Narak Chaturdashi 2022: ನರಕ ಚತುರ್ದಶಿಯ ದಿನ ಈ ಒಂದು ಕೆಲಸ ಮಾಡಿ ನರಕ ಯಾತನೆಯಿಂದ ಮುಕ್ತಿ ಪಡೆಯಿರಿ

Narak Cahturdashi 2022 Date: ಸಾಮಾನ್ಯವಾಗಿ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯನ್ನು ನರಕ ಚತುರ್ದಶಿ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಈ ದಿನಕ್ಕೆ ತನ್ನದೇ ಆದ ಮಹತ್ವವಿದೆ. ಬನ್ನಿ ತಿಳಿದುಕೊಳ್ಳೋಣ,  

Written by - Nitin Tabib | Last Updated : Oct 14, 2022, 07:57 PM IST
  • ಶಾಸ್ತ್ರಗಳಲ್ಲಿ ವಿವರಿಸಿರುವ ಕಥೆಯ ಪ್ರಕಾರ ನರಕಾಸುರನೆಂಬ ರಾಕ್ಷಸನು ಎಲ್ಲ ದೇವತೆಗಳಿಗೂ ಕಿರುಕುಳ ನೀಡುತ್ತಿದ್ದ.
  • ಆತನ ಬಳಿ ಅಲೌಕಿಕ ಶಕ್ತಿಗಳಿದ್ದುದರಿಂದ ಅವನೊಂದಿಗೆ ಕಾದಾಡುವುದು ಯಾರ ಹಿಡಿತದಲ್ಲೂ ಇರಲಿಲ್ಲ.
  • ದೇವತೆಗಳ ಮೇಲೆ ನರಕಾಸುರನ ಹಿಂಸೆಗಳು ಹೆಚ್ಚಾಗುತ್ತಿದ್ದವು.
Narak Chaturdashi 2022: ನರಕ ಚತುರ್ದಶಿಯ ದಿನ ಈ ಒಂದು ಕೆಲಸ ಮಾಡಿ ನರಕ ಯಾತನೆಯಿಂದ ಮುಕ್ತಿ ಪಡೆಯಿರಿ title=
Narak Chaturdashi

Narak Chaturdashi 2022 Upay: ಐದು ದಿನಗಳ ದೀಪಾವಳಿ ಹಬ್ಬ ಧನತ್ರಯೋದಶಿಯ ದಿನದಿಂದ ಆರಂಭವಾಗುತ್ತದೆ ಮತ್ತು ಭಾಯಿ ದೂಜ್ ಅಥವಾ ಯಮ ದ್ವಿತೀಯ ದಿನದವರೆಗೆ ಮುಂದುವರಿಯುತ್ತದೆ. ಧನತ್ರಯೋದಶಿಯ ಮರುದಿನ ನರಕ ಚತುರ್ದಶಿ ಆಚರಿಸಲಾಗುತ್ತದೆ. ಅಷ್ಟೇ ಅಲ್ಲ, ಇದನ್ನು ಕಾಳಿ ಚೌದಾಸ್ ಮತ್ತು ನರಕ್ ಚೌದಾಸ್ ಎಂದೂ ಕೂಡ ಕರೆಯುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿಯ ನರಕ ಚತುರ್ದಶಿಯನ್ನು ಅತ್ಯಂತ ವಿಶೇಷವೆಂದು ಪರಿಗಣಿಸಲಾಗಿದೆ.

ಶಾಸ್ತ್ರಗಳ ಪ್ರಕಾರ ಈ ದಿನ ಯಮದೇವನನ್ನು ಪೂಜಿಸಲಾಗುತ್ತದೆ. ಇದರ ಹಿಂದೆ ಒಂದು ದಂತಕಥೆ ಇದೆ. ಈ ದಿನದ ದಿನಾಂಕ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ,

ನರಕ ಚತುರ್ದಶಿ 2022 ಅನ್ನು ಹೇಗೆ ಆಚರಿಸಲಾಗುತ್ತದೆ?
ನರಕ ಚತುರ್ದಶಿಯನ್ನು ಧನತ್ರಯೋದಶಿಯ ನಂತರ ಹಾಗೂ ದೀಪಾವಳಿಯ ಒಂದು ದಿನ ಮೊದಲು ಆಚರಿಸಲಾಗುತ್ತದೆ. ಇದನ್ನು  ಉತ್ತರ ಭಾರತದಲ್ಲಿ ಛೋಟಿ ದೀಪಾವಳಿ, ಕಾಳಿ ಚೌದಾಸ್ ಎಂದೂ ಕರೆಯುತ್ತಾರೆ. ಈ ದಿನ ಸಂಜೆ ಮನೆಗಳಲ್ಲಿ ದೀಪಗಳನ್ನು ಹಚ್ಚುವ ಸಂಪ್ರದಾಯವಿದೆ. ಈ ದಿನದಂದು ಯಮರಾಜನ ಪೂಜೆಗೆ ವಿಶೇಷ ಮಹತ್ವವಿದೆ. ಈ ದಿನದಂದು ಯಮದೇವನ ಅಕಾಲಿಕ ಮರಣ ಮತ್ತು ಉತ್ತಮ ಆರೋಗ್ಯಕ್ಕಾಗಿ ದೀಪವನ್ನು ಬೆಳಗಿಸುವ ಮೂಲಕ ಪೂಜೆ ಸಲ್ಲಿಸಲಾಗುತ್ತದೆ ಎಂದು ಹೇಳಲಾಗುತ್ತದೆ.

ನರಕ ಚತುರ್ದಶಿ 2022 ರ ಶುಭ ಸಮಯ
ಹಿಂದೂ ಕ್ಯಾಲೆಂಡರ್ ಪ್ರಕಾರ, ಕಾರ್ತಿಕ ಚತುರ್ದಶಿ ತಿಥಿ 23 ಅಕ್ಟೋಬರ್ 2022 ರಂದು ಸಂಜೆ 6.03 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 24 ರಂದು ಸಂಜೆ 5:27 ಕ್ಕೆ ಕೊನೆಗೊಳ್ಳುತ್ತದೆ. ನರಕ ಚತುರ್ದಶಿಯ ಮುಹೂರ್ತವು ಅಕ್ಟೋಬರ್ 23 ರಂದು ಬೆಳಗ್ಗೆ 11.40 ರಿಂದ ಅಕ್ಟೋಬರ್ 24 ರ ಮಧ್ಯರಾತ್ರಿ 12.31 ರವರೆಗೆ ಇರುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-Dhanatrayodashi 2022: ಧನತ್ರಯೋದಶಿ ದಿನ ಈ 3 ರಾಶಿಗಳ ಜನರು ಚಿನ್ನ-ಬೆಳ್ಳಿ ಖರೀದಿಸುವುದು ಅತ್ಯಂತ ಮಂಗಳಕರ, ಕಾರಣ ಇಲ್ಲಿದೆ

ನರಕ ಚತುರ್ದಶಿ ಕಥೆ
ಶಾಸ್ತ್ರಗಳಲ್ಲಿ ವಿವರಿಸಿರುವ ಕಥೆಯ ಪ್ರಕಾರ ನರಕಾಸುರನೆಂಬ ರಾಕ್ಷಸನು ಎಲ್ಲ ದೇವತೆಗಳಿಗೂ ಕಿರುಕುಳ ನೀಡುತ್ತಿದ್ದ. ಆತನ ಬಳಿ ಅಲೌಕಿಕ ಶಕ್ತಿಗಳಿದ್ದುದರಿಂದ ಅವನೊಂದಿಗೆ ಕಾದಾಡುವುದು ಯಾರ ಹಿಡಿತದಲ್ಲೂ ಇರಲಿಲ್ಲ. ದೇವತೆಗಳ ಮೇಲೆ ನರಕಾಸುರನ ಹಿಂಸೆಗಳು ಹೆಚ್ಚಾಗುತ್ತಿದ್ದವು. ಆಗ ದೇವತೆಗಳೆಲ್ಲ ಶ್ರೀಕೃಷ್ಣನ ಬಳಿ ತೆರಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ದೇವತೆಗಳ ಸ್ಥಿತಿಯನ್ನು ನೋಡಿದ ಶ್ರೀ ಕೃಷ್ಣನು ಅವರಿಗೆ ಸಹಾಯ ಮಾಡಲು ಒಪ್ಪಿಕೊಳ್ಳುತ್ತಾನೆ.  ಆದರೆ, ನರಕಾಸುರನು ಮಹಿಳೆಯ ಕೈಯಿಂದ ಸಾವನ್ನಪ್ಪುವ ಶಾಪವನ್ನು ಹೊಂದಿರುತ್ತಾನೆ ಎಂಬುದು ಇಲ್ಲಿ ಗಮನಾರ್ಹ.  ನಂತರ ಶ್ರೀ ಕೃಷ್ಣನು ತನ್ನ ಪತ್ನಿಯ ಸಹಾಯದಿಂದ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಹದಿನಾಲ್ಕನೆಯ ದಿನದಂದು ನರಕಾಸುರನನ್ನು ಸಂಹರಿಸುತ್ತಾನೆ. ಧಾರ್ಮಿಕ ಗ್ರಂಥಗಳ ಪ್ರಕಾರ, ನರಕಾಸುರನ ಮರಣದ ನಂತರ, 16 ಸಾವಿರ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅಂದಿನಿಂದ ಈ 16 ಸಾವಿರ ಒತ್ತೆಯಾಳುಗಳನ್ನು ಪಟ್ಟರಾಣಿಯರು ಎಂದು ಕರೆಯಲಾಯಿತು ಮತ್ತು ನರಕಾಸುರನ ಮರಣದ ನಂತರ ಕಾರ್ತಿಕ ಮಾಸದ ಹದಿನಾಲ್ಕನೆಯ ದಿನವನ್ನು ನರಕ ಚತುರ್ದಶಿ ಎಂದು ಆಚರಿಸಲಾಯಿತು.

ಇದನ್ನೂ ಓದಿ-Diwali 2022 ಕ್ಕೂ ಮುನ್ನ ಈ ರಾಶಿಗಳ ಜನರ ಸಂಕಷ್ಟದಲ್ಲಿ ಹೆಚ್ಚಳ, ನಿಮ್ಮ ರಾಶಿ ಯಾವುದು?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News