ಈ ರಾಶಿಯವರಿಗೆ ಭಾರೀ ಧನ ಸಂಪತ್ತು ಕರುಣಿಸಲಿದ್ದಾನೆ ಸೂರ್ಯ.! ಎಲ್ಲಾ ಕಾರ್ಯಗಳಲ್ಲಿ ಸಿಗುವುದು ಯಶಸ್ಸು

ನವೆಂಬರ್‌ನಲ್ಲಿ, ಸೂರ್ಯ ದೇವ ವೃಶ್ಚಿಕ ರಾಶಿ ಪ್ರವೆಶಿಸಲಿದ್ದಾನೆ. ಇದು ಪ್ರತಿಯೊಂದು ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.

Written by - Ranjitha R K | Last Updated : Oct 12, 2022, 10:26 AM IST
  • ನವೆಂಬರ್‌ನಲ್ಲಿ ಸೂರ್ಯ ದೇವ ರಾಶಿಯನ್ನು ಬದಲಾಯಿಸಲಿದ್ದಾನೆ.
  • ನವೆಂಬರ್ 16 ರ ಸಂಜೆ 6.58 ನಿಮಿಷಕ್ಕೆ ವೃಶ್ಚಿಕ ರಾಶಿಯಲ್ಲಿ ಸೂರ್ಯ ಸಂಕ್ರಮಣ
  • ತೆರೆಯಲಿದೆ ಈ ರಾಶಿಯವರ ಅದೃಷ್ಟದ ಬಾಗಿಲು
ಈ ರಾಶಿಯವರಿಗೆ ಭಾರೀ ಧನ ಸಂಪತ್ತು ಕರುಣಿಸಲಿದ್ದಾನೆ ಸೂರ್ಯ.! ಎಲ್ಲಾ ಕಾರ್ಯಗಳಲ್ಲಿ ಸಿಗುವುದು ಯಶಸ್ಸು   title=
Sun transit effect (file photo)

ಬೆಂಗಳೂರು : ನವೆಂಬರ್‌ನಲ್ಲಿ ಸೂರ್ಯ ದೇವ ರಾಶಿಯನ್ನು ಬದಲಾಯಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವೆಂಬರ್ 16 ರ ಸಂಜೆ 6.58 ನಿಮಿಷಕ್ಕೆ ವೃಶ್ಚಿಕ ರಾಶಿಯಲ್ಲಿ ಸೂರ್ಯ ಸಂಕ್ರಮಿಸುತ್ತಾನೆ. ಈ ಬದಲಾವಣೆಯು ಯಾವ ರಾಶಿಚಕ್ರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಯಾವ ರಾಶಿಯವರ ಅದೃಷ್ಟ ತೆರೆಯಲಿದೆ ನೋಡೋಣ.  

ಮೇಷ ರಾಶಿ :
ಸೂರ್ಯ ದೇವರು ಮೇಷ ರಾಶಿಯ ಐದನೇ ಮತ್ತು ಎಂಟನೇ ಮನೆಯ ಅಧಿಪತಿ. ಆದ್ದರಿಂದ, ಈ ರಾಶಿಚಕ್ರದ ಜನರು ಸಂಶೋಧನಾ ಕಾರ್ಯದಲ್ಲಿ ಪ್ರಗತಿಯನ್ನು ಹೊಂದುತ್ತಾರೆ. ಆರೋಗ್ಯ ಸಂಬಂಧಿ ಸಮಸ್ಯೆಗಳು ಕೂಡಾ ಎದುರಾಗಬಹುದು. 

ಇದನ್ನೂ ಓದಿ : Diwali 2022: ದೀಪಾವಳಿಗೂ ಮುನ್ನ ಮನೆಯಲ್ಲಿ ಈ ಬದಲಾವಣೆ ಮಾಡದಿದ್ದರೆ ಭಾರೀ ನಷ್ಟ ಅನುಭವಿಸುತ್ತೀರಿ!

ವೃಷಭ ರಾಶಿ :
ಸೂರ್ಯ ದೇವರು ವೃಷಭ ರಾಶಿಯ ಏಳನೇ ಮತ್ತು ನಾಲ್ಕನೇ ಮನೆಯ ಅಧಿಪತಿ. ವ್ಯಾಪಾರ ಮಾಡುತ್ತಿರುವವರು ಹೊಸ ಅವಕಾಶಗಳನ್ನು ಪಡೆಯಬಹುದು. ಸಂಬಂಧದಲ್ಲಿಯೂ ಏರಿಳಿತಗಳಿರಬಹುದು. ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ.

ಮಿಥುನ ರಾಶಿ : 
ಮಿಥುನ ರಾಶಿಯ ಮೂರು ಮತ್ತು ಆರನೇ ಮನೆಗಳ ಅಧಿಪತಿ ಸೂರ್ಯ. ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ಯಶಸ್ಸನ್ನು ಪಡೆಯಬಹುದು. ಎಂಎನ್‌ಸಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಲಾಭವಾಗಲಿದೆ.  

ಮಕರ ರಾಶಿ : 
ಈ ರಾಶಿಯವರ ಸಂಪತ್ತು ವೃದ್ಧಿಯಾಗಲಿದೆ. ಇದರ ಹೊರತಾಗಿ, ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭವಾಗಲಿದೆ. ಈ ರಾಶಿಯವರ ವೈಯಕ್ತಿಕ ಜೀವನಕ್ಕೆ ಇದು ಉತ್ತಮ ಸಮಯವಾಗಿರುತ್ತದೆ. 

ಇದನ್ನೂ ಓದಿ : Remedies For Beautiful Wife: ಈ ಒಂದು ಪರಿಹಾರ ಮಾಡಿ, ನಿಮ್ಮ ಕನಸಿನ ರಾಣಿ ಮಡದಿಯಾಗುತ್ತಾಳೆ.!

ವೃಶ್ಚಿಕ ರಾಶಿ : 
ವೃಶ್ಚಿಕ ರಾಶಿಯ ಹತ್ತನೇ ಮನೆಯ ಅಧಿಪತಿ ಸೂರ್ಯ. ವ್ಯಾಪಾರ ಮಾಡುವವರು ಲಾಭವನ್ನು ಪಡೆಯಬಹುದು. ಜನರಿಂದ ಗೌರವ ಸಿಗಲಿದೆ. 

ತುಲಾ ರಾಶಿ : 
ಸೂರ್ಯ ದೇವರು  ತುಲಾ ರಾಶಿಯವರ ಎರಡನೇ ಮತ್ತು 11 ನೇ ಮನೆಯ ಅಧಿಪತಿ.  ಈ ರಾಶಿಯವರಿಗೆ ಆರ್ಥಿಕ ಲಾಭವಾಗಬಹುದು. ಇದಲ್ಲದೇ ಉಳಿತಾಯ ಮಾಡುವುದರಲ್ಲೂ ಯಶಸ್ವಿಯಾಗಲಿದ್ದಾರೆ. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News