‘ಬಿಗ್’ಮನೆಯಲ್ಲಿ ಸಾಲ ಕೊಟ್ಟಿದ್ದಾರಂತೆ ಸೋನುಗೌಡ! ವೈರಲ್ ಹುಡುಗಿಯ ವಹಿವಾಟಿನ ಕಥೆ ಏನು?

ಸೋನು ಶ್ರೀನಿವಾಸ ಗೌಡ ವೈರಲ್ ಹುಡುಗಿ ಎಂದೇ ಫೇಮಸ್, ಪಟ ಪಟ ಎಂದು ಮಾತನಾಡುವ ಸೋನು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಮೆಚ್ಚಿನ ಹುಡುಗಿಯಾಗಿ ಗುರುತಿಸಿಕೊಂಡಿದ್ದಾಳೆ. ಟ್ರೋಲ್ ಮಾಡೋ ಮೂಲಕ ಹೆಸರು ಗಳಿಸಿದ್ದ ಸೋನು ಬಿಗ್ ಬಾಸ್ ಮನೆಯಲ್ಲಿ ತಮ್ಮ ವಿಭಿನ್ನ ನಡವಳಿಕೆಯಿಂದ ಎಲ್ಲರ ಮನಗೆದ್ದಿದ್ದಾರೆ.

Written by - Bhavishya Shetty | Last Updated : Aug 28, 2022, 11:45 AM IST
    • ಸೋನು ಶ್ರೀನಿವಾಸ ಗೌಡ ವೈರಲ್ ಹುಡುಗಿ ಎಂದೇ ಫೇಮಸ್
    • ಬಿಗ್ ಬಾಸ್ ಮನೆಯಲ್ಲಿ ಇದೀಗ ಸೋನು ಗೌಡ ಸಾಲ ಕೊಡ್ತಿದ್ದಾರಂತೆ
    • ವಾರದ ಕಥೆ ಕಿಚ್ಚನ ಜೊತೆ ವೇದಿಕೆಯಲ್ಲಿ ಈ ಟಾಪಿಕ್ ಹೈಲೈಟ್ ಮಾಡಿದ ಕಿಚ್ಚ ಸುದೀಪ್
‘ಬಿಗ್’ಮನೆಯಲ್ಲಿ ಸಾಲ ಕೊಟ್ಟಿದ್ದಾರಂತೆ ಸೋನುಗೌಡ! ವೈರಲ್ ಹುಡುಗಿಯ ವಹಿವಾಟಿನ ಕಥೆ ಏನು?  title=
Bigg Boss OTT Season

ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ಒಂದರ ಅರ್ಧ ಜರ್ನಿ ಮುಗಿದಿದೆ. ಈಗಾಗಲೇ ಬಿಗ್ ಮನೆಯಿಂದ ಕಿರಣ್ ಯೋಗೇಶ್ವರ್, ಲೋಕೇಶ್, ಅರ್ಜುನ್ ರಮೇಶ್, ಸ್ಪೂರ್ತಿ ಗೌಡ ಮತ್ತು ಕಳೆದ ದಿನ ಉದಯ್ ಸೂರ್ಯ ಔಟ್ ಆಗಿದ್ದಾರೆ. ಯಶಸ್ವಿಯಾಗಿ ನಡೆಯುತ್ತಿರುವ ಬಿಗ್ ಬಾಸ್ ಮನೆಯಲ್ಲಿ ಇದೀಗ ಸೋನು ಗೌಡ ಸಖತ್ ಆಗಿ ಆಟವಾಡುತ್ತಿದ್ದಾರೆ. ಆದರೆ ಆಟದ ಜೊತೆ ಇವರು ವಹಿವಾಟು ಕೂಡ ನಡೆಸುತ್ತಿದ್ದಾರೆ ಎಂದರೆ ನೀವು ನಂಬಲೇ ಬೇಕು. 

ಇದನ್ನೂ ಓದಿ: IND vs PAK: ಬಾಬರ್ ಅಜಮ್‍ಗೆ ಮದುವೆಯಾಗು ಎಂದ ರೋಹಿತ್ ಶರ್ಮಾ!

ಸೋನು ಶ್ರೀನಿವಾಸ ಗೌಡ ವೈರಲ್ ಹುಡುಗಿ ಎಂದೇ ಫೇಮಸ್, ಪಟ ಪಟ ಎಂದು ಮಾತನಾಡುವ ಸೋನು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಮೆಚ್ಚಿನ ಹುಡುಗಿಯಾಗಿ ಗುರುತಿಸಿಕೊಂಡಿದ್ದಾಳೆ. ಟ್ರೋಲ್ ಮಾಡೋ ಮೂಲಕ ಹೆಸರು ಗಳಿಸಿದ್ದ ಸೋನು ಬಿಗ್ ಬಾಸ್ ಮನೆಯಲ್ಲಿ ತಮ್ಮ ವಿಭಿನ್ನ ನಡವಳಿಕೆಯಿಂದ ಎಲ್ಲರ ಮನಗೆದ್ದಿದ್ದಾರೆ.

ಇನ್ನು ಸೋನು ಗೌಡ ಬಿಗ್ ಬಾಸ್ ಮನೆಯಲ್ಲಿ ಸಾಲ ನೀಡಿದ್ದಾರಂತೆ. ಹಣದ ಚಲಾವಣೆ ಇಲ್ಲದಿದ್ದರೂ ಸಾಲ ಹೇಗೆ ನೀಡಿದ್ರು ಎಂದು ಆಲೋಚನೆ ಮಾಡ್ತಾ ಇದ್ದೀರಾ? ಸೋನು ಹಣದ ವ್ಯವಹಾರ ನಡೆಸಿಲ್ಲ, ಬದಲಾಗಿ ತನಗೆ ಬಿಗ್ ಬಾಸ್ ಮನೆಯಲ್ಲಿ ಸಿಕ್ಕ ಹಣ್ಣು ಮತ್ತು ಹಾಲನ್ನು ಇತರ ಸ್ಪರ್ಧಿಗಳ ಜೊತೆ ಹಂಚಿಕೊಂಡಿ ತಿಂದಿದ್ದಾರೆ. ಹೀಗಾಗಿ ಅದನ್ನು ವಾಪಾಸ್ ಕೇಳುತ್ತಿರುವ ಸೋನು, ನಾನು ನಿಮಗೆಲ್ಲ ಸಾಲ ನೀಡಿದ್ದೇನೆ ಎಂದು ತಮಾಷೆ ಮಾಡುತ್ತಿದ್ದಾರೆ.

ಈ ವಿಚಾರವನ್ನು ಕಳೆದ ದಿನ ಬಿಗ್ ಬಾಸ್ ವಾರದ ಕಥೆ ಕಿಚ್ಚನ ಜೊತೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಕೇಳಿದ್ದಾರೆ. ಅದಕ್ಕೆ ನಗುತ್ತಲೇ ಉತ್ತರಿಸಿದ ಸೋನುಗೌಡ, ನನಗೆ ಸೋಮಣ್ಣ ಮಾಚಿಮಾಡ ಅರ್ಧ ಆಪಲ್ ಮತ್ತು ರೂಪೇಶ್ ಒಂದು ಲೋಟ ಹಾಲು ಕೊಡಬೇಕು. ಅದನ್ನು ನಾನು ಅವರಿಗೆ ಸಾಲ ನೀಡಿದ್ದೆ ಎಂದು ಹೇಳಿದ್ದಾರೆ. ಇದಕ್ಕೆ ಕಿಚ್ಚ ಕೂಡ ನಕ್ಕು ನಕ್ಕು ಸುಸ್ತಾಗಿದ್ದಾರೆ. ಅಷ್ಟೇ ಅಲ್ಲದೆ, ಈ ರೀತಿ ವ್ಯಾಪಾರ ನಡೆಸಿರುವುದರ ಬಗ್ಗೆ ಚರ್ಚೆಯನ್ನು ಇದೇ ಮೊದಲ ಬಾರಿಗೆ ವೇದಿಕೆಯಲ್ಲಿ ಮಾಡುತ್ತಿದ್ದೇನೆ ಎಂದು ತಮಾಷೆ ಮಾಡಿದ್ದಾರೆ. 

ಇದನ್ನೂ ಓದಿ: 'ಲೈಗರ್‌' ಸಿನಿಮಾ ಮಾಡಿದ್ದನ್ನೇ ಮರೆತು ಹೋದ್ರಾ ಮೈಕ್‌ ಟೈಸನ್..?

ಸದ್ಯ ಬಿಗ್ ಬಾಸ್ ಓಟಿಟಿ ಸೀಸನ್ ಒಂದು ಸಖತ್ ಆಗಿ ಮನರಂಜನೆ ನೀಡುವುದರ ಜೊತೆ ಯಶಸ್ವಿಯಾಗಿ ನಡೆಯುತ್ತಿದೆ. ಇನ್ನು ಕೇವಲ ಮೂರು ವಾರಗಳು ಮಾತ್ರ ಇದ್ದು, ಇನ್ನಷ್ಟು ಟಫ್ ಆಗಿ ರಿಯಾಲಿಟಿ ಶೋ ನಡೆಯಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News