ಇಂಡಿಯಾ ಟಾಪ್‌ 10 ಹೀರೋಗಳ ಪಟ್ಟಿ ಬಿಡುಗಡೆ : ರಾಕಿ ಭಾಯ್‌ಗೆ 5ನೇ ಸ್ಥಾನ

ಓರ್‌ಮ್ಯಾಕ್ಸ್‌ ಸಂಸ್ಥೆ ಭಾರತದ ಟಾಪ್‌ 10 ಹೀರೋಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟಾಲಿವುಡ್‌ ಸ್ಟಾರ್‌ ದಳಪತಿ ವಿಜಯ್‌ ಮೊದಲ ಸ್ಥಾನದಲ್ಲಿದ್ದಾರೆ. ರಾಕಿಂಗ್‌ ಸ್ಟಾರ್‌ ಯಶ್‌ ಸ್ಟಾರ್‌ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದು, ಅಭಿಮಾನಿಗಳಲ್ಲಿ ಸಂತೋಷ ಹೆಚ್ಚಿಸಿದೆ.

Written by - Krishna N K | Last Updated : Sep 22, 2022, 08:34 PM IST
  • ಓರ್‌ಮ್ಯಾಕ್ಸ್‌ ಸಂಸ್ಥೆ ಭಾರತದ ಟಾಪ್‌ 10 ಹೀರೋಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
  • 10 ಸ್ಟಾರ್‌ಗಳ ಪೈಕಿ ಟಾಲಿವುಡ್‌ ಸ್ಟಾರ್‌ ದಳಪತಿ ವಿಜಯ್‌ ಮೊದಲ ಸ್ಥಾನದಲ್ಲಿದ್ದಾರೆ.
  • ರಾಕಿಂಗ್‌ ಸ್ಟಾರ್‌ ಯಶ್‌ ಸ್ಟಾರ್‌ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದು, ಅಭಿಮಾನಿಗಳಲ್ಲಿ ಸಂತೋಷ ಹೆಚ್ಚಿಸಿದೆ.
ಇಂಡಿಯಾ ಟಾಪ್‌ 10 ಹೀರೋಗಳ ಪಟ್ಟಿ ಬಿಡುಗಡೆ : ರಾಕಿ ಭಾಯ್‌ಗೆ 5ನೇ ಸ್ಥಾನ  title=

ಬೆಂಗಳೂರು : ಓರ್‌ಮ್ಯಾಕ್ಸ್‌ ಸಂಸ್ಥೆ ಭಾರತದ ಟಾಪ್‌ 10 ಹೀರೋಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟಾಲಿವುಡ್‌ ಸ್ಟಾರ್‌ ದಳಪತಿ ವಿಜಯ್‌ ಮೊದಲ ಸ್ಥಾನದಲ್ಲಿದ್ದಾರೆ. ರಾಕಿಂಗ್‌ ಸ್ಟಾರ್‌ ಯಶ್‌ ಸ್ಟಾರ್‌ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದು, ಅಭಿಮಾನಿಗಳಲ್ಲಿ ಸಂತೋಷ ಹೆಚ್ಚಿಸಿದೆ.

ಹೌದು, ಪ್ಯಾನ್‌ ಇಂಡಿಯಾ ಲೆವಲ್‌ನಲ್ಲಿ ಸೌಂಡ್‌ ಮಾಡುವ ಮೂಲಕ ಕೆಜಿಎಫ್‌ ಭಾರತದಾದ್ಯಂತ ಕನ್ನಡದ ಪತಾಕೆ ಹಾರಿಸಿತ್ತು. ಅದರಂತೆ ಯಶ್‌ ಸಹ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚಿದ್ದಾರೆ. ಸದ್ಯ ಓರ್‌ಮ್ಯಾಕ್ಸ್‌ ನಡೆಸಿದ ಹಲವು ಸಮೀಕ್ಷೆಗಳ ಪೈಕಿ ಭಾರತದ ಟಾಪ್‌ ಹೀರೋಗಳ ಪಟ್ಟಿಯೂ ಒಂದು. ಇದರಲ್ಲಿ ಕನ್ನಡ ಚಿತ್ರರಂಗ ಸೇರಿದಂತೆ ಬಾಲಿವುಡ್‌, ಕಾಲಿವುಡ್‌, ಟಾಲಿವುಡ್‌ ಸಿನಿರಂಗಗಳ ನಟರ ಸ್ಕೋರ್‌ಗಳು ಇವೆ.

ಇದನ್ನೂ ಓದಿ: Watch Video : ಮೈ ಜುಮ್ಮೆನಿಸುವಂತಿದೆ ʼಕಾಂತಾರʼ ದಂತಕಥೆಯ ಮೇಕಿಂಗ್ ..! 

ಪಟ್ಟಿಯನ್ನು ನೋಡುವುದಾದರೆ, ಮೊದಲನೇ ಸ್ಥಾನದಲ್ಲಿ ದಳಪತಿ ವಿಜಯ್ ಅವರಿದ್ದಾರೆ, ಎರಡನೇ ಸ್ಥಾನದಲ್ಲಿ ಪ್ರಭಾಸ್‌ ಹಾಗೂ ಮೂರನೇ ಸ್ಥಾನದಲ್ಲಿ ಜ್ಯೂ. ಎನ್‌ಟಿಆರ್‌, ಇನ್ನು ನಾಲ್ಕನೇ ಪ್ಲೇಸ್‌ನಲ್ಲಿ ಅಲ್ಲು ಅರ್ಜುನ್‌ ಇದ್ದಾರೆ. ಕೆಜಿಎಫ್‌ ಮೂಲಕ ಭಾರತದಾದ್ಯಂತ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದ ಯಶ್‌ ಐದನೇ ಸ್ಥಾನದಲ್ಲಿ ಮಿಂಚಿದ್ದಾರೆ. ಇನ್ನು 6ನೇ ಸ್ಥಾನದಲ್ಲಿ ಅಕ್ಷಯ್‌ ಕುಮಾರ್‌, 7ನೇ ಸ್ಥಾನದಲ್ಲಿ ರಾಮ್‌ ಚರಣ್‌, 8ನೇ ಸ್ಥಾನದಲ್ಲಿ ಮಹೇಶ್‌ ಬಾಬು, 9ನೇ ಸ್ಥಾನದಲ್ಲಿ ಸೂರ್ಯ 10ನೇ ಸ್ಥಾನದಲ್ಲಿ ಅಜಿತ್‌ಕುಮಾರ್‌ ಅವರಿದ್ದಾರೆ.

ಕೆಜಿಎಫ್ 2 ಯಶಸ್ಸಿನ ಮೂಲಕ ಯಶ್‌ ಅಪಾರ ಫ್ಯಾನ್ಸ್‌ ಪಾಲೋಯಿಂಗ್‌ ಹೊಂದಿದ್ದಾರೆ. ಅಲ್ಲು ಅರ್ಜುನ್​ ಅವರಿಗೆ ಮೊದಲಿನಿಂದಲೂ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಅಭಿಮಾನಿಗಳಿದ್ದಾರೆ. ಇತ್ತೀಚಿನ ಅವರ ʼಪುಷ್ಪಾʼ ಸಿನಿಮಾ ಭಾರಿ ಪ್ರದರ್ಶನ ಕಂಡಿತು. ಅಲ್ಲದೆ, ಎನ್‌ಟಿಆರ್‌ ಹಾಗೂ ರಾಮ್‌ ಚರಣ ಅಭಿನಯದ ʼಆರ್‌ಆರ್‌ಆರ್‌ʼ ಸಿನಿಮಾ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಪ್ರಭಾಸ್‌ ಸತತ ಸೋಲನ್ನು ಅನುಭವಿಸಿದರೂ ಸಹ ಅತಿ ಹೆಚ್ಚು ಒಟ್‌ಗಳು ಬಿದ್ದ ಹಿನ್ನೆಲೆ ಎರಡನೇ ಸ್ಥಾನದಲ್ಲಿ ಇದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News