ಯುಐಡಿಎಐ: ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗಿದೆ. ಆದರೆ ಇದರೊಂದಿಗೆ ಹಲವು ತಪ್ಪು ಕಲ್ಪನೆಗಳೂ ಸಹ ಮುನ್ನಲೆಗೆ ಬರುತ್ತಿವೆ. ಅದರಲ್ಲೂ ಭಾರತದ ವಿಶಿಷ್ಟ ಗುರುತಿನ ದಾಖಲೆಯಾದ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಸುಳ್ಳು ಸುದ್ದಿಯೊಂದು ಇತ್ತೀಚಿಗೆ ಸಖತ್ ವೈರಲ್ ಆಗುತ್ತಿದೆ.
ಅದರಲ್ಲೂ ಆಧಾರ್ ಕಾರ್ಡ್ ಸಂಖ್ಯೆಗೆ ಸಂಬಂಧಿಸಿದಂತೆ ವಂಚಕರು ಆಧಾರ್ ನಂಬರ್ ಬಗ್ಗೆ ತಿಳಿದುಕೊಂಡರೆ ಸುಲಭವಾಗಿ ಖಾತೆಯಿಂದ ಹಣ ತೆಗೆಯಬಹುದು ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಆಧಾರ್ ಕಾರ್ಡ್ ಅನ್ನು ಖಾತೆಯೊಂದಿಗೆ ಪ್ಯಾನ್ ಕಾರ್ಡ್ಗೆ ಲಿಂಕ್ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ತಮ್ಮ ಆಧಾರ್ ಕಾರ್ಡ್ ಸಂಖ್ಯೆಯು ನಿಜವಾಗಿ ಸುರಕ್ಷಿತವಾಗಿಲ್ಲ ಮತ್ತು ಇದರಿಂದಾಗಿ ಅವರು ದೊಡ್ಡ ನಷ್ಟವನ್ನು ಎದುರಿಸಬೇಕಾಗಬಹುದು ಎಂಬ ತಪ್ಪು ಕಲ್ಪನೆಯು ಜನರಲ್ಲಿ ವೇಗವಾಗಿ ಹರಡುತ್ತಿದೆ.
ಇದನ್ನೂ ಓದಿ- Bank Locker: ನಿಮ್ಮ ಚಿನ್ನಾಭರಣಗಳನ್ನು ಸುರಕ್ಷಿತವಾಗಿಡುವ ಸ್ಕೀಮ್ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ
ಈ ಕುರಿತಂತೆ ಸ್ಪಷ್ಟನೆ ನೀಡಿರುವ ಯುಐಡಿಎಐ, ಆಧಾರ್ ಸಂಖ್ಯೆಯ ಮಾಹಿತಿಯಿಂದ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಟ್ವೀಟ್ ಮಾಡಿದೆ. ನಿಮ್ಮ ಆಧಾರ್ ಸಂಖ್ಯೆಯನ್ನು ಬಹಿರಂಗಪಡಿಸಲು ನೀವು ಬಯಸದಿದ್ದರೆ, ನೀವು VID ಅಥವಾ ಮಾಸ್ಕ್ಡ್ ಆಧಾರ್ ಅನ್ನು ಬಳಸಬಹುದು, ಇದು ಮಾನ್ಯವಾಗಿದೆ ಮತ್ತು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿದೆ ಎಂದು ಯುಐಡಿಎಐ ಹೇಳಿದೆ.
#AadhaarMythBusters
मात्र आधार नंबर की जानकारी से बैंक अकाउंट हैक नहीं हो सकता है।
यदि आप अपने #आधार नंबर का खुलासा नहीं करना चाहते हैं, तो आप VID या मास्क्ड आधार का उपयोग कर सकते हैं, यह मान्य है और व्यापक रूप से स्वीकार किया जाता है।
आधार है तो विश्वास है। @mygovindia pic.twitter.com/bCW3E92cFI— Aadhaar (@UIDAI) September 19, 2022
ಇದನ್ನೂ ಓದಿ- ಈ ದಿನ ರೈತರ ಖಾತೆ ಸೇರುವುದು ಪಿಎಂ ಕಿಸಾನ್ನ 12 ನೇ ಕಂತು .!
ಹ್ಯಾಕರ್ಗಳಿಂದ ನಿಮ್ಮ ಖಾತೆಯನ್ನು ರಕ್ಷಿಸುವುದು ಹೇಗೆ?
* OTP ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
* ಸಂದೇಶದಲ್ಲಿ ಬರುವ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ.
* ಬಹುಮಾನ ಪಡೆಯುವ ಹೆಸರಿನಲ್ಲಿ ಬ್ಯಾಂಕ್ ವಿವರಗಳನ್ನು ಯಾರಿಗೂ ಹೇಳಬೇಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.