ರಾಜ್ಯದಲ್ಲಿ ಇನ್ನು ಮೂರು ದಿನ ಓಲಾ, ಉಬರ್, ರಾಪಿಡೊ ಆಟೋ ಸೇವೆಗಳು ಬಂದ್: ಕಾರಣ!

ಈ ಅಪ್ಲಿಕೇಶನ್ ಆಧಾರಿತ ಅಗ್ರಿಗೇಟರ್‌ಗಳ ಆಟೋ ಸೇವೆಗಳು ಕೇವಲ 2 ಕಿಮೀ ನಿಲುಗಡೆಗೆ ಸಹ ವಿಪರೀತವಾಗಿ ಹೆಚ್ಚಿನ ದರಗಳನ್ನು ವಿಧಿಸುತ್ತಿವೆ ಎಂದು ಹಲವಾರು ದಿನನಿತ್ಯದ ಪ್ರಯಾಣಿಕರು ವರದಿ ಮಾಡಿದ ನಂತರ ಈ ಕ್ರಮವು ಜಾರಿಗೆ ಬಂದಿದೆ.

Written by - Bhavishya Shetty | Last Updated : Oct 7, 2022, 05:28 PM IST
    • ಮುಂದಿನ ಮೂರು ದಿನಗಳಲ್ಲಿ ರಾಜ್ಯದಲ್ಲಿ ಎಲ್ಲಾ ಆಟೋ ಸೇವೆಗಳು ಬಂದ್
    • ಅಪ್ಲಿಕೇಶನ್ ಆಧಾರಿತ ಅಗ್ರಿಗೇಟರ್‌ಗಳ ಆಟೋ ಸೇವೆಗಳು ವಿಪರೀತವಾಗಿ ದರಗಳನ್ನು ವಿಧಿಸುತ್ತಿವೆ ಎಂಬ ಆರೋಪ
    • ಉತ್ತರ ಮತ್ತು ಅನುಸರಣೆ ವರದಿಯನ್ನು ಸಲ್ಲಿಸಲು ಕಾಲಾವಕಾಶ ನೀಡಿದ ಸರ್ಕಾರ
ರಾಜ್ಯದಲ್ಲಿ ಇನ್ನು ಮೂರು ದಿನ ಓಲಾ, ಉಬರ್, ರಾಪಿಡೊ ಆಟೋ ಸೇವೆಗಳು ಬಂದ್: ಕಾರಣ!  title=

ಬೆಂಗಳೂರು: ಕರ್ನಾಟಕ ಸರ್ಕಾರವು ಆನ್ ಡಿಮ್ಯಾಂಡ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ ಆಕ್ಟ್ 2016 ರ ಅಡಿಯಲ್ಲಿ ದೊಡ್ಡ ಆ್ಯಪ್ ಆಧಾರಿತ ಕ್ಯಾಬ್ ಮತ್ತು ಬೈಕ್ ಅಗ್ರಿಗೇಟರ್ ಉಬರ್, ಓಲಾ ಮತ್ತು ರಾಪಿಡೋಗಳನ್ನು "ಅಕ್ರಮ" ಎಂದು ಘೋಷಿಸಿದೆ. ಮತ್ತು ಮುಂದಿನ ಮೂರು ದಿನಗಳಲ್ಲಿ ರಾಜ್ಯದಲ್ಲಿ ಅವುಗಳ ಎಲ್ಲಾ ಆಟೋ ಸೇವೆಗಳನ್ನು ನಿಲ್ಲಿಸಲು ಆದೇಶಿಸಿದೆ.

ಇದನ್ನೂ ಓದಿ: ಚಿಕಿತ್ಸೆ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ

ಸರ್ಕಾರ ಗುರುವಾರ ನೋಟಿಸ್ ಜಾರಿ ಮಾಡಿದ್ದು, ಉತ್ತರ ಮತ್ತು ಅನುಸರಣೆ ವರದಿಯನ್ನು ಸಲ್ಲಿಸಲು ಮೂರು ದಿನಗಳ ಕಾಲಾವಕಾಶವನ್ನು ನೀಡಿದೆ.

ಈ ಅಪ್ಲಿಕೇಶನ್ ಆಧಾರಿತ ಅಗ್ರಿಗೇಟರ್‌ಗಳ ಆಟೋ ಸೇವೆಗಳು ಕೇವಲ 2 ಕಿಮೀ ನಿಲುಗಡೆಗೆ ಸಹ ವಿಪರೀತವಾಗಿ ಹೆಚ್ಚಿನ ದರಗಳನ್ನು ವಿಧಿಸುತ್ತಿವೆ ಎಂದು ಹಲವಾರು ದಿನನಿತ್ಯದ ಪ್ರಯಾಣಿಕರು ವರದಿ ಮಾಡಿದ ನಂತರ ಈ ಕ್ರಮವು ಜಾರಿಗೆ ಬಂದಿದೆ.

ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಅಗ್ರಿಗೇಟರ್‌ಗಳು ಆಟೋರಿಕ್ಷಾ ಸೇವೆಗಳನ್ನು ಒದಗಿಸುತ್ತಿದ್ದಾರೆ. ಅಲ್ಲದೆ, ಗ್ರಾಹಕರಿಗೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ವಿಧಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ' ಎಂದು ಸಾರಿಗೆ ಆಯುಕ್ತ ಟಿ ಹೆಚ್ ಎಂ ಕುಮಾರ್ ಹೇಳಿದ್ದಾರೆ.

ರಾಜ್ಯ ಸಾರಿಗೆ ಅಧಿಕಾರಿಗಳ ಪ್ರಕಾರ, ಈ ಅಗ್ರಿಗೇಟರ್‌ಗಳು ಕ್ಯಾಬ್-ಅಗ್ರಿಗೇಟರ್ ಪರವಾನಗಿಯೊಂದಿಗೆ ಆಟೋರಿಕ್ಷಾಗಳನ್ನು ಓಡಿಸಬಾರದು. ಏಕೆಂದರೆ ಅಗ್ರಿಗೇಟರ್ ನಿಯಮಗಳು ಕ್ಯಾಬ್‌ಗಳಿಗೆ ಮಾತ್ರ ಇವೆ. ಆನ್-ಡಿಮಾಂಡ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ ಆಕ್ಟ್ 2016 ರ ಅಡಿಯಲ್ಲಿ ನಿಬಂಧನೆಗಳ ಪ್ರಕಾರ ಅಗ್ರಿಗೇಟರ್‌ಗಳಿಗೆ ಟ್ಯಾಕ್ಸಿ ಸೇವೆಗಳನ್ನು ಒದಗಿಸಲು ಮಾತ್ರ ಪರವಾನಗಿ ನೀಡಲಾಗುತ್ತದೆ. ಟ್ಯಾಕ್ಸಿ ಎಂದರೆ ಗುತ್ತಿಗೆಯಲ್ಲಿ ಸಾರ್ವಜನಿಕ ಸೇವಾ ಪರವಾನಗಿ ಹೊಂದಿರುವ ಚಾಲಕನನ್ನು ಹೊರತುಪಡಿಸಿ 6 ಪ್ರಯಾಣಿಕರನ್ನು ಮೀರದ ಆಸನ ಸಾಮರ್ಥ್ಯ ಹೊಂದಿರುವ ಮೋಟಾರ್ ಕ್ಯಾಬ್" ಎಂದು ಸಾರಿಗೆ ಹೇಳಿದೆ. ಆಯುಕ್ತ ಟಿಎಚ್‌ಎಂ ಕುಮಾರ್ ಗುರುವಾರ ನೋಟಿಸ್ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯೇ ಕ್ಲಿನಿಕ್... ಮಂಡಿ ನೋವು, ಕೀಲು ನೋವಿಗೆ ಈ ರಸ್ತೆಯಲ್ಲಿದೆ ಮದ್ದು!!

"ಆಟೋ ಸೇವೆಗಳನ್ನು ಸ್ಥಗಿತಗೊಳಿಸಬೇಕು ಮತ್ತು ಪ್ರಯಾಣಿಕರಿಗೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಶುಲ್ಕವನ್ನು ವಿಧಿಸಬಾರದು" ಎಂದು ಇಲಾಖೆಯ ಸೂಚನೆಯನ್ನು ನೀಡಲಾಗಿದೆ. 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News