Bangalore CCB : ಚೈನೀಸ್​ ಲೋನ್​ ಆ್ಯಪ್‌ಗಳಿಂದ 100 ಕೋಟಿಗೂ ಹೆಚ್ಚು ಹಣ ಫ್ರೀಜ್ ​: ಸಿಸಿಬಿಯಿಂದ 70 ಕೋಟಿ ಜಪ್ತಿ

ಚೀನಾ ಮೂಲದ ಲೋನ್​ ಆ್ಯಪ್​ಗಳಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಸಾಲ ಕೊಡುವ ಚೈನೀಸ್​ ಲೋನ್​ ಆ್ಯಪ್​ಗಳ ಹಾವಳಿ ನಿಯಂತ್ರಿಸಲು ಬೆಂಗಳೂರು ನಗರ ಪೊಲೀಸದು ಮುಂದಾಗಿದ್ದಾರೆ. ಒಂದು ವರ್ಷದಲ್ಲಿ ಅಂದಾಜು 100 ಕೋಟಿ ಹಣ ಫ್ರೀಜ್​ ಮಾಡಿದ್ದಾರೆ.

Written by - VISHWANATH HARIHARA | Last Updated : Oct 7, 2022, 07:12 PM IST
  • ಚೀನಾ ಮೂಲದ ಲೋನ್​ ಆ್ಯಪ್​
  • ಲೋನ್​ ಆ್ಯಪ್​ಗಳಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ
  • ಚೈನೀಸ್​ ಲೋನ್​ ಆ್ಯಪ್​ಗಳ ಹಾವಳಿ ನಿಯಂತ್ರಿಸಲು
Bangalore CCB : ಚೈನೀಸ್​ ಲೋನ್​ ಆ್ಯಪ್‌ಗಳಿಂದ 100 ಕೋಟಿಗೂ ಹೆಚ್ಚು ಹಣ ಫ್ರೀಜ್ ​: ಸಿಸಿಬಿಯಿಂದ 70 ಕೋಟಿ ಜಪ್ತಿ title=

ಬೆಂಗಳೂರು : ಚೀನಾ ಮೂಲದ ಲೋನ್​ ಆ್ಯಪ್​ಗಳಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಸಾಲ ಕೊಡುವ ಚೈನೀಸ್​ ಲೋನ್​ ಆ್ಯಪ್​ಗಳ ಹಾವಳಿ ನಿಯಂತ್ರಿಸಲು ಬೆಂಗಳೂರು ನಗರ ಪೊಲೀಸದು ಮುಂದಾಗಿದ್ದಾರೆ. ಒಂದು ವರ್ಷದಲ್ಲಿ ಅಂದಾಜು 100 ಕೋಟಿ ಹಣ ಫ್ರೀಜ್​ ಮಾಡಿದ್ದಾರೆ.

2 ರಿಂದ 7 ಸಾವಿರದವರೆಗೆ ಸಾಲ ಕೊಟ್ಟು ಅದನ್ನ ಮರುಪಾವತಿ ಮಾಡದ ಗ್ರಾಹಕರಿಗೆ ಅಶ್ಲೀಲ ಸಂದೇಶ ಹಾಗೂ ಬೈದು ಕಿರುಕುಳ ನೀಡಲಾಗುತ್ತಿತ್ತು. ಆನ್‌ಲೈನ್ ಲೋನ್ ಆ್ಯಪ್​ಗಳ ಉಪಟಳಕ್ಕೆ ಈಗಾಗಲೇ ದೇಶದಾದ್ಯಂತ ಸಾಕಷ್ಟು ಮಂದಿ ಮೋಸ ಹೋಗಿದ್ದಾರೆ. ಇದಕ್ಕೆ ಸಿಲಿಕಾನ್​ ಸಿಟಿ ಸಹ ಹೊರತಾಗಿಲ್ಲ. ಹೀಗಾಗಿ ಬೆಂಗಳೂರು   ಸಿಸಿಬಿ ಹಾಗೂ ನಗರದ ಸೆನ್​ ಪೊಲೀಸ್​ ಠಾಣೆಯ ಅಧಿಕಾರಿಗಳು ಒಂದು ವರ್ಷದಿಂದ ಲೋನ್​ ಆ್ಯಪ್​ಗಳ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಚೈನೀಸ್​ ಲೋನ್​ ಆ್ಯಪ್​ಗಳ ಬೆನ್ನು ಬಿದ್ದಿರುವ ಪೊಲೀಸರು, ಸುಮಾರು ನೂರು ಕೋಟಿ ಪ್ರೀಜ್ ಮಾಡಿದ್ದಾರೆ. 

ಇದನ್ನೂ ಓದಿ : ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಜನಸಂಖ್ಯೆಗೆ ತಕ್ಕಂತೆ ಹೆಚ್ಚಿಸಿ : ಹೆಚ್‌ಡಿಕೆ ಸಲಹೆ

ಚೈನೀಸ್​ ಲೋನ್​ ಆ್ಯಪ್​ ಸೇರಿದಂತೆ ಸೈಬರ್​ ಚೋರರ ಪ್ರಕರಣಗಳಿಗೆ ಸಂಬಂಧಿಸಿದಂತೆ ನಗರದ ಸೆನ್​ ಠಾಣೆಯ ಪೊಲೀಸರು ಸಾಕಷ್ಟು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಈಗಾಗಲೇ ಹಲವು ಆರೋಪಿಗಳನ್ನ ಬಂಧಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ನಗರದ 8 ಸೆನ್​ ಪೊಲೀಸ್​ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಿಂದ 40 ಕೋಟಿಗೂ ಅಧಿಕ ಹಾಗೂ ಸಿಸಿಬಿ ತನಿಖೆ ನಡೆಸುತ್ತಿರುವ 18 ಪ್ರಕರಣಗಳಲ್ಲಿ ಅಂದಾಜು 70 ಕೋಟಿ ಹಣವನ್ನು ಆ್ಯಪ್​ಗಳಿಗೆ ಸಂಬಂಧಿಸಿದ ವಿವಿಧ ಬ್ಯಾಂಕ್​ ಖಾತೆಗಳಿಂದ ಫ್ರೀಜ್​ ಮಾಡಲಾಗಿದೆ. ಸಿಸಿಬಿ ಪೊಲೀಸರು ಭೇದಿಸಿರುವ 18 ಪ್ರಕರಣಗಳಲ್ಲಿ ಪ್ರೀಜ್ ಆದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಜಾರಿ ನಿರ್ದೇಶಾನಾಲಯಕ್ಕೆ (ಇಡಿ) ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂದು ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರಮನ್​ ಗುಪ್ತಾ ಹೇಳಿದ್ದಾರೆ.  

ಭಾರತದಲ್ಲಿ ಲೋನ್​ ಆ್ಯಪ್​ಗಳ ಮೂಲಕ ಸಂಪಾದಿಸುವ ಕೋಟ್ಯಾಂತರ ರೂ ಹಣವನ್ನ ಹಾಂಕಾಂಗ್​ ಹಾಗೂ ಚೀನಾಗೆ ಟ್ರೇಡಿಂಗ್​ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ. ಹೀಗಾಗಿ ಭಾರತದಿಂದ ಹೊರ ಹೋಗುತ್ತಿರುವ ಕೋಟ್ಯಾಂತರ ರೂಪಾಯಿ ಹಾಗೂ ಫ್ರೀಜ್​ ಆಗಿರುವ ಹಣದ ಬಗ್ಗೆ ಮುಂದೆ ಇಡಿ ತನಿಖೆ ನಡೆಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಇನ್ನು ಮೂರು ದಿನ ಓಲಾ, ಉಬರ್, ರಾಪಿಡೊ ಆಟೋ ಸೇವೆಗಳು ಬಂದ್: ಕಾರಣ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News