Kiccha Sudeep : KGF ನಿರ್ಮಾಪಕರ ಜೊತೆ ಸುದೀಪ್ ಸಿನಿಮಾ? ಕುತೂಹಲ ಹೆಚ್ಚಿಸಿದ ಆ ಒಂದು ಫೋಟೋ!

Kiccha Sudeep : ಕಿಚ್ಚ ಸುದೀಪ್ ಅವರ ಹೊಸ ಚಿತ್ರ ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಾ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. 

Written by - Chetana Devarmani | Last Updated : Oct 12, 2022, 03:25 PM IST
  • KGF ನಿರ್ಮಾಪಕರ ಜೊತೆ ಸುದೀಪ್ ಸಿನಿಮಾ?
  • ಕುತೂಹಲ ಹೆಚ್ಚಿಸಿದ ಆ ಒಂದು ಫೋಟೋ!
  • ಸಿನಿ ಪ್ರಿಯರ ಅಚ್ಚರಿಗೆ ಕಾರಣವಾಗಿದೆ ಈ ಲೈನ್‌
Kiccha Sudeep : KGF ನಿರ್ಮಾಪಕರ ಜೊತೆ ಸುದೀಪ್ ಸಿನಿಮಾ? ಕುತೂಹಲ ಹೆಚ್ಚಿಸಿದ ಆ ಒಂದು ಫೋಟೋ! title=
ಸುದೀಪ್

Kiccha Sudeep : ಭಾರತೀಯ ಚಿತ್ರರಂಗದಲ್ಲಿ ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆಯು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಕೆಜಿಎಫ್, ಕಾಂತಾರದಂತಹ ಸಿನಿಮಾಗಳ ಮೂಲಕ ಈ ದೇಶಾದ್ಯಂತ ಖ್ಯಾತಿ ಪಡೆದಿದೆ. ಪರಭಾಷೆಯ ಚಿತ್ರಗಳಿಗೆ ಸಹ ಹೊಂಬಾಳೆ ಫಿಲ್ಮ್ಸ್‌ ಬಂಡವಾಳ ಹೂಡಿದೆ. ಇದೀಗ ಕಿಚ್ಚ ಸುದೀಪ್ ಅವರ ಹೊಸ ಚಿತ್ರ ಕೂಡ ಇದೇ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಾ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಇದಕ್ಕೆ ಕಾರಣ ಒಂದೇ ಒಂದು ಫೋಟೋ.

ಇದನ್ನೂ ಓದಿ : "ಅವರ ಖಾಸಗಿ ಭಾಗಗಳಿಗೆ ರೇಟಿಂಗ್‌ ನೀಡಲು Bigg Boss ಮನೆಗೆ ಹೋಗಬೇಕಂತೆ ಈ ನಟಿ"

ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆಯ ಕಾರ್ತಿಕ್ ಗೌಡ ಅವರು ಸಾಮಾಜಿಕ ಮಾಧ್ಯಮದಲ್ಲಿ ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಒಂದು ಫೋಟೋ ಕಿಚ್ಚನ ಅಭಿಮಾನಿಗಳ ತಲೆಯಲ್ಲಿ ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ‘ಹೊಸ ಆರಂಭಕ್ಕೆ ಕಿಚ್ಚ ಸುದೀಪ್ ಸರ್’ ಎಂದು ಈ ಫೋಟೋಗೆ ಕಾರ್ತಿಕ್‌ ಗೌಡ ಶೀರ್ಷಿಕೆ ನೀಡಿದ್ದಾರೆ.

 

 

ಸಿನಿಮಾ ಮಂದಿ ಸಾಮಾನ್ಯವಾಗಿ ವಿನಾಕಾರಣ ಇಂತಹ ಫೋಟೋಗಳನ್ನು ಅಪ್ ಲೋಡ್ ಮಾಡುವುದಿಲ್ಲ. ಹಾಗಾಗಿ ಸುದೀಪ್ ಕೂಡ ಹೊಂಬಾಳೆ ಫಿಲ್ಮ್ಸ್‌ ಜೊತೆ ಕೈ ಜೋಡಿಸುವ ಸಾಧ್ಯತೆಯಿದೆ ಎಂಬುದು ನೆಟ್ಟಿಗರು ಮಾತು. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟನೆ ಮಾತ್ರ ಯಾರ ಕಡೆಯಿಂದಲೂ ಸಿಕ್ಕಿಲ್ಲ.  

ಇದನ್ನೂ ಓದಿ : ಅಕ್ಟೋಬರ್ 14 ರಿಂದ ಬಾಲಿವುಡ್ ನಲ್ಲೂ "ಕಾಂತಾರ"ದ ಹವಾ ಶುರು

ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ನಂತರ ಅವರು ನಟಿಸಲಿರುವ ಹೊಸ ಚಿತ್ರದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಅಪ್‌ಡೇಟ್ ಇಲ್ಲ. ಅದಕ್ಕೂ ಮುನ್ನ ಕಾರ್ತಿಕ್ ಗೌಡ ಜೊತೆ ಕಾಣಿಸಿಕೊಂಡಿರುವುದು ಸಿನಿ ಪ್ರಿಯರ ಅಚ್ಚರಿಗೆ ಕಾರಣವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News