ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ರೊಮ್ಯಾಂಟಿಕ್ ವಿಡಿಯೋ ಹಂಚಿಕೊಂಡ ನಟಿ ಉರ್ವಶಿ ರೌಟೇಲಾ..!

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನಂತರ ಅವರು ಟ್ರೋಲರ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Written by - Puttaraj K Alur | Last Updated : Sep 7, 2022, 03:42 PM IST
  • ಪಾಕಿಸ್ತಾನ ವೇಗದ ಬೌಲರ್ ನಸೀಮ್ ಶಾಗೆ ಬೋಲ್ಡ್ ಅದ್ರಾ ಬಾಲಿವುಡ್ ನಟಿ ಊರ್ವಶಿ ರೌಟೇಲಾ?
  • ಇನ್ಸ್ಟಾಗ್ರಾಂನಲ್ಲಿ ಪಾಕಿಸ್ತಾನದ ಕ್ರಿಕೆಟಿಗನ ವಿಡಿಯೋ ಹಂಚಿಕೊಂಡ ಊರ್ವಶಿ ರೌಟೇಲಾ
  • ಬಾಲಿವುಡ್ ನಟಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ ಸೋಷಿಯಲ್ ಮೀಡಿಯಾ ಬಳಕೆದಾರರು
ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ರೊಮ್ಯಾಂಟಿಕ್ ವಿಡಿಯೋ ಹಂಚಿಕೊಂಡ ನಟಿ ಉರ್ವಶಿ ರೌಟೇಲಾ..! title=
ಉರ್ವಶಿ ರೌಟೇಲಾ ಟ್ರೋಲ್!

ನವದೆಹಲಿ: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇತ್ತೀಚಿನ ದಿನಗಳಲ್ಲಿ ತಮ್ಮ ಚಿತ್ರಗಳಿಗಿಂತಲೂ ಸಂಬಂಧದ ವಿಚಾರವಾಗಿ ಚರ್ಚೆಯಲ್ಲಿದ್ದಾರೆ. ಈ ನಟಿಯ ಹೆಸರು ಟೀಂ ಇಂಡಿಯಾದ ಆಟಗಾರ ರಿಷಭ್ ಪಂತ್ ಜೊತೆ ಹಲವು ಬಾರಿ ತಳುಕು ಹಾಕಿಕೊಂಡಿತ್ತು. ಇದಲ್ಲದೇ ಇವರಿಬ್ಬರ ನಡುವಿನ ಜಗಳವೂ ಮುನ್ನೆಲೆಗೆ ಬಂದು ದೊಡ್ಡ ಸುದ್ದಿಯಾಗಿತ್ತು. ಆದರೆ ಈಗ ಊರ್ವಶಿಯ ಹೃದಯ ಬೇರೆ ದೇಶದ ಕ್ರಿಕೆಟಿಗನ ಮೇಲೆ ಬಿದ್ದಂತಿದೆ. ಆ ಕ್ರಿಕೆಟಿಗನ ವಿಡಿಯೋವನ್ನು ಕೂಡ ನಟಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಹೊರಬಿದ್ದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳ ಮಹಾಪೂರವೇ ಹರಿದುಬಂದಿದೆ.

ಇದನ್ನೂ ಓದಿ: ʼಗೋಮಾಂಸ ತಿನ್ನಲು ಇಷ್ಟʼ ಎಂದಿದ್ದ ರಣಬೀರ್‌ ಕಪೂರ್‌ಗೆ ಮಹಾಕಾಲ್ ದೇಗುಲ ಪ್ರವೇಶ ನಿರಾಕರಣೆ

ಟ್ರೋಲ್ ಆದ ಊರ್ವಶಿ  

ಊರ್ವಶಿ ರೌಟೇಲಾ ಅವರು ಏಷ್ಯಾಕಪ್ ಟೂರ್ನಿಯ ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದರು. ಆ ಪಂದ್ಯದಲ್ಲಿ ರಿಷಭ್ ಪಂತ್ ಆಡಿರಲಿಲ್ಲ. ಇದುವೆ ಸರಿಯಾದ ಸಮಯವೆಂದ ಟ್ರೋಲಿಗಳು ಪಂತ್ ಜೊತೆಗೆ ಊರ್ವಶಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ರಿಷಭ್ ಮತ್ತು ಊರ್ವಶಿ ನಡುವಿನ ಶೀತಲ ಸಮರ ನಿಂತಿಲ್ಲ. ಇಬ್ಬರು ಪರಸ್ಪರ ಒಬ್ಬರಿಗೊಬ್ಬರು ಕಾಲು ಎಳೆಯುವುದು ಮಾಡುತ್ತಿದ್ದಾರೆ. ಆದರೆ ಸದ್ಯ ಊರ್ವಶಿಯ ಹೃದಯ ಪಾಕಿಸ್ತಾನಿ ಕ್ರಿಕೆಟಿಗ ನಸೀಮ್ ಶಾ ಮೇಲೆ ಬಿದ್ದಿದೆ. ಊರ್ವಶಿ ಇನ್ಸ್ಟಾದಲ್ಲಿ ಫ್ಯಾನ್ ಪೇಜ್ ಒಂದರ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಈ ಸ್ಟೋರಿ ನೋಡಿದ ಭಾರತೀಯ ಅಭಿಮಾನಿಗಳು ಎದೆಗುಂದಿದ್ದಾರೆ. ಟ್ರೋಲರ್‌ಗಳು ಟ್ವಿಟ್ಟರ್‌ನಲ್ಲಿ ಮೀಮ್ಸ್ ಮಾಡಿ ನಸೀಮ್, ಊರ್ವಶಿ ಮತ್ತು ರಿಷಭ್ ಅವರ ತ್ರಿಕೋನ ಪ್ರೇಮಕಥೆಯಂತೆ ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Team India: ಏಷ್ಯಾಕಪ್‌ನೊಂದಿಗೆ ಈ 2 ಆಟಗಾರರ ವೃತ್ತಿಜೀವನ ಬಹುತೇಕ ಅಂತ್ಯ..?

ಊರ್ವಶಿ ನಸೀಮ್‌ಗಿಂತ 9 ವರ್ಷ ದೊಡ್ಡವಳು

ಊರ್ವಶಿ ರೌಟೇಲಾ ಅವರಿಗೆ 28 ​​ವರ್ಷ, ನಸೀಮ್ ಶಾ ಅವರಿಗೆ 19 ವರ್ಷ. ಇನ್ನು ರಿಷಭ್ ಪಂತ್ ಬಗ್ಗೆ ಹೇಳುವುದಾದರೆ ಅವರಿಗೆ ಕೇವಲ 24 ವರ್ಷ. ಒಂದು ಮೀಮ್‌ನಲ್ಲಿ ‘ರಿಷಭ್ ಪಂತ್ ಮತ್ತು ಊರ್ವಶಿ ರೌಟೇಲಾ ನಡುವಿನ 'ಛೋಟು ಭಯ್ಯಾ' ಮತ್ತು 'ದೀದಿ' ನಡುವಿನ ಜಗಳ ಈಗ ತ್ರಿಕೋನ ಪ್ರೇಮಕ್ಕೆ ತಿರುಗಿದೆ. ಇದೀಗ ಇದರಲ್ಲಿ ಪಾಕ್ ಕ್ರಿಕೆಟಿಗ ನಸೀಮ್ ಶಾ ಎಂಟ್ರಿ ಪಡೆದಿದ್ದಾರೆ’ ಅಂತಾ ಹಾಸ್ಯ ಚಟಾಕಿ ಹಾರಿಸಲಾಗಿದೆ. ಪಾಕ್ ಕ್ರಿಕೆಟಿಗರ ಜೊತೆಗಿರುವ ವಿಡಿಯೋ ಹಂಚಿಕೊಂಡಿರುವ ಊರ್ವಶಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News