'ಜೆ.ಹೆಚ್.ಪಟೇಲರು ಕರ್ನಾಟಕ ರಾಜಕಾರಣದ ದಂತಕಥೆ'

ರಾಜಕಾರಣಗಳಾಗಿ ಹೆಜ್ಜೆ ಗುರುತು ಬಿಟ್ಟು ಹೋಗಿರುವವರಲ್ಲಿ ಪ್ರಮುಖರಾದ ಜೆ.ಹೆಚ್ ಪಟೇಲರು ದೂರದೃಷ್ಟಿಯ ನಾಯಕ. ಜನಸಾಮಾನ್ಯರಿಗೆ ಒಳಿತು ಮಾಡುವ ವಿಚಾರವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಧೀಮಂತ ನಾಯಕರಾಗಿದ್ದರು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಮರಿಸಿದರು.

Written by - Zee Kannada News Desk | Last Updated : Sep 29, 2022, 06:29 PM IST
  • ರಾಜ್ಯದಲ್ಲಿ ದೊಡ್ಡ ಜನಸಂಖ್ಯೆ ಹೆಚ್ಚಿದಾಗ ಉತ್ತಮ ಆಡಳಿತ ನಡೆಸಲು ಅನುಕೂಲವಾಗುವಂತೆ ಪಟೇಲರು ಏಳು ಜಿಲ್ಲೆಗಳ ರಚನೆ, ಕರ್ನಾಟಕದ ಪ್ರಗತಿಯಲ್ಲಿ ಪ್ರಮುಖ ಮೈಲಿಗಲ್ಲು.
  • ಈ ಎಲ್ಲ ಏಳು ಜಿಲ್ಲೆಗಳ ಜನತೆ ಇಂದಿಗೂ ಜೆ.ಹೆಚ್.ಪಟೇಲರನ್ನು ನೆನೆಯುತ್ತಾರೆ ಎಂದರು.
'ಜೆ.ಹೆಚ್.ಪಟೇಲರು ಕರ್ನಾಟಕ ರಾಜಕಾರಣದ ದಂತಕಥೆ' title=
Photo Courtsey: Twitter

ಬೆಂಗಳೂರು: ರಾಜಕಾರಣಗಳಾಗಿ ಹೆಜ್ಜೆ ಗುರುತು ಬಿಟ್ಟು ಹೋಗಿರುವವರಲ್ಲಿ ಪ್ರಮುಖರಾದ ಜೆ.ಹೆಚ್ ಪಟೇಲರು ದೂರದೃಷ್ಟಿಯ ನಾಯಕ. ಜನಸಾಮಾನ್ಯರಿಗೆ ಒಳಿತು ಮಾಡುವ ವಿಚಾರವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಧೀಮಂತ ನಾಯಕರಾಗಿದ್ದರು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಮರಿಸಿದರು.

ಇದನ್ನೂ ಓದಿ: ಅನ್ಯಕೋಮಿನ ಹುಡುಗನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಯುವತಿಗೆ ಪುಂಡರ ಕಿರಿಕ್

ಪ್ರತಿಪಕ್ಷದಲ್ಲಿದ್ದಾಗ ಮಾಡಿದ ಹೋರಾಟಕ್ಕೆ ಅಧಿಕಾರಕ್ಕೆ ಬಂದಾಗ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದರು. ಜೆ.ಹೆಚ್.ಪಟೇಲರು ಕರ್ನಾಟಕ ರಾಜಕಾರಣದ ಒಂದು ದಂತಕಥೆ.ಅವರ ರಾಜ್ಯದ ಬಗೆಗಿನ ಕಳಕಳಿ, ಸಮಸ್ಯೆಗಳ ಬಗ್ಗೆ ಆಳವಾದ ಜ್ಞಾನ, ತತ್ವಜ್ಞಾನಿಯಾಗಿದ್ದ  ಮುತ್ಸದ್ದಿ ರಾಜಕಾರಣಿಯಾಗಿದ್ದರು. ಒಬ್ಬ ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆಯ ಮೇಲೆ‌‌ ಇದ್ದರೆ, ಮುತ್ಸದ್ದಿಯ ಕಣ್ಣು ಮುಂದಿನ ಜನಾಂಗದ ಮೇಲೆ ಇರುತ್ತದೆ. ಪಟೇಲರು ಎರಡನೇ ವರ್ಗದ ನಾಯಕರು ಎಂದರು.ರಾಜ್ಯದಲ್ಲಿ ದೊಡ್ಡ ಜನಸಂಖ್ಯೆ ಹೆಚ್ಚಿದಾಗ ಉತ್ತಮ ಆಡಳಿತ ನಡೆಸಲು ಅನುಕೂಲವಾಗುವಂತೆ ಪಟೇಲರು ಏಳು ಜಿಲ್ಲೆಗಳ ರಚನೆ, ಕರ್ನಾಟಕದ ಪ್ರಗತಿಯಲ್ಲಿ ಪ್ರಮುಖ ಮೈಲಿಗಲ್ಲು.ಈ ಎಲ್ಲ ಏಳು ಜಿಲ್ಲೆಗಳ ಜನತೆ ಇಂದಿಗೂ ಜೆ.ಹೆಚ್.ಪಟೇಲರನ್ನು ನೆನೆಯುತ್ತಾರೆ ಎಂದರು.

ಜೆ.ಹೆಚ್.ಪಟೇಲರಿಂದ ಕಲಿತಿದ್ದೇನೆ

ವಿಜಯಕರ್ನಾಟಕ ಪತ್ರಿಕೆ  ಸದಾಕಾಲ ಜನಪರವಾದ ಕೆಲಸಗಳನ್ನು ಮಾಡುತ್ತಿದೆ.ಹಾವೇರಿ ಜಿಲ್ಲೆಯ ಬಗ್ಗೆ  ಬಜೆಟ್ ಪೂರ್ವದಲ್ಲಿ ಹಾವೇರಿ ವಿಷನ್ ಡ್ಯಾಕ್ಯುಮೆಂಟ್ ತಯಾರಿಸಿ ಸಲ್ಲಿಸಿದ್ದರು. ಆ ಹಿನ್ನೆಲೆಯಲ್ಲಿ  ಕಾನೂನು ಕಾಲೇಜು, ವೈದ್ಯಕೀಯ ಕಾಲೇಜು ಸ್ಥಾಪಿಸಲಾಗಿದೆ. ಸಿ.ಎಂ ಉದಾಸಿ ಅವರು  ಜೆ.ಹೆಚ್. ಪಟೇಲರಿಗೆ ಒಪ್ಪಿಸಿ ಇಂಜಿನಿಯರಿಂಗ್ ಕಾಲೇಜು ಹಾಗೂ  ಜಿಲ್ಲೆಯಾಗಿದ್ದನ್ನು ಸ್ಮರಿಸಿದರು.  ಜೆ.ಹೆಚ್. ಪಟೇಲರ ರಾಜಕೀಯ ಕಾರ್ಯದರ್ಶಿಯಾಗಿ ಹತ್ತಿರದಿಂದ ಕೆಲಸ ಮಾಡಿ ಯಾವ ಸಂದರ್ಭದಲ್ಲಿ ಯಾವ ರೀತಿ  ನಿರ್ಣಯಗಳನ್ನು ತೆಗೆದುಕೊಳ್ಳಬೇಕೆಂದು  ಕಲಿತಿದ್ದೇನೆ ಎಂದರು.

ಇದನ್ನೂ ಓದಿ: ಗಂಟುರೋಗದಿಂದ ಮೃತಪಟ್ಟ ದನಗಳಿಗೆ 20 ಸಾವಿರ ರೂ.ಗಳ ಪರಿಹಾರ

ಹಾವೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ :

ಹಾವೇರಿ ಜಿಲ್ಲೆಯ ನೀರಾವರಿ, ಶಿಕ್ಷಣ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧ್ಯವಾಗಿದೆ. ಜಿಲ್ಲೆಯಲ್ಲಿ ಎಂಜನಿಯರಿಂಗ್ ಕಾಲೆಜು, ಮೆಡಿಕಲ್ ಕಾಲೇಜು, ಮೆಗಾ ಡೈರಿ, ಇಂಡಸ್ಟ್ರಿಯಲ್ ಪಾರ್ಕ್, ಟೆಕ್ಸ್ಟೈಲ್ ಪಾರ್ಕ್ ಗಳ ನಿರ್ಮಾಣವಾಗುತ್ತಿದೆ. ಜನರ ಆಶೋತ್ತರಗಳು ಹೆಚ್ಚುತ್ತಿವೆ. ಜಿಲ್ಲೆಯ ಸ್ವರೂಪ ಪಡೆದುಕೊಂಡು ಅಭಿವೃದ್ಧಿಯ ಆಯಾಮ ದೊರೆತು 25 ವರ್ಷಗಳು ಸಂದಿರುವ ಸಂದರ್ಭದಲ್ಲಿ ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.

ಟೀಕೆಟಿಪ್ಪಣಿಗಳೇ ಯಶಸ್ಸಿನ ಮೆಟ್ಟಿಲು:

ಅಭಿವೃದ್ದಿ ರಾಜಕಾರಣ ಮಾಡಬೇಕು. ಒಂದು ತಿಂಗಳು ಚುನಾವಣೆ ಮಾಡೋಣ. ಘೋಡಾ ಹೈ ಮೈದಾನ್ ಹೈ.‌ ಜನ ಯಾರಿಗೆ ಆಶಿರ್ವಾದ ಮಾಡುತ್ತಾರೊ ಅವರು ಜನಪರ ಕೆಲಸ ಮಾಡೋಣ.ನಾನು ಯಾವುದೇ ಟೀಕೆ ಟಿಪ್ಪಣಿಗೆ ತಲೆ‌ ಕೆಡಿಸಿಕೊಳ್ಳದೆ ಅಭಿವೃದ್ದಿಪರ ಕೆಲಸ ಮಾಡುತ್ತಿದ್ಧೇನೆ.ಜನಕಲ್ಯಾಣದ ಗುರಿ ವಿಚಲಿತವಾಗದಂತೆ ಕೆಲಸ ಮಾಡುತ್ತಿದ್ದೇನೆ.  ರಾಜಕಾರಣದಲ್ಲಿ ವಿರೋಧಿಗಳಿರಬೇಕು. ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ಟೀಕೆಟಿಪ್ಪಣಿಗಳನ್ನ ಮೆಟ್ಟಿಲುಗಳನ್ನಾಗಿ ಯಶಸ್ಸು ಕಾಣುತ್ತೇನೆ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News