Shivaji Park ನಲ್ಲಿ ದಸರಾ ಮೇಳ ನಡೆಸಲು ಉದ್ಧವ್ ಬಣಕ್ಕೆ ಬಾಂಬೆ ಹೈಕೋರ್ಟ್ ಅನುಮತಿ

Dussehra Rally Controversy: ಮಹಾರಾಷ್ಟ್ರದಲ್ಲಿ ಶಿವಸೇನೆಯ ಉದ್ಧವ್ ಬಣಕ್ಕೆ ಭಾರಿ ನೆಮ್ಮದಿ ನೀಡಿರುವ ಬಾಂಬೆ ಹೈ ಕೋರ್ಟ್, ನಗರದ ಶಿವಾಜಿ ಪಾರ್ಕ್ ಮೈದಾನದಲ್ಲಿ ದಸರಾ ಮೇಳ ನಡೆಸಲು ಅನುಮತಿ ನೀಡಿದೆ. ಇನ್ನೊಂದೆಡೆ ಶಿಂಧೆ ಬಣಕ್ಕೆ ಅನುಮತಿ ನಿರಾಕರಿಸಲಾಗಿದ್ದು, ಬೇರೆಡೆ ಮೇಳ ನಡೆಸಲು ಸೂಚಿಸಲಾಗಿದೆ. 

Written by - Nitin Tabib | Last Updated : Sep 23, 2022, 06:01 PM IST
  • ಶಿಂಧೆ ಬಣದ ಶಾಸಕ ಸದಾ ಸರವನ್ಕರ್ ದಾಖಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ
  • ದಸರಾ ಮೇಳಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ
  • ಶಿವಸೇನೆ ಯಾರಿಗೆ ಸೇರಿದ್ದು ಇದು ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯವಲ್ಲ
Shivaji Park ನಲ್ಲಿ ದಸರಾ ಮೇಳ ನಡೆಸಲು ಉದ್ಧವ್ ಬಣಕ್ಕೆ ಬಾಂಬೆ ಹೈಕೋರ್ಟ್ ಅನುಮತಿ title=
Dussehra Rally

Dussehra Rally Controversy: ಉದ್ಧವ್ ಬಣಕ್ಕೆ ಭಾರಿ ರಿಲೀಫ್ ನೀಡಿರುವ ಬಾಂಬೆ ಹೈಕೋರ್ಟ್, ಶಿವಾಜಿ ಪಾರ್ಕ್‌ ಮೈದಾನದಲ್ಲಿ ದಸರಾ ಮೇಳ ನಡೆಸಲು ಅನುಮತಿ ನೀಡಿದೆ. ಇದರೊಂದಿಗೆ ಶಿಂಧೆ ಬಣಕ್ಕೆ ಅನುಮತಿ ನಿರಾಕರಿಸಲಾಗಿದೆ. ಅವರು ಬೇರೆಡೆ ಮೇಳ ನಡೆಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಇದರೊಂದಿಗೆ ಬಿಎಂಸಿಯ ವಾರ್ಡ್ ಅಧಿಕಾರಿಯನ್ನು ಸಂಪರ್ಕಿಸಿ ಮತ್ತು ಮೇಳ ನಡೆಸಲು ಅನುಮತಿ ಪಡೆಯುವಂತೆ ಶಿವಸೇನೆಗೆ ಬಾಂಬೆ ಹೈಕೋರ್ಟ್ ಸೂಚಿಸಿದೆ. 2016ರ ಸರಕಾರ ಹೊರಡಿಸಿರುವ ಆದೇಶದ ಪ್ರಕಾರ ಈ ಅನುಮತಿ ನೀಡಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಇಷ್ಟೇ ಅಲ್ಲ, ಇಡೀ ಕಾರ್ಯಕ್ರಮವನ್ನು ವೀಡಿಯೊಗ್ರಾಫ್ ಮಾಡಲಾಗುವುದು ಮತ್ತು ಯಾವುದೇ ನ್ಯೂನತೆ ಕಂಡುಬಂದರೆ ಅಥವಾ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎದುರಾದರೆ, ನಂತರ ಭವಿಷ್ಯದಲ್ಲಿ ಈ ಅನುಮತಿಯನ್ನು ಪರಿಶೀಲಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಶಿವಸೇನೆ ಕಳೆದ 5 ದಶಕಗಳಿಗೂ ಹೆಚ್ಚು ಕಾಲದಿಂದ ಶಿವಾಜಿ ಪಾರ್ಕ್ ನಲ್ಲಿ ದಸರಾ ಮೇಳ ಹಮ್ಮಿಕೊಳ್ಳುತ್ತಿದೆ. ಹೀಗಿರುವಾಗ, ಬಾಂಬೆ ಹೈಕೋರ್ಟ್ ಆದೇಶದ ನಂತರ, ಅದು ತನ್ನ ಸಂಪ್ರದಾಯವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ. ಏಕನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆ ಇಬ್ಬರಿಗೂ ಪಾರ್ಕ್ ನೀಡಲು ಬಿಎಂಸಿ ನಿರಾಕರಿಸಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಎರಡೂ ಬಣಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ನಡೆದ ವಿಚಾರಣೆಯ ವೇಳೆ, ಶಿವಾಜಿ ಪಾರ್ಕ್‌ನಲ್ಲಿ ಏಕನಾಥ್ ಶಿಂಧೆ ಬಣಕ್ಕೆ ಅನುಮತಿ ನೀಡಲು ನ್ಯಾಯಾಲಯ ಮೊದಲು ನಿರಾಕರಿಸಿದೆ ಮತ್ತು ನಂತರ ಶಿವಸೇನೆಗೆ ಅವಕಾಶ ನೀಡಿತ್ತು. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ಶಿವಸೇನೆಯ ಅರ್ಜಿಯನ್ನು ತಿರಸ್ಕರಿಸುವುದು ಸರಿಯಲ್ಲ ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ-Narendra Modi: 'ಪಂಡಿತ್ ನೆಹರು ಆರಂಭಿಸಿದ ಕೆಲಸ ನನ್ನ ಅವಧಿಯಲ್ಲಿ ಪೂರ್ಣಗೊಂಡಿದೆ'

ರಾಲಿಯಲ್ಲಿ ಯಾವುದೇ ಗೊಂದಲವಿಲ್ಲ ಎಂದ ಠಾಕ್ರೆ
ಶುಕ್ರವಾರ ಹೈಕೋರ್ಟ್‌ನಲ್ಲಿ ಸುಮಾರು ಮೂರೂವರೆ ಗಂಟೆಗಳ ಕಾಲ ಈ ಕುರಿತಾದ  ಅರ್ಜಿಯ ವಿಚಾರಣೆಯನ್ನು ನಡೆಸಲಾಗಿದೆ. ಶಿವಸೇನೆ, ಬಿಎಂಸಿ ಮತ್ತು ಶಿಂಧೆ ಬಣದ ಪರ ವಕೀಲರು ತಮ್ಮದೆ ಆದ ರೀತಿಯಲ್ಲಿ ವಾದ ಮಂಡಿಸಿದ್ದಾರೆ. ಎಲ್ಲರ ವಾದವನ್ನು ಆಲಿಸಿದ ಹೈಕೋರ್ಟ್, ಬಿಎಂಸಿಯ ನಿರ್ಧಾರ ಸರಿಯಲ್ಲ ಎಂದು ಹೇಳಿದೆ. ಈ ವೇಳೆ ನ್ಯಾಯಾಲಯದ ಷರತ್ತಿನ ಮೇರೆಗೆ ಠಾಕ್ರೆ ಪರ ವಕೀಲರು ಕಾನೂನು ಸುವ್ಯವಸ್ಥೆ ಕಾಪಾಡುವುದಾಗಿ ಭರವಸೆ ನೀಡಿದ್ದಾರೆ. ಇಡೀ ಕಾರ್ಯಕ್ರಮದ ವೀಡಿಯೊ ರೆಕಾರ್ಡಿಂಗ್ ಕಡ್ಡಾಯವಾಗಿ ನಡೆಸಲಾಗುವುದು ಮತ್ತು ಕಾನೂನು - ಸುವ್ಯವಸ್ಥೆ ಅರ್ಜಿದಾರರು ಹೊಣೆಗಾರರಾಗಿರಲಿದ್ದಾರೆ. ಒಂದು ವೇಳೆ ಹಾಳಾದರೆ ಭವಿಷ್ಯದಲ್ಲಿ ಅವರ ಅನುಮತಿಯ ಮೇಲೆ ಪರಿಣಾಮ ಅದು ಪರಿಣಾಮ ಬೀರಲಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ಇದನ್ನೂ ಓದಿ-ONGC Recruitment 2022 : ONGC ಯಲ್ಲಿ 870 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ : ಇಲ್ಲಿದೆ ಸಂಪೂರ್ಣ ಮಾಹಿತಿ

ಶಿವಸೇನೆ ಯಾರಿಗೆ ಸೇರಿದ್ದು ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯವಲ್ಲ
ಶಿಂಧೆ ಬಣದ ಶಾಸಕ ಸದಾ ಸರವನ್ಕರ್ ದಾಖಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ದಸರಾ ಮೇಳಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ. ಅರ್ಜಿಯ ವಿಚಾರಣೆಯ ವೇಳೆ ಠಾಕ್ರೆ ಬಣ  ಮಂಡಿಸಿದ ವಾದಗಳನ್ನು ನ್ಯಾಯಾಲಯ ಒಪ್ಪುತ್ತದೆ ಮತ್ತು ಶಿವಸೇನೆ ಯಾರಿಗೆ ಸೇರಿದ್ದು ಇದು ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯವಲ್ಲ. ಆ ವಿವಾದ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಚುನಾವಣಾ ಆಯೋಗದ ಮುಂದೆ ಬಾಕಿ ಇದೆ. ಹೀಗಾಗಿ ನಾವು ಅದನ್ನು ಪರಿಗಣಿಸುವುದು ಕಾರಣವಿಲ್ಲ ಎಂದು ಹೈಕೋರ್ಟ್ ಹೇಳಿದೆ . 2016 ರಿಂದ ಮುಂಬೈ ಮಹಾನಗರ ಪಾಲಿಕೆಯು ಶಿವಾಜಿ ಪಾರ್ಕ್‌ನಲ್ಲಿ ದಸರಾ ಮೇಳಕ್ಕೆ ಅನುಮತಿ ನೀಡುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News