ಸ್ಟಾರ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ವಿಚ್ಛೇದನದ ವದಂತಿಗಳು ಎಲ್ಲೆಡೆ ವೈರಲ್ ಆಗುತ್ತಿದೆ. ಬಾಲಿವುಡ್ ಕ್ಯೂಟ್ ಕಪಲ್ ರಣವೀರ್ ಹಾಗೂ ದೀಪಿಕಾ ಜೋಡಿ ಮಧ್ಯೆ ಬಿರುಕು ಮೂಡಿದಯಾ ಎಂಬ ಅನುಮಾನ ಶುರುವಾಗಿತ್ತು. ಸುಮಾರು 5 ವರ್ಷ ಪ್ರೀತಿಸಿ, 2018 ರಲ್ಲಿ ಮದುವೆಯಾದ ಈ ಜೋಡಿಯನ್ನು ಎಲ್ಲರೂ ಮೆಚ್ಚಿದ್ದರು. ರಣವೀರ್ ಸಿಂಗ್ ಬೆಂಗಳೂರಿನ ಅಳಿಯ ಎಂಬುದೇ ಎಲ್ಲರ ಖುಷಿಯಾಗಿತ್ತು. ಆದರೆ ವೈರಲ್ ಆದ ಆ ಒಂದು ಟ್ವೀಟ್ ಈ ಸ್ಟಾರ್ ಕಪಲ್ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ವೈರಲ್ ಟ್ವೀಟ್ ನೋಡಿ ದೀಪಿಕಾ ಮತ್ತು ರಣವೀರ್ ಬೇರೆ ಬೇರೆ ಆಗಿಬಿಡ್ತಾರಾ ಎಂದು ಎಲ್ಲರೂ ಚಿಂತಿಸುತ್ತಿದ್ದರು. ಆದರೆ ವೈರಲ್ ಆದ ಟ್ವೀಟ್ಗೆ ಖುದ್ದು ರಣವೀರ್ ಸಿಂಗ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ : ಬ್ಯಾಕ್ಲೆಸ್ ಪೋಸ್ನಲ್ಲಿ ʻಕಬ್ಜʼ ಸುಂದರಿ ಶ್ರೀಯಾ ಶರಣ್
ರಣವೀರ್ ಸಿಂಗ್ ಅವರು ದೀಪ್ವೀರ್ ಅಭಿಮಾನಿಗಳಿಗೆ ಬಿಗ್ ರಿಲೀಫ್ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬಳಕೆದಾರರು ಅವರನ್ನು 'ಪವರ್ ಕಪಲ್' ಎಂದು ಶ್ಲಾಘಿಸಿದ್ದಾರೆ. ದೀಪ್ವೀರ್ ನಡುವೆ ಏನೂ ಸರಿ ಇಲ್ಲ ಎಂಬ ಟ್ವೀಟ್ ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿಯಂತೆ ಹರಿದಾಡುತ್ತಿದೆ. ಉಮೈರ್ ಸಂಧು ಈ ರೀತಿಯ ಟ್ವೀಟ್ ಮಾಡಿದ್ದು, ಅಭಿಮಾನಿಗಳ ಆತಂಕಕ್ಕೆ ಅದು ಕಾರಣವಾಗಿತ್ತು. ಆದರೆ ಅದು ಫೇಕ್ ಸುದ್ದಿ ಎಂಬ ಸ್ಪಷ್ಟನೆ ಇದೀಗ ದೊರೆತಿದೆ. ದೀಪಿಕಾ ಹಾಗೂ ರಣವೀರ್, ಅಭಿಮಾನಿಗಳು ಈ ಟ್ವಿಟ್ಟರ್ ಯೂಸರ್ ವಿರುದ್ಧ ಪೊಲೀಸರಿಗೆ ದೂರು ಕೂಡ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
Cartier ಆಭರಣ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ದೀಪಿಕಾ ಆಯ್ಕೆಯಾಗಿದ್ದು, “ಭಾರತೀಯ ನಟಿ ದೀಪಿಕಾಪಡುಕೋಣೆ ಅವರನ್ನು ತನ್ನ ಹೊಸ ರಾಯಭಾರಿಯಾಗಿ ಕುಟುಂಬಕ್ಕೆ ಸ್ವಾಗತಿಸಲು ಸಂತೋಷವಾಗಿದೆ." ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ಗೆ ರಣವೀರ್ ಸಿಂಗ್ ಪ್ರತಿಕ್ರಿಯಿಸಿದ್ದು, "ನನ್ನ ರಾಣಿ! ನಾವು ಹೆಮ್ಮೆ ಪಡುವಂತೆ ಮಾಡಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ. ಈ ಮೂಲಕ ವಿಚ್ಛೇದನದ ವದಂತಿಗೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ : ಕತ್ತು ಹಿಸುಕಿ ಜಮ್ಮು ಕಾಶ್ಮೀರ ಡಿಜಿ ಹತ್ಯೆ , ನಂತರ ಬಾಟಲಿಯಿಂದ ಕಟ್ಟು ಸೀಳಿದ ಪಾತಕಿ .!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.