Dhanatrayodashi 2022: ಧನತ್ರಯೋದಶಿ ದಿನ ಈ 3 ರಾಶಿಗಳ ಜನರು ಚಿನ್ನ-ಬೆಳ್ಳಿ ಖರೀದಿಸುವುದು ಅತ್ಯಂತ ಮಂಗಳಕರ, ಕಾರಣ ಇಲ್ಲಿದೆ

Dhanteras 2022: ಸಾಮಾನ್ಯವಾಗಿ ಧನತ್ರಯೋದಶಿ ದಿನ ಚಿನ್ನ ಮತ್ತು ಬೆಳ್ಳಿ ಖರೀದಿಸುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತಿದೆ. ಹಾಗಾದರೆ ಬನ್ನಿ ಯಾವ ರಾಶಿಗಳ ಜನರಿಗೆ ಧನತ್ರಯೋದಶಿ ದಿನ ಚಿನ್ನ-ಬೆಳ್ಳಿ ಖರೀದಿಸುವುದು ವಿಶೇಷ ಲಾಭ ನೀಡಲಿದೆ ತಿಳಿದುಕೊಳ್ಳೋಣ.  

Written by - Nitin Tabib | Last Updated : Oct 14, 2022, 02:20 PM IST
  • ಪವಿತ್ರ ಹಬ್ಬ ದೀಪಾವಳಿ ಆಗಮನಕ್ಕೆ ದಿನಗಣನೆ ಆರಂಭವಾಗಿದೆ.
  • ಧನತ್ರಯೋದಶಿ ಅಥವಾ ದೀಪಾವಳಿ ಹಬ್ಬದಂದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ತುಂಬಾ ಲಾಭದಾಯಕವೆಂದು ಪರಿಗಣಿಸಲಾಗಿದೆ.
  • ಆದರೆ ಈ ವರ್ಷ ಧಂತೇರಸ್‌ನಲ್ಲಿ ಸೂರ್ಯಗ್ರಹಣವಿದ್ದು, ಶನಿದೇವನ ನಡೆ ಬದಲಾವಣೆಯಾಗಲಿದೆ.
Dhanatrayodashi 2022: ಧನತ್ರಯೋದಶಿ ದಿನ ಈ 3 ರಾಶಿಗಳ ಜನರು ಚಿನ್ನ-ಬೆಳ್ಳಿ ಖರೀದಿಸುವುದು ಅತ್ಯಂತ ಮಂಗಳಕರ, ಕಾರಣ ಇಲ್ಲಿದೆ title=
Dhanatrayodashi 2022 Gold Purchase

Happy Dhanteras 2022: ಪವಿತ್ರ ಹಬ್ಬ ದೀಪಾವಳಿ ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಧನತ್ರಯೋದಶಿ ಅಥವಾ ದೀಪಾವಳಿ ಹಬ್ಬದಂದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ತುಂಬಾ ಲಾಭದಾಯಕವೆಂದು ಪರಿಗಣಿಸಲಾಗಿದೆ. ಆದರೆ ಈ ವರ್ಷ ಧಂತೇರಸ್‌ನಲ್ಲಿ ಸೂರ್ಯಗ್ರಹಣವಿದ್ದು, ಶನಿದೇವನ ನಡೆ ಬದಲಾವಣೆಯಾಗಲಿದೆ. ಇದರಿಂದ ಗ್ರಹಗಳ ಸ್ಥಾನಮಾನಗಳ ಕಾರಣ ಚಿನ್ನ, ಬೆಳ್ಳಿ ಖರೀದಿಸಿದರೆ ಶುಭವಾಗುತ್ತದೆಯೇ ಎಂಬ ಪ್ರಶ್ನೆ ಜನರ ಮನದಲ್ಲಿ ಮೂಡಿದೆ. ಅಂತಹ ಪರಿಸ್ಥಿತಿಯಲ್ಲಿ, ಧನತ್ರಯೋದಶಿಯ ದಿನ ಯಾವ ರಾಶಿ ಜನರು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಿದರೆ ವಿಶೇಷ ಲಾಭ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. 

ಗೋವರ್ಧನ ಪೂಜೆಯ ದಿನದಂದು ಸೂರ್ಯಗ್ರಹಣ
ಈ ವರ್ಷ ಗೋವರ್ಧನ ಪೂಜೆ ಅಕ್ಟೋಬರ್ 25 ರಂದು ನೆರವೇರಿಸಲಾಗುತ್ತಿದೆ. ಆದರೆ, ಈ ದಿನ ವರ್ಷದ ಎರಡನೇ ಸೂರ್ಯಗ್ರಹಣವೂ ಸಂಭವಿಸಲಿದೆ. ಗ್ರಹಣ ಕಾಲದಲ್ಲಿ ಸೂರ್ಯನು ತುಲಾ ರಾಶಿಯಲ್ಲಿರುತ್ತಾನೆ ಮತ್ತು ಶುಕ್ರನು ಸಹ ಅವರೊಂದಿಗೆ ಇರುತ್ತಾನೆ.

ಯಾವ ರಾಶಿಯವರಿಗೆ ಶಾಪಿಂಗ್ ಲಾಭ ನೀಡಲಿದೆ
ಈ ವರ್ಷ ಸೂರ್ಯಗ್ರಹಣವು ತುಲಾ ರಾಶಿ ಮತ್ತು ಸ್ವಾತಿ ನಕ್ಷತ್ರದಲ್ಲಿ ಸಂಭವಿಸಲಿದೆ. ಸೂರ್ಯ, ಚಂದ್ರ, ಬುಧ, ಶುಕ್ರ ಎಲ್ಲರೂ ತುಲಾ ರಾಶಿಯಲ್ಲಿರುತ್ತಾರೆ. ತುಲಾ ರಾಶಿಯು ಶನಿಗೆ ಉತ್ಕೃಷ್ಟವಾಗಿದೆ ಮತ್ತು ಸೂರ್ಯನಿಗೆ ದುರ್ಬಲವಾಗಿದೆ. ಅಕ್ಟೋಬರ್ 23 ರಿಂದ, ಶನಿಯು ಮಕರ ರಾಶಿಯಲ್ಲಿ ಸಂಚರಿಸಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ, ಶನಿಯ ದಶಮ ದೃಷ್ಟಿ ಈ ರಾಶಿಯ ಮೇಲೆ ಇರಲಿದೆ. ಹೀಗಿರುವಾಗ ತುಲಾ, ಕರ್ಕ, ಮೇಷ ಮತ್ತು ಮಕರ ರಾಶಿಯವರಿಗೆ ಚಿನ್ನ ಖರೀದಿಸುವುದು ಯಾವುದೇ ಪ್ರಯೋಜನ ನೀಡುವುದಿಲ್ಲ.

ವೃಷಭ, ಸಿಂಹ, ವೃಶ್ಚಿಕ ಮತ್ತು ಕುಂಭ ರಾಶಿಯವರಿಗೆ ಸೂರ್ಯಗ್ರಹಣವು ಉತ್ತಮ ಫಲಿತಾಂಶಗಳನ್ನು ನೀಡಲಿದೆ. ಈ ದಿನ ಸೂರ್ಯನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡುವುದು ಲಾಭದಾಯಕವಾಗಿರುತ್ತದೆ. ಈ ರಾಶಿಯ ಜನರು ಚಿನ್ನ ಮತ್ತು ಬೆಳ್ಳಿಯ ಖರೀದಿಯಲ್ಲಿ ಭಾಗಶಃ ಲಾಭವನ್ನು ಪಡೆಯಬಹುದು.

ಇದನ್ನೂ ಓದಿ-Diwali 2022 ಕ್ಕೂ ಮುನ್ನ ಈ ರಾಶಿಗಳ ಜನರ ಸಂಕಷ್ಟದಲ್ಲಿ ಹೆಚ್ಚಳ, ನಿಮ್ಮ ರಾಶಿ ಯಾವುದು?

ಸೂರ್ಯ ಗ್ರಹಣವು ಮಿಥುನ, ಕನ್ಯಾ ಮತ್ತು ಧನು ರಾಶಿಯವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ರಾಶಿಯ ಜನರು ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡಬಹುದು. ಜ್ಯೋತಿಷ್ಯದ ಲೆಕ್ಕಾಚಾರಗಳ ಪ್ರಕಾರ, ಈ ರಾಶಿಗಳ ಜನರು ಚಿನ್ನ ಮತ್ತು ಬೆಳ್ಳಿಯಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಜೀವನದಲ್ಲಿ ಸಾಕಷ್ಟು ಸುಖ- ಸಂತೋಷ, ಸಮೃದ್ಧಿ ಮತ್ತು ನೆಮ್ಮದಿಯನ್ನು ಪಡೆಯಬಹುದು.

ಇದನ್ನೂ ಓದಿ-Vastu Tips: ವಾಸ್ತು ದೋಷಕ್ಕೆ ಕಾರಣವಾಗಬಹು ಮನೆಗೆ ಹಾಕುವ ಕರ್ಟನ್‌ ಕಲರ್‌.!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News