ನವದೆಹಲಿ: ಭಾರತ ತಂಡವು ಇತ್ತೀಚಿಗೆ 4-1 ರ ಅಂತರದಲ್ಲಿ ಇಂಗ್ಲೆಂಡ್ ವಿರುದ್ದ ಸರಣಿಯನ್ನು ಸೋತಿದೆ.ಈಗ ತಂಡದ ನಾಯಕ ವಿರಾಟ್ ಕೊಹ್ಲಿಗೆ ಟೀಕೆಗಳ ಸುರಿಮಳೆಗಯ್ಯಲಾಗಿದೆ.ಆದರೆ ಭಾರತದ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮಾತ್ರ ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ.
ಇಂಡಿಯಾ ಟಿವಿಗೆ ನೀಡಿರುವ ಹೇಳಿಕೆಯಲ್ಲಿ ಸೌರವ್ ಗಂಗೂಲಿ " ಪೋಸ್ಟ್ ಮಾರ್ಟಮ್ಗಿಂತ ಹೆಚ್ಚಾಗಿ ಇಲ್ಲಿ ಪ್ರತಿಭೆಯನ್ನು ಗುರುತಿಸುವುದು ಮುಖ್ಯ.ಆದ್ದರಿಂದ ಇಲ್ಲಿ ಪ್ರತಿಯೊಂದು ತಂಡವು ಸಹಿತ ಮುಂದೆ ಸಾಗಬೇಕಾಗಿದೆ. ಚೇತೆಶ್ವರ್ ಪುಜಾರ್,ರಹಾನೆ, ಕೆಎಲ್ ರಾಹುಲ್ ಈ ಸರಣಿಯಲ್ಲಿ ಬ್ಯಾಟಿಂಗ್ ಮಾಡಿರುವುದನ್ನು ನೋಡಿದರೆ ಅವರು ಹತ್ತು ಪಟ್ಟು ಉತ್ತಮ ಕ್ರಿಕೆಟ್ ಆಟಗಾರರು. ಆದ್ದರಿಂದ ಕೊಹ್ಲಿ ತನ್ನ ಎಲ್ಲ ಆಟಗಾರರ ಮೂಲಕ ಉತ್ತಮವಾದದ್ದನ್ನು ಹೊರತೆಗೆಯಬೇಕಾಗಿದೆ. ಆದ್ದರಿಂದ ಒಬ್ಬ ನಾಯಕನನು ಮುಂದೆ ಸಾಗಬೇಕಾದರೆ ಜವಾಬ್ದಾರಿಯನ್ನು ಹೊರಬೇಕಾಗಿರುವುದು ಅವಶ್ಯಕವಾಗಿದೆ.
ಒಂದು ವೇಳೆ ತಂಡದ ನಾಯಕನು ಆಟಗಾರರಿಗೆ ಪಂದ್ಯ ಗೆಲ್ಲಲೇಬೇಕು ಎನ್ನುವ ಭಾರವನ್ನು ಹೊರಿಸಿದಾಗ ಖಂಡಿತ ಆಟಗಾರರ ಪ್ರದರ್ಶನದದಲ್ಲಿ ಪ್ರಗತಿ ಕಂಡುಬರುತ್ತದೆ ಎಂದು ಗಂಗೂಲಿ ಸಲಹೆ ನೀಡಿದ್ದಾರೆ.