ನವದೆಹಲಿ: ಬಜೆಟ್ ಬೆಲೆಗೆ ಅತ್ಯುತ್ತಮ ಸ್ಮಾರ್ಟ್ಫೋನ್ ಖರೀದಿಸಲು ನೀವು ಪ್ಲಾನ್ ಮಾಡಿದ್ದರೆ ಇಲ್ಲಿದೆ ಖುಷಿಯ ಸುದ್ದಿ. ಆನ್ಲೈನ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಗ್ಗದ ಸ್ಮಾರ್ಟ್ಫೋನ್ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಈ ಸ್ಮಾರ್ಟ್ಫೋನ್ ತುಂಬಾ ಅಗ್ಗವಾಗಿದ್ದು ಗ್ರಾಹಕರ ಬಜೆಟ್ಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಹಾಗಾದ್ರೆ ಈ ಸ್ಮಾರ್ಟ್ಫೋನ್ ಯಾವುದು..? ಇದರ ವಿಶೇಷತೆ ಮತ್ತು ಬೆಲೆ ಎಷ್ಟು ಎಂಬುದರ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಚೈನೀಸ್ ಸ್ಮಾರ್ಟ್ಫೋನ್ಗಳಿಗೆ ಟಕ್ಕರ್ ನೀಡಿದ ಮೇಡ್ ಇನ್ ಇಂಡಿಯಾ ಸ್ಮಾರ್ಟ್ಫೋನ್, ಬೆಲೆಯೂ ಕಡಿಮೆ
Realme C30 ವೈಶಿಷ್ಟ್ಯಗಳು
ಈ ಸ್ಮಾರ್ಟ್ಫೋನ್ನಲ್ಲಿ 6.5-ಇಂಚಿನ HD+ ಡಿಸ್ಪ್ಲೇ ಲಭ್ಯವಿದೆ, ಇದರಲ್ಲಿ ಗ್ರಾಹಕರಿಗೆ 60Hz ರಿಫ್ರೆಶ್ ರೇಟ್ ನೀಡಲಾಗುತ್ತದೆ. ಇದು 400 ನಿಟ್ಗಳ ಗರಿಷ್ಠ ಹೊಳಪನ್ನು ಹೊಂದಿದೆ. 8MP ಹಿಂಬದಿಯ ಕ್ಯಾಮೆರಾ ಮತ್ತು 5MP ಮುಂಭಾಗದ ಕ್ಯಾಮೆರಾ ಇದರಲ್ಲಿ ಲಭ್ಯವಿದೆ. Unisoc T612 ಪ್ರೊಸೆಸರ್ ಅನ್ನು Realme C30ನಲ್ಲಿ ನೀಡಲಾಗಿದೆ. 5000 mAh ಲಿಥಿಯಂ ಐಯಾನ್ ಬ್ಯಾಟರಿಯು ದೀರ್ಘಕಾಲದ ಬಳಕೆಗೆ ಸಹಕಾರಿಯಾಗಿದೆ. ಈ ಸ್ಮಾರ್ಟ್ಫೋನ್ ನೋಡಲು ತುಂಬಾ ಸ್ಟೈಲಿಶ್ ಆಗಿ ಕಾಣುತ್ತದೆ. ಎಂಟ್ರಿ ಲೆವೆಲ್ ಸ್ಮಾರ್ಟ್ಫೋನ್ ಆಗಿದ್ದರೂ, ಇದರಲ್ಲಿ ನೀವು ಯಾವುದೇ ಕೊರತೆ ಕಾಣುವುದಿಲ್ಲ. ಪ್ರವೇಶ ಮಟ್ಟದ ಸ್ಮಾರ್ಟ್ಫೋನ್ನಲ್ಲಿ ಸಿಗುವ ಎಲ್ಲಾ ವೈಶಿಷ್ಟ್ಯಗಳು ಈ ಫೋನಿನಲ್ಲಿಯೂ ನಿಮಗೆ ಸಿಗುತ್ತದೆ.
ಇದನ್ನೂ ಓದಿ: Apple: ಐಫೋನ್ 14 ಬಿಡುಗಡೆಯ ಬೆನ್ನಲ್ಲೇ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದ ಆ್ಯಪಲ್!
ಬೆಲೆ ಮತ್ತು ವಿಶೇಷತೆ
ಈ ಕಡಿಮೆ ಬಜೆಟ್ನ ಸ್ಮಾರ್ಟ್ಫೋನ್ ಅನ್ನು ನೀವು ಫ್ಲಿಪ್ಕಾರ್ಟ್ನಲ್ಲಿ 6,199 ರೂ.ಗೆ ಖರೀದಿಸಬಹುದು. ಈ ಸ್ಮಾರ್ಟ್ಫೋನ್ನ ಮೂಲ ಬೆಲೆ 8,499 ರೂ.ಆಗಿದೆ. ಆದರೆ ಇದಕ್ಕೆ ಶೇ.27ರಷ್ಟು ರಿಯಾಯಿತಿ ನಿಮಗೆ ಸಿಗಲಿದೆ. ಈ ಸ್ಟೈಲಿಶ್ ಸ್ಮಾರ್ಟ್ಫೋನ್ನ ವಿನ್ಯಾಸವು ಪ್ರೀಮಿಯಂ ಸ್ಮಾರ್ಟ್ಫೋನ್ನಂತೆಯೇ ಇದೆ. ಆದ್ದರಿಂದ ಇದು ವಿನ್ಯಾಸದ ವಿಷಯದಲ್ಲಿಯೂ ತುಂಬಾ ಪ್ರಬಲವಾಗಿದೆ. ಹಾಗಾದ್ರೆ ಇನ್ನೇಕೆ ತಡ ಇಂದೇ ಕಡಿಮೆ ಬೆಜೆಟ್ನ ಈ ಫೋನ್ ಖರೀದಿಸಿ ಖುಷಿಪಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.