣವನ್ನು ಕೂದಲಿಗೆ ಬಳಸುವುದರಿಂದ ಹಲವು ರೀತಿಯ ಪ್ರಯೋಜನಗಳನ್ನು ಪಡೆಯಬಹುದು.

ಇದನ್ನೂ ಓದಿ- ಕೇವಲ ಟೆನ್ಶನ್ ಮಾತ್ರ ಅಲ್ಲ ಈ ಕಾರಣಗಳಿಂದ ಕೂಡಾ ತಲೆ ಕೂದಲು ಬೆಳ್ಳಗಾಗುತ್ತದೆ

ಕೂದಲಿಗೆ ಅಕ್ಕಿ ಮತ್ತು ಮೆಂತ್ಯ ಮಿಶ್ರಣದ ಪ್ರಯೋಜನಗಳ ಬಗ್ಗೆ ತಿಳಿಯೋಣ...
* ಅಕ್ಕಿ ಮೆಂತ್ಯವನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ. ಇದು ತಲೆಹೊಟ್ಟು ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
* ಅಕ್ಕಿ ಮತ್ತು ಮೆಂತ್ಯ ಕೂಡ ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಎರಡರ ಮಿಶ್ರಣದಿಂದ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಇದನ್ನೂ ಓದಿ- Kidney ಯಲ್ಲಿ ಸಮಸ್ಯೆ ಇದ್ದರೆ ಶರೀರ ಈ ವಿಚಿತ್ರ ಸಂಕೇತಗಳನ್ನು ನೀಡುತ್ತದೆ, ನಿರ್ಲಕ್ಷಿಸಬೇಡಿ

* ನಿಮ್ಮ ಕೂದಲನ್ನು ಹೊಳೆಯುವಂತೆ ಮಾಡಲು ಈ ಮಿಶ್ರಣವು ತುಂಬಾ ಉಪಯುಕ್ತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ಅನ್ವಯಿಸುವ ಮೂಲಕ, ಹೊಳಪು ಕೂದಲಿನಲ್ಲಿ ಉಳಿಯುತ್ತದೆ.
* ಮೆಂತ್ಯದ ಮಿಶ್ರಣದಿಂದ ಕೂದಲಿನ ಬೆಳವಣಿಗೆಗೂ ಅನುಕೂಲವಾಗಲಿದೆ. ಇದರಿಂದಾಗಿ ಕೂದಲು ವೇಗವಾಗಿ ಬೆಳೆಯುವುದರ ಜೊತೆಗೆ ಹೊಸ ಕೂದಲು ಬೆಳೆಯಲು ನೆರವಾಗುತ್ತದೆ ಎಂದು ಹೇಳಲಾಗುತ್ತದೆ.

ಅಕ್ಕಿ-ಮೆಂತ್ಯ ಮಿಶ್ರಣವನ್ನು ಕೂದಲಿಗೆ ಬಳಸುವುದು ಹೇಗೆ?
ಅಕ್ಕಿ-ಮೆಂತ್ಯ ಮಿಶ್ರಣವನ್ನು ಕೂದಲಿಗೆ ಬಳಸಲು ಒಂದು ಪಾತ್ರೆಯಲ್ಲಿ ಎರಡರಿಂದ ಮೂರು ಗ್ಲಾಸ್ ನೀರನ್ನು ಕುದಿಸಿ. ನಂತರ ಈ ನೀರಿನಲ್ಲಿ ಎರಡರಿಂದ ಮೂರು ಚಮಚ ಮೆಂತ್ಯ ಮತ್ತು ಅಕ್ಕಿಯನ್ನು ಹಾಕಿ ಕುದಿಸಿ. ಬಳಿಕ ಈ ಮಿಶ್ರಣವನ್ನು ಹಾಗೆಯೇ ಬಿಡಿ. ನೀರು ತಂಪಾದ ನಂತರ ಅದನ್ನು ಕೂದಲಿಗೆ ಅನ್ವಯಿಸಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾನ್ಯ ಮನೆಮದ್ದುಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
Use this one ingredient with rice to get relief from many hair problems
News Source: 
Home Title: 

ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಲು ಅಕ್ಕಿಯೊಂದಿಗೆ ಈ ಒಂದು ಪದಾರ್ಥವನ್ನು ಬಳಸಿ

ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಲು ಅಕ್ಕಿಯೊಂದಿಗೆ ಈ ಒಂದು ಪದಾರ್ಥವನ್ನು ಬಳಸಿ
Caption: 
Hair care tips
Yes
Is Blog?: 
No
Tags: 
Facebook Instant Article: 
Yes
Highlights: 

ಅಕ್ಕಿ ನೀರನ್ನು ಕೂದಲಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಅಕ್ಕಿ ಮತ್ತು ಮೆಂತ್ಯ ನೀರಿನ ಮಿಶ್ರಣವು ಕೂದಲಿನ ನೈಸರ್ಗಿಕ ಆರೋಗ್ಯಕ್ಕೆ ಸಹಕಾರಿ ಆಗಿದೆ.

ಮೆಂತ್ಯ ಬೀಜಗಳು ಕೂದಲು ಉದುರುವಿಕೆಯನ್ನು ನಿಲ್ಲಿಸುವ ಮತ್ತು ಆರೋಗ್ಯಕರ ಕೂದಲು ಬೆಳವಣಿಗೆಗೆ ಅನುಕೂಲಕರವಾಗಿದೆ 

Mobile Title: 
ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಲು ಅಕ್ಕಿಯೊಂದಿಗೆ ಈ ಒಂದು ಪದಾರ್ಥವನ್ನು ಬಳಸಿ
Yashaswini V
Publish Later: 
No
Publish At: 
Tuesday, August 16, 2022 - 11:46
Created By: 
Yashaswini V
Updated By: 
Yashaswini V
Published By: 
Yashaswini V
Request Count: 
2
Is Breaking News: 
No