Astro Tips: ಈ 5 ಕಾರ್ಯಗಳಿಗೆ ಹಣ ಖರ್ಚು ಮಾಡಲು ಎಂದಿಗೂ ಹಿಂಜರಿಯಬೇಡಿ, ಲಕ್ಷ್ಮೀದೇವಿ ಸಂಪತ್ತು ನೀಡುತ್ತಾಳೆ!

ಭವಿಷ್ಯದ ಭಯ ಎದುರಿಸಲು ಪ್ರತಿಯೊಬ್ಬರೂ ಜೀವನದಲ್ಲಿ ಹಣ ಉಳಿಸಲು ಬಯಸುತ್ತಾರೆ. ಜ್ಯೋತಿಷ್ಯದ ಪ್ರಕಾರ 5 ಮಹತ್ಕಾರ್ಯಗಳಿಗೆ ಹಣ ಖರ್ಚು ಮಾಡಲು ಹಿಂಜರಿಯಬಾರದು. ಈ ಕೆಲಸ ಮಾಡಿದ್ರೆ ಲಕ್ಷ್ಮಿದೇವಿ ಕೃಪೆ ದೊರೆಯುತ್ತದೆ.

Written by - Puttaraj K Alur | Last Updated : Sep 24, 2022, 06:08 AM IST
  • ನಿರ್ಗತಿಕರಿಗೆ ಸಹಾಯ ಮಾಡಲು ನಾವು ಎಂದಿಗೂ ಹಿಂಜರಿಯಬಾರದು
  • ಧಾರ್ಮಿಕ ಸ್ಥಳಗಳಲ್ಲಿ ನಿಮ್ಮ ಕೈಲಾದಷ್ಟು ದಾನ ಮಾಡಬೇಕು
  • ಸಾಮಾಜಿಕ ಕಾರ್ಯಗಳಿಗೂ ಸಹ ನಿಮ್ಮ ಕೈಲಾದಷ್ಟು ಕೊಡುಗೆ ನೀಡಬೇಕು
Astro Tips: ಈ 5 ಕಾರ್ಯಗಳಿಗೆ ಹಣ ಖರ್ಚು ಮಾಡಲು ಎಂದಿಗೂ ಹಿಂಜರಿಯಬೇಡಿ, ಲಕ್ಷ್ಮೀದೇವಿ ಸಂಪತ್ತು ನೀಡುತ್ತಾಳೆ!  title=
Astro Tips For Money

ನವದೆಹಲಿ: ಪ್ರತಿಯೊಬ್ಬ ವ್ಯಕ್ತಿಯು ತನ್ನ ಭವಿಷ್ಯದ ಭಯ ಎದುರಿಸಲು ಹಣ ಉಳಿಸಲು ಪ್ರಯತ್ನಿಸುತ್ತಾನೆ. ಈ ಹಣವು ಭವಿಷ್ಯದಲ್ಲಿ ದೊಡ್ಡ ನಷ್ಟದಿಂದ ಅವರನ್ನು ಪಾರು ಮಾಡುತ್ತದೆ. ಹಿರಿಯರೂ ಸಹ ಹಣ ಉಳಿತಾಯದ ಮಹತ್ವವನ್ನು ಒತ್ತಿ ಹೇಳುತ್ತಿರುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಹಣ ಖರ್ಚು ಮಾಡಲು ಎಂದಿಗೂ ಹಿಂಜರಿಯದಿರುವ ಕೆಲವು ವಿಷಯಗಳಿವೆ. ಇಂತಹ ಕೆಲಸಗಳಿಗೆ ಖರ್ಚು ಮಾಡುವುದರಿಂದ ವ್ಯಕ್ತಿಯ ಉಳಿತಾಯವು ಕಡಿಮೆಯಾಗುವುದಿಲ್ಲ, ಆದರೆ ಮೊದಲಿಗಿಂತ ಸಂಪತ್ತು ಹೆಚ್ಚಾಗುತ್ತದೆ. ತಾಯಿ ಲಕ್ಷ್ಮಿದೇವಿ ನೀವು ಮಾಡುವ ಇಂತಹ ಉದಾತ್ತ ಕಾರ್ಯಗಳಿಗೆ ಸಂತೋಷಪಟ್ಟು ಆಶೀರ್ವಾದ ನೀಡುತ್ತಾಳೆ. ಲಕ್ಷ್ಮಿದೇವಿಯ ಕೃಪೆಯಿಂದ ನಿಮ್ಮ ಮನೆ ಸಕಲ ಸೌಕರ್ಯ ಮತ್ತು ಸಂಪತ್ತಿನಿಂದ ತುಂಬಿರುತ್ತದೆ. ಇಂತಹ ಉದಾತ್ತ ಕಾರ್ಯಗಳು ಯಾವುವು ಎಂದು ತಿಳಿಯಿರಿ.

ಅಗತ್ಯವಿರುವವರಿಗೆ ಸಹಾಯ ಮಾಡಿ

ಮನುಷ್ಯ ಜೀವನದಲ್ಲಿ ಯಾವಾಗಲೂ ಏರಿಳಿತಗಳು ಇದ್ದೇ ಇರುತ್ತವೆ. ಕೆಲವೊಮ್ಮೆ ನಾವು ಶ್ರೀಮಂತರಾಗುತ್ತೇವೆ ಮತ್ತು ಕೆಲವೊಮ್ಮೆ ಬಡತನವು ನಮ್ಮನ್ನು ಸುತ್ತುವರೆದಿರುತ್ತದೆ. ಇದು ಎಲ್ಲರ ಜೀವನದಲ್ಲಿಯೂ ಸಂಭವಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಂಕಷ್ಟದಲ್ಲಿರುವ ಯಾವುದೇ ನಿರ್ಗತಿಕರಿಗೆ ಸಹಾಯ ಮಾಡಲು ನಾವು ಹಿಂಜರಿಯಬಾರದು. ವಾಸ್ತವವಾಗಿ ಇದಕ್ಕಿಂತ ದೊಡ್ಡ ಗುಣ ಮತ್ತೊಂದಿಲ್ಲ. ಹೀಗೆ ಮಾಡುವುದರಿಂದ ಸಮಾಜದಲ್ಲಿ ನಿಮಗೆ ಗೌರವ ಸಿಗುತ್ತದೆ. ನಿರ್ಗತಿಕರಿಂದ ನಿಮಗೆ ಅಮೂಲ್ಯ ಪ್ರಾರ್ಥನೆ ಮತ್ತು ಆಶೀರ್ವಾದ ದೊರೆಯುತ್ತದೆ. ಇದರಿಂದ ಪರಲೋಕದಲ್ಲಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿದೀಪಾವಳಿ ಲಕ್ಷ್ಮೀ ಪೂಜೆಯಂದೇ ಗೋಚರಿಸಲಿದೆ ಸೂರ್ಯ ಗ್ರಹಣ, ಹಾಗಿದ್ದರೆ ಪೂಜೆಯ ಮುಹೂರ್ತ ಯಾವಾಗ ?

ಧಾರ್ಮಿಕ ಸ್ಥಳಗಳಲ್ಲಿ ದಾನ ಮಾಡಿ

ದೇವಾಲಯಗಳನ್ನು ದೇವರ ಮನೆ ಎಂದು ಹೇಳಲಾಗುತ್ತದೆ. ಇಲ್ಲಿ ದೇವರು ವಿವಿಧ ರೂಪಗಳಲ್ಲಿ ನೆಲೆಸಿದ್ದಾನೆ. ಇಂತಹ ಧಾರ್ಮಿಕ ಸ್ಥಳಗಳಿಗೆ ದೇಣಿಗೆ ನೀಡಲು ಮತ್ತು ಸೇವೆ ಮಾಡಲು ನೀವು ಎಂದಿಗೂ ಹಿಂಜರಿಯಬಾರದು. ಇಂತಹ ಸ್ಥಳಗಳಲ್ಲಿ ನೀಡಲಾಗುವ ದಾನವು ಇಹಲೋಕವನ್ನು ಸುಧಾರಿಸುತ್ತದೆ ಮತ್ತು ಜನ್ಮ ಜನ್ಮಾಂತರಗಳ ಬಂಧನದಿಂದ ಮುಕ್ತಿಯನ್ನು ನೀಡುತ್ತದೆ. ದೇವಾಲಯಗಳಲ್ಲಿ ವಿಗ್ರಹ ಪ್ರತಿಷ್ಠಾಪನೆ, ಭಜನೆ-ಕೀರ್ತನೆ ಅಥವಾ ಭಂಡಾರಕ್ಕಾಗಿ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ದಾನ ಮಾಡಬಹುದು. ಈ ರೀತಿಯ ದಾನವು ಮನಸ್ಸಿನಲ್ಲಿ ಸಕಾರಾತ್ಮಕ ಶಕ್ತಿಯ ಭಾವನೆಯನ್ನು ನೀಡುತ್ತದೆ.

ಸಾಮಾಜಿಕ ಕಾರ್ಯಗಳಿಗೆ ಕೊಡುಗೆ ನೀಡಿ

ಮನುಷ್ಯ ಸಾಮಾಜಿಕ ಪ್ರಾಣಿ, ಅವನ ಅಸ್ತಿತ್ವವೇ ಈ ಸಮಾಜದಿಂದ. ಸಮಾಜವಿಲ್ಲದೆ ಅವನು ಏನೂ ಅಲ್ಲ. ಆದ್ದರಿಂದ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಧರ್ಮಶಾಲೆ, ಶಾಲಾ ಕಟ್ಟಡ ಅಥವಾ ಆಸ್ಪತ್ರೆ ನಿರ್ಮಾಣದಲ್ಲಿ ಸಹಕರಿಸಲು ಅವಕಾಶ ಸಿಕ್ಕರೆ ಸಕ್ರೀಯವಾಗಿ ಪಾಲ್ಗೊಳ್ಳಬೇಕು. ಇಂತಹ ಸ್ಥಳಗಳಲ್ಲಿ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡಬೇಕು. ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಪ್ರತಿಷ್ಠೆ ಹೆಚ್ಚುತ್ತದೆ ಹಾಗೂ ಜನರ ಆಶೀರ್ವಾದ ಪಡೆಯುವ ಅವಕಾಶ ಸಿಗುತ್ತದೆ.

ಇದನ್ನೂ ಓದಿ: ತೆಂಗಿನಕಾಯಿಯಲ್ಲಿ ಅಡಗಿದೆ ಸಂತಾನ ಪ್ರಾಪ್ತಿಯ ರಹಸ್ಯ

ಸಹೋದರಿಯರಿಗೆ ಸಹಾಯ ಮಾಡಬೇಕು  

ಸಹೋದರ-ಸಹೋದರಿ ಸಂಬಂಧವನ್ನು ಪ್ರಪಂಚದಾದ್ಯಂತ ಅತ್ಯಂತ ಮಧುರವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ರಕ್ಷಾ ಬಂಧನ ಮತ್ತು ಭಾಯಿ ದೂಜ್‌ನಂತಹ ಹಬ್ಬಗಳನ್ನು ಈ ಸಂಬಂಧದ ಮಹತ್ವ ತಿಳಿಸಲು ಆಚರಿಸಲಾಗುತ್ತದೆ. ನಮ್ಮ ದೇಶದಲ್ಲಿ ತಂದೆಯ ಆಸ್ತಿಯಲ್ಲಿ ಸಹೋದರಿಯರಿಗೂ ಸಮಾನ ಹಕ್ಕಿದೆ. ಇದರ ಹೊರತಾಗಿಯೂ ಅವರು ಸಾಮಾನ್ಯವಾಗಿ ಆ ಆಸ್ತಿಯಲ್ಲಿ ಪಾಲು ಕೇಳುವುದಿಲ್ಲ. ಇದು ಅವರ ಸಹೋದರರ ಮೇಲಿನ ಪ್ರೀತಿ. ಇಂತಹ ಪರಿಸ್ಥಿತಿಯಲ್ಲಿ ತಂಗಿಯ ಪ್ರತಿಯೊಂದು ಸಂಕಷ್ಟವನ್ನು ನೀಗಿಸುವುದು ಹಾಗೂ ತಂಗಿಯನ್ನು ಕೇಳದೆ ಆಕೆಗೆ ಕಾಲಕಾಲಕ್ಕೆ ಆರ್ಥಿಕ ನೆರವು ನೀಡುವುದು ಅಣ್ಣನ ಜವಾಬ್ದಾರಿ. ಸಹೋದರಿಗೆ ಈ ರೀತಿಯ ಸಹಾಯವು ಸಹೋದರನಿಗೆ ಪ್ರಗತಿಯ ಹೊಸ ಬಾಗಿಲುಗಳನ್ನು ತೆರೆಯುತ್ತದೆ ಮತ್ತು ಅವನ ಮನೆ ಸಂತೋಷದಿಂದ ತುಂಬಿರುತ್ತದೆ.

ರೋಗಿಗಳಿಗೆ ಸಹಾಯ ಮಾಡಿ

ಅನಾರೋಗ್ಯ ಅಥವಾ ವಯಸ್ಸಾದ ವ್ಯಕ್ತಿಗೆ ಸಹಾಯ ಮಾಡುವುದು ಪುಣ್ಯ ಕಾರ್ಯ. ಇಂತಹವರ ಸೇವೆಯ ಜೊತೆಗೆ ಹೇಳದೆ ಧನ ಸಹಾಯವನ್ನೂ ಮಾಡಬೇಕು. ನಿಮ್ಮ ಸಹಾಯದಿಂದ ಅನಾರೋಗ್ಯದ ವ್ಯಕ್ತಿಯು ಹೊಸ ಜೀವನ ಪಡೆಯಬಹುದು ಮತ್ತು ಹೊಸ ಸಂತೋಷವು ಅವನ ಕುಟುಂಬಕ್ಕೆ ಮರಳಬಹುದು. ಒಬ್ಬರ ಜೀವ ಉಳಿಸುವುದಕ್ಕಿಂತ ದೊಡ್ಡ ಪುಣ್ಯ ಇನ್ನೊಂದಿಲ್ಲ. ಇಂತಹ ಪ್ರತಿಯೊಂದು ಸಹಾಯವು ವ್ಯಕ್ತಿಯು ಜೀವನದಲ್ಲಿ ಮುಂದುವರಿಯಲು ಸಹಾಯ ಮಾಡುತ್ತದೆ. ಆದ್ದರಿಂದ ಇಂತಹ ಅವಕಾಶಗಳನ್ನು ನಿಮ್ಮ ಕೈಯಿಂದ ಎಂದಿಗೂ ಬಿಡಬೇಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News