RBI Repo Rate! ದುಬಾರಿಯಾಗಲಿದೆಯಾ ಸಾಲ? ಮೋರ್ಗಾನ್ ಸ್ಟಾನ್ಲಿ ಭವಿಷ್ಯವಾಣಿ

Morgan Stanley: ವರದಿಯೊಂದರ ಪ್ರಕಾರ ಆಹಾರ ಹಣದುಬ್ಬರದ ಏರಿಕೆಯಿಂದ ಹಣದುಬ್ಬರ ದರ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 

Written by - Nitin Tabib | Last Updated : Sep 19, 2022, 03:18 PM IST
  • ಈ ಹಿಂದೆ ಆರ್‌ಬಿಐ ರೆಪೊ ದರವನ್ನು ಒಟ್ಟು ಶೇ.1.40ರಷ್ಟು ಹೆಚ್ಚಿಸಿದೆ ಎಂಬುದು ಇಲ್ಲಿ ಗಮನಾರ್ಹ.
  • ಮೇ 2022 ರಲ್ಲಿ ಮೊದಲ ಬಾರಿಗೆ, ಆರ್‌ಬಿಐ ರೆಪೊ ದರವನ್ನು 40 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದೆ,
  • ಎರಡನೇ ಬಾರಿಗೆ ಜೂನ್‌ನಲ್ಲಿ 50 ಬೇಸಿಸ್ ಪಾಯಿಂಟ್‌ಗಳು ಮತ್ತು ನಂತರ ಆಗಸ್ಟ್‌ನಲ್ಲಿ ಶೇ.0.50 ರಷ್ಟು ಹೆಚ್ಚಿಸಿದೆ.
RBI Repo Rate! ದುಬಾರಿಯಾಗಲಿದೆಯಾ ಸಾಲ? ಮೋರ್ಗಾನ್ ಸ್ಟಾನ್ಲಿ ಭವಿಷ್ಯವಾಣಿ title=
Morgan Stanley Predictions

RBI Repo Rate Hike: ಭಾರತೀಯ ರಿಸರ್ವ್ ಬ್ಯಾಂಕ್ ನ ಮೂರು ದಿನಗಳ ಹಣಕಾಸು ನೀತಿ ಸಮಿತಿಯ ಸಭೆಯು ಸೆಪ್ಟೆಂಬರ್ 28 ರಿಂದ ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ. ಆಗಸ್ಟ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ದರವು ಮತ್ತೆ ಶೇಕಡಾ 7 ರ ಮಟ್ಟವನ್ನು ತಲುಪಿದ ನಂತರ, ಆರ್‌ಬಿಐ ನೀತಿ ಸಭೆಯಲ್ಲಿ ಸತತ ನಾಲ್ಕನೇ ಬಾರಿಗೆ ರೆಪೋ ದರವನ್ನು  ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಜಾಗತಿಕ ಈವೆಂಟ್ ಮತ್ತು ಹಣಕಾಸು ಸಂಸ್ಥೆ ಮೋರ್ಗಾನ್ ಸ್ಟಾನ್ಲಿ RBI ರೆಪೊ ದರವನ್ನು ಶೇ. 0.50 ರಷ್ಟು ಹೆಚ್ಚಿಸಬಹುದು ಎಂದು ಭವಿಷ್ಯ ನುಡಿದಿದೆ.

ಮೊರ್ಗಾನ್ ಸ್ಟಾನ್ಲಿ ತನ್ನ ವರದಿಯಲ್ಲಿ ರೆಪೊ ದರ 35 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಾಗಬಹುದು ಎಂದು ನಾವು ಈ ಮೊದಲೇ ಅಂದಾಜಿಸಿದ್ದೆವು ಎಂದು ಹೇಳಿದೆ. ಆದರೆ ಹಣದುಬ್ಬರ ಏರಿಕೆ ಮತ್ತು ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳ ವರ್ತನೆ ಗಮನಿಸಿದ ಬಳಿಕ ರೆಪೊ ದರ ಶೇ.0.50 ರಷ್ಟು ಹೆಚ್ಚಾಗಬಹುದು ಎಂದು ನಾವು ಮರು ಅಂದಾಜಿಸುತ್ತಿದ್ದೇವೆ ಮೋರ್ಗನ್ ಸ್ಟಾನ್ಲಿ ಹೇಳಿದೆ.

ಇದನ್ನೂ ಓದಿ-Stock Market Outlook: ಮುಂದಿನ ವಾರ ಷೇರು ಮಾರುಕಟ್ಟೆಯ ಪಾಲಿಗೆ ಹೇಗಿರಲಿದೆ?

ಈ ಹಿಂದೆ ಆರ್‌ಬಿಐ ರೆಪೊ ದರವನ್ನು ಒಟ್ಟು ಶೇ.1.40ರಷ್ಟು ಹೆಚ್ಚಿಸಿದೆ ಎಂಬುದು ಇಲ್ಲಿ ಗಮನಾರ್ಹ. ಮೇ 2022 ರಲ್ಲಿ ಮೊದಲ ಬಾರಿಗೆ, ಆರ್‌ಬಿಐ ರೆಪೊ ದರವನ್ನು 40 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದೆ, ಎರಡನೇ ಬಾರಿಗೆ ಜೂನ್‌ನಲ್ಲಿ 50 ಬೇಸಿಸ್ ಪಾಯಿಂಟ್‌ಗಳು ಮತ್ತು ನಂತರ ಆಗಸ್ಟ್‌ನಲ್ಲಿ ಶೇ.0.50 ರಷ್ಟು ಹೆಚ್ಚಿಸಿದೆ. ಇದೀಗ ಮತ್ತೊಮ್ಮೆ ರೆಪೋ ದರ ಹೆಚ್ಚಾಗುವ ಸಾಧ್ಯತೆ ವರ್ತಿಸಲಾಗುತ್ತಿದೆ. ಮೋರ್ಗನ್ ಸ್ಟಾನ್ಲಿ ಪ್ರಕಾರ, ದುಬಾರಿ ಆಹಾರ ಪದಾರ್ಥಗಳ ಕಾರಣದಿಂದಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು ಶೇ.7.1 ಮತ್ತು ಶೇ.7.4 ನಡುವೆ ಉಳಿಯುವ ಸಾಧ್ಯತೆ ಇದೆ. ಆದಾಗ್ಯೂ, ಇದರ ನಂತರ, ಹಣದುಬ್ಬರ ದರವು ಜನವರಿ-ಫೆಬ್ರವರಿಯವರೆಗೆ ಕಡಿಮೆಯಾಗಬಹುದು ಮತ್ತು ಜನವರಿ-ಫೆಬ್ರವರಿ 23 ರವರೆಗೆ ಅದು ಶೇ. 6 ಕ್ಕಿಂತ ಹೆಚ್ಚಿರಬಹುದು ಎಂದು ಅಂದಾಜಿಸಲಾಗುತ್ತಿದೆ.

ಇದನ್ನೂ ಓದಿ-Finance Minister: ಸರ್ಕಾರಿ ಬ್ಯಾಂಕುಗಳ ಮುಖ್ಯಸ್ಥರ ಭೇಟಿಗೆ ಮುಂದಾದ ಸೀತಾರಾಮನ್, ಕಾರಣ ಇಲ್ಲಿದೆ

ವರದಿಗಳ ಪ್ರಕಾರ, ಆಹಾರ ಹಣದುಬ್ಬರ ಏರಿಕೆಯಿಂದಾಗಿ, ಒಟ್ಟಾರೆ ಹಣದುಬ್ಬರ ದರವು ಹೆಚ್ಚಾಗಬಹುದು. ಕಳೆದ ವರ್ಷಕ್ಕೆ ಹೋಲಿಸಿದರೆ ಭತ್ತ ಮತ್ತು ಬೇಳೆಕಾಳುಗಳ ಬಿತ್ತನೆ ಕಡಿಮೆಯಾಗಿ, ಸರಕುಗಳ ಬೆಲೆ ಏರಿಕೆ ಮತ್ತು ಡಾಲರ್ ಎದುರು ರೂಪಾಯಿ ದುರ್ಬಲತೆಯಿಂದಾಗಿ ಆಮದು ಹಣದುಬ್ಬರ ಹೆಚ್ಚಾಗುವ ಅಪಾಯವಿದೆ. ಇದರಿಂದಾಗಿ ಚಿಲ್ಲರೆ ಹಣದುಬ್ಬರ ದರ ಏರಿಕೆಯಾಗಬಹುದು ಎಂದು ವರ್ತಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News