ನವದೆಹಲಿ: ಭಾರತದಲ್ಲಿ ಸ್ಮಾರ್ಟ್ಫೋನ್ ತಯಾರಕರಿಗೆ ಹಬ್ಬದ ಋತುವಿನ ಮಾರಾಟ ಭರ್ಜರಿಯಾಗಿ ನಡೆದಿದೆ. ಲಕ್ಷಾಂತರ ಯುನಿಟ್ಗಳು ಮಾರಾಟವಾಗುವುದರೊಂದಿಗೆ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಇತರ ಫೋನ್ಗಳಿಗೆ ತೀವ್ರ ಸ್ಪರ್ಧೆಯನ್ನೊಡಿದೆ ಎಂದು ಹೊಸ ವರದಿ ಬಹಿರಂಗಪಡಿಸಿದೆ.
ವರದಿಯ ಪ್ರಕಾರ ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ ನ ಸ್ಮಾರ್ಟ್ಫೋನ್ ಖರೀದಿಸಲು ಭಾರತೀಯರು ಮುಗಿಬಿದ್ದಿದ್ದಾರಂತೆ. ಹಬ್ಬದ ಋತುವಿನ ಒಟ್ಟು ಮಾರಾಟದ ಶೇ.26ರಷ್ಟನ್ನು ಸ್ಯಾಮ್ಸಂಗ್ ಹೊಂದಿದೆ. ಸೆಪ್ಟೆಂಬರ್ 30ರವರೆಗಿನ ಅವಧಿಯಲ್ಲಿ ಸ್ಯಾಮ್ಸಂಗ್ 33 ಲಕ್ಷಕ್ಕೂ ಹೆಚ್ಚು ಸ್ಮಾರ್ಟ್ಫೋನ್ಗಳನ್ನು ಮಾರಾಟ ಮಾಡಿದೆಯಂತೆ.
ಇದನ್ನೂ ಓದಿ: Electricity Bill saving tips: ವಿದ್ಯುತ್ ಬಿಲ್ ಅರ್ಧದಷ್ಟು ಕಡಿಮೆ ಮಾಡಲು ಈ ಸಾಧನವನ್ನು ಸ್ಥಾಪಿಸಿ
ಈ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳು ಭರ್ಜರಿ ಸೇಲ್
Galaxy S21 FE, Galaxy S22 Ultra, Galaxy S22 Plus ಮತ್ತು Galaxy Z Flip 3ನಂತಹ ಪ್ರೀಮಿಯಂ ಸ್ಮಾರ್ಟ್ಫೋನ್ ಮಾದರಿಗಳು ಭರ್ಜರಿ ಮಾರಾಟವಾಗಿವೆ. ಬೆಲೆ ಮತ್ತು ರಿಯಾಯಿತಿಗಳಿಂದ ಅತಿಹೆಚ್ಚಿನ ಮಾರಾಟವಾಗಿದೆ ಎಂದು ವರದಿ ಹೇಳಿದೆ. ಇದರ ಮಧ್ಯಯೇ ಬಜೆಟ್ ಶ್ರೇಣಿಯ ಹ್ಯಾಂಡ್ಸೆಟ್ಗಳು ಸಹ ಸಾಕಷ್ಟು ಜನಪ್ರಿಯವಾಗಿವೆ. ವಿಶೇಷವಾಗಿ ಈ ಮಾರಾಟದ ಅವಧಿಯಲ್ಲಿ Galaxy F13 ಮತ್ತು Galaxy M13 ಮೇಲೆ ಭಾರೀ ರಿಯಾಯಿತಿ ನೀಡಲಾಗಿತ್ತು.
ಈ ಬ್ರ್ಯಾಂಡ್ಗಳನ್ನು ಹಿಂದಿಕ್ಕಿದ ಸ್ಯಾಮ್ಸಂಗ್
Xiaomi ಮತ್ತು Realmeನಂತಹ ಚೀನೀ ಸ್ಮಾರ್ಟ್ಫೋನ್ ಬ್ರಾಂಡ್ಗಳು ಹಬ್ಬದ ಮಾರಾಟದ ಸಮಯದಲ್ಲಿ ಕ್ರಮವಾಗಿ 2.5 ಮಿಲಿಯನ್ ಮತ್ತು 2.2 ಮಿಲಿಯನ್ ಯುನಿಟ್ಗಳ ಮಾರಾಟದೊಂದಿಗೆ ಟಾಪ್ 3 ಶ್ರೇಯಾಂಕ ಪಡೆದುಕೊಂಡಿವೆ. ಇವು ಕ್ರಮವಾಗಿ ಶೇ.20 ಮತ್ತು ಶೇ.17ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿವೆ. ಸ್ಯಾಮ್ಸಂಗ್ ತನ್ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಹಬ್ಬದ ಋತುವಿನಲ್ಲಿ ಕಮಾಲ್ ಮಾಡಿದೆ.
ಇದನ್ನೂ ಓದಿ: YouTube ನಲ್ಲಿ Subscribers ಹೆಚ್ಚಿಸುವ ಜೊತೆಗೆ ಲಕ್ಷಗಟ್ಟಲೇ ಹಣಗಳಿಸಲು ಬಯಸಿದರೆ, ಈ ಅವಕಾಶ ಮಿಸ್ ಮಾಡ್ಕೋಬೇಡಿ.!
ಟಾಪ್ 3ನಲ್ಲಿ ಸ್ಥಾನ ಪಡೆಯದ ಆ್ಯಪಲ್
ಐಫೋನ್ 13 ಮತ್ತು ಹಳೆಯ ಐಫೋನ್ ಮಾದರಿಗಳಲ್ಲಿ ಭಾರೀ ರಿಯಾಯಿತಿ ಘೋಷಿಸಿದರೂ ಸಹ ಆ್ಯಪಲ್ ಟಾಪ್ 3ನಲ್ಲಿ ಬಂದಿಲ್ಲ. ಐಫೋನ್ ಉತ್ತಮ ಮಾರಾಟಕ್ಕೆ ಸಾಕ್ಷಿಯಾಗಿದ್ದರೂ 2022ರ ಹಬ್ಬದ ಋತುವಿನ ಮಾರಾಟದ ಅವಧಿಯಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.2ರಷ್ಟು ಕುಸಿತ ಕಂಡಿದೆ. ಮಾರಾಟದ ಅಂಕಿ ಅಂಶವು ಸ್ವಲ್ಪ ಕಡಿಮೆಯಿದ್ದರೂ, ಎಎಸ್ಪಿ (ಸರಾಸರಿ ಮಾರಾಟದ ಬೆಲೆ) ಈ ಬಾರಿ ಹೆಚ್ಚಾಗಿದೆ. ಇದರರ್ಥ ಆದಾಯದ ಬೆಳವಣಿಗೆಯು ಆಫ್ಸೆಟ್ಗಳಲ್ಲಿನ ಕುಸಿತವನ್ನು ಸರಿದೂಗಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.