ಏಷ್ಯಾಕಪ್ ನಲ್ಲಿ ಧೋನಿ ಮಾಡಿದ ವಿಶ್ವದಾಖಲೆ ಏನು ಗೊತ್ತಾ?

ಬಾಂಗ್ಲಾದೇಶದ ಫೈನಲ್ ಪಂದ್ಯದಲ್ಲಿ ಮಹೇಂದ್ರಸಿಂಗ್  ಧೋನಿ ನೂತನ  ವಿಶ್ವದಾಖಲೆ ಮಾಡಿದ್ದಾರೆ. ಆ ಮೂಲಕ ಭಾರತ ಕಂಡ ಸಾರ್ವಕಾಲಿಕ ಶ್ರೇಷ್ಠ ವಿಕೆಟ್ ಕೀಪರ್ ಗಳಲ್ಲಿ ಧೋನಿ ಒಬ್ಬರು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

Last Updated : Sep 29, 2018, 01:23 PM IST
ಏಷ್ಯಾಕಪ್ ನಲ್ಲಿ ಧೋನಿ ಮಾಡಿದ ವಿಶ್ವದಾಖಲೆ ಏನು ಗೊತ್ತಾ? title=

ನವದೆಹಲಿ: ಬಾಂಗ್ಲಾದೇಶದ ಫೈನಲ್ ಪಂದ್ಯದಲ್ಲಿ ಮಹೇಂದ್ರಸಿಂಗ್  ಧೋನಿ ನೂತನ  ವಿಶ್ವದಾಖಲೆ ಮಾಡಿದ್ದಾರೆ. ಆ ಮೂಲಕ ಭಾರತ ಕಂಡ ಸಾರ್ವಕಾಲಿಕ ಶ್ರೇಷ್ಠ ವಿಕೆಟ್ ಕೀಪರ್ ಗಳಲ್ಲಿ ಧೋನಿ ಒಬ್ಬರು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಶುಕ್ರವಾರದಂದು ನಡೆದ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಧೋನಿ,ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 800ಕ್ಕೂ ಅಧಿಕ ಸ್ಟಂಪ್ ಔಟ್ ಗಳನ್ನು ಮಾಡುವ ಮೂಲಕ ಈ ಸಾಧನೆ ಮಾಡಿದ ಮೊದಲ ಏಷ್ಯನ್ ಕ್ರಿಕೆಟಿಗ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. 

ಟೆಸ್ಟ್,ಏಕದಿನ ಮತ್ತು ಟಿ20ಐಗಳ ಎಲ್ಲ ಸೇರಿ ಧೋನಿ ಈಗ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕದ ಕ್ರಿಕೆಟಿಗ ಮಾರ್ಕ್ ಬೌಚರ್ (998) ಮತ್ತು ಆಸ್ಟ್ರೇಲಿಯಾದ ಆಡಮ್ ಗಿಲ್ಕ್ರಿಸ್ಟ್ (905) ನಂತರದ ಸ್ಥಾನವನ್ನು ಪಡೆದಿದ್ದಾರೆ.

 

Trending News