ಅಪ್ಪು ಫೇವರೇಟ್ ಲ್ಯಾಂಬೋರ್ಗಿನಿ ಕಾರು ದುಬೈಗೆ ಕಳುಹಿಸಿಕೊಟ್ಟ ಪತ್ನಿ ಅಶ್ವಿನಿ! ಕಾರಣವೇನು?

ಅಪ್ಪುವನ್ನು ನೆನಪಿಸಿಕೊಳ್ಳದಿರುವ ಜನರಿಲ್ಲ. ಇಂದಿಗೂ ಅವರು ಜೀವಂತವಿಲ್ಲ ಎಂದರೆ ನಂಬಲು ಅಸಾಧ್ಯವಾಗುತ್ತದೆ. ದೊಡ್ಡ ಸೆಲೆಬ್ರಿಟಿಯಾಗಿದ್ದರೂ ಸಹ ಅವರ ನಡವಳಿಕೆ, ಪ್ರೀತಿ, ಅಭಿಮಾನ, ವಿನಯವಂತಿಕೆ ಎಂಥವರನ್ನೂ ಬೆರಗು ಮೂಡಿಸುತ್ತದೆ.

Written by - Bhavishya Shetty | Last Updated : Sep 9, 2022, 10:44 AM IST
    • ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ರನ್ನು ಅಗಲಿ 10 ತಿಂಗಳೂ ಕಳೆದಿವೆ
    • ಅಪ್ಪು ನಿಧನವನ್ನು ಇಂದಿಗೂ ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ
    • ಅಪ್ಪು ಪ್ರೀತಿಯ ಲ್ಯಾಂಬೋರ್ಗಿನಿ ಕಾರು ದುಬೈನಲ್ಲಿ ಇದೆಯಂತೆ
ಅಪ್ಪು ಫೇವರೇಟ್ ಲ್ಯಾಂಬೋರ್ಗಿನಿ ಕಾರು ದುಬೈಗೆ ಕಳುಹಿಸಿಕೊಟ್ಟ ಪತ್ನಿ ಅಶ್ವಿನಿ! ಕಾರಣವೇನು?  title=
puneeth rajkumar

ಕನ್ನಡ ಚಿತ್ರರಂಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಬಡವಾಗಿದೆ. ಅಪ್ಪು ಅಭಿಮಾನಿಗಳು ಮಾತ್ರವಲ್ಲದೆ, ಚಿತ್ರರಂಗವೇ ಅಪ್ಪು ನಿಧನವನ್ನು ಇಂದಿಗೂ ಊಹಿಸಿಕೊಳ್ಳಲೂ ಸಾಧ್ಯವಾಗದೆ ನೋವನ್ನು ಅನುಭವಿಸುತ್ತಿದೆ. ಕನ್ನಡ ಸಿನಿಮಾರಂಗದ ಪವರ್ ಸ್ಟಾರ್ ಇಲ್ಲವಾಗಿ 10 ತಿಂಗಳುಗಳೇ ಕಳೆದಿವೆ. ಸದ್ಯ ಅವರ ಅಭಿಮಾನಿಗಳು ಅವರನ್ನು ದೇವರಂತೆ ಪೂಜಿಸುತ್ತಿದ್ದಾರೆ. 

ಇದನ್ನೂ ಓದಿ: Anushka Sharma: ಕೊಹ್ಲಿ ಶತಕಕ್ಕೆ ದೇಶವೇ ಶಹಬ್ಬಾಶ್ ಅಂದ್ರೆ,ಅನುಷ್ಕಾ ಹೇಳಿದ್ದು ಮಾತ್ರ ಹೀಗೆ!

ಅಪ್ಪುವನ್ನು ನೆನಪಿಸಿಕೊಳ್ಳದಿರುವ ಜನರಿಲ್ಲ. ಇಂದಿಗೂ ಅವರು ಜೀವಂತವಿಲ್ಲ ಎಂದರೆ ನಂಬಲು ಅಸಾಧ್ಯವಾಗುತ್ತದೆ. ದೊಡ್ಡ ಸೆಲೆಬ್ರಿಟಿಯಾಗಿದ್ದರೂ ಸಹ ಅವರ ನಡವಳಿಕೆ, ಪ್ರೀತಿ, ಅಭಿಮಾನ, ವಿನಯವಂತಿಕೆ ಎಂಥವರನ್ನೂ ಬೆರಗು ಮೂಡಿಸುತ್ತದೆ. ಇನ್ನು ಅಪ್ಪುಗೆ ಊಟವೆಂದರೆ ಪಂಚಪ್ರಾಣ. ಎಂತಹದ್ದೇ ಆಹಾರವನ್ನಾದರೂ ಅಚ್ಚುಮೆಚ್ಚಾಗಿ ತಿನ್ನುತ್ತಾರೆ. ಇನ್ನು ಆಹಾರ ಬಿಟ್ಟರೆ ಅವರಿಗೆ ಕಾರು-ಬೈಕ್ಗಳ ಮೇಲೆ ಹೆಚ್ಚು ಪ್ರೀತಿ. ಅವರಿಗೆ ಪ್ರಿಯವಾದ ಲ್ಯಾಂಬೊರ್ಗಿನಿ ಕಾರನ್ನು ನಾವೆಲ್ಲರೂ ನೋಡಿರುತ್ತೇವೆ.

ನೀಲಿ ಬಣ್ಣದ ಲ್ಯಾಂಬೋರ್ಗಿನಿ ಕಾರನ್ನು ಪತ್ನಿ ಅಶ್ವಿನಿಗೆ 2019ರಲ್ಲಿ ಗಿಫ್ಟ್ ನೀಡಿದ್ದರು. ಮಹಿಳಾ ದಿನಾಚರಣೆಯ ಅಂಗವಾಗಿ ಪತ್ನಿಗೆ ಈ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ಆ ಕಾರನ್ನು ಹೆಚ್ಚಾಗಿ ಅವರೇ ಉಪಯೋಗಿಸುತ್ತಿದ್ದರು. ಇದೀಗ ಆ ಕಾರನ್ನು ಪುನೀತ್ ನಿಧನದ ಬಳಿಕ ಯಾರೂ ಬಳಕೆ ಮಾಡಿರಲಿಲ್ಲವಂತೆ. ಹೀಗಾಗಿ ಅದನ್ನು ಅಶ್ವಿನಿ ತಮ್ಮ ಸಹೋದರ ದುಬೈನಲ್ಲಿ ನೆಲೆಸಿದ್ದು, ಅವರಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. 

ಇದನ್ನೂ ಓದಿ:  All OK New Song: ಸಮುದ್ರದಲೆಗಳ ಮೇಲೆ ಚುಟು ಚುಟು ಚೆಲುವೆ, ಸಿಂಗಾಪುರದಲ್ಲಿ ಕನ್ನಡದ ಕಂಪು

ಸುಮಾರು 4 ಕೋಟಿ ಬೆಲೆಯ ಈ ಕಾರು ನೀಲಿ ಬಣ್ಣದ್ದಾಗಿದೆ. ಸಿನಿಮಾ ಹೊರತಾಗಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಹಲವು ಆಸಕ್ತಿಗಳನ್ನು ಬೆಳೆಸಿಕೊಂಡಿದ್ದ ಅಪ್ಪು, ಕಾರುಗಳ ಬಗ್ಗೆ ಹೆಚ್ಚು ಒಲವು ಹೊಂದಿದ್ದರು. ಅಷ್ಟೇ ಅಲ್ಲದೆ ಪುನೀತ್ ಬಳಿ ಸಾಕಷ್ಟು ಐಷಾರಾಮಿ ಕಾರುಗಳಿದ್ದವು. ಆಡಿ, ರೇಂಜ್ ರೋವರ್ ಸೇರಿದಂತೆ ಅನೇಕ ಕಾರುಗಳ ಜೊತೆ, ಬೈಕ್ ಗಳೂ ಸಹ ಇದ್ದವು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News