ಬೆಂಗಳೂರು: ಲೋಕಾಯುಕ್ತಕ್ಕೆ ಮೊಳೆ ಹೊಡೆದು, #ACBಯನ್ನು #ActiveCollectionBureau ರೀತಿ ಬಳಸಿಕೊಂಡಿದ್ದೇ ಸಿದ್ದರಾಮಯ್ಯ ಸಾಧನೆ ಎಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯರಿಗೆ ಅಂದು ತನಿಖೆ ಮಾಡಿಸುವ ತಾಕತ್ತು ಇರಲಿಲ್ಲವೇ ಅಥವಾ ತನಿಖೆಯಾದರೆ ಜೈಲಿಗೆ ಹೋಗಬೇಕಾದೀತು ಎಂಬ ಭಯ ಕಾಡಿತ್ತೇ? ಪಂಚೆ ಮಾತ್ರ ಶುಭ್ರ, ಮೈಯೆಲ್ಲಾ ಭ್ರಷ್ಟಾಚಾರದ ಕೊಳೆ!’ ಅಂತಾ ಕುಟುಕಿದೆ.
‘ಗಾಳಿಯಲ್ಲಿ ಗುಂಡು ಹೊಡೆದಂತೆ, ಕೇವಲ ಸಾಕ್ಷ್ಯರಹಿತ ಆರೋಪ ಮಾಡಿದ್ದೇ ಸಿದ್ದರಾಮಯ್ಯ ಸಾಧನೆ! ಸಿದ್ದರಾಮಯ್ಯನವರೇ, ಯಾವ ಕಾರಣಕ್ಕಾಗಿ ನಿಮಗೆ ದುಬಾರಿ ವಾಚ್ ಉಡುಗೊರೆಯಾಗಿ ಸಿಕ್ಕಿದ್ದು? ನೀವು #WatchPe ಮೂಲಕ ಪಡೆದ ಲಂಚವೆಷ್ಟು?’ ಎಂದು ಬಿಜೆಪಿ ಪ್ರಶ್ನಿಸಿದೆ.
ಲೋಕಾಯುಕ್ತಕ್ಕೆ ಮೊಳೆ ಹೊಡೆದು, #ACB ಯನ್ನು #ActiveCollectionBureau ರೀತಿ ಬಳಸಿಕೊಂಡಿದ್ದೇ @siddaramaiah ಸಾಧನೆ.
ಸಿದ್ದರಾಮಯ್ಯ ಅವರಿಗೆ ಅಂದು ತನಿಖೆ ಮಾಡಿಸುವ ತಾಕತ್ತು ಇರಲಿಲ್ಲವೇ ಅಥವಾ ತನಿಖೆಯಾದರೆ ಜೈಲಿಗೆ ಹೋಗಬೇಕಾದೀತು ಎಂಬ ಭಯ ಕಾಡಿತ್ತೇ?
ಪಂಚೆ ಮಾತ್ರ ಶುಭ್ರ, ಮೈಯೆಲ್ಲಾ ಭ್ರಷ್ಟಾಚಾರದ ಕೊಳೆ!#ಭ್ರಷ್ಟರಾಮಯ್ಯ
— BJP Karnataka (@BJP4Karnataka) October 19, 2022
‘ಟಾಯ್ಲೆಟ್ ಚೊಂಬಿನಲ್ಲಿ ಲಂಚ, ಹಾಸ್ಟೆಲ್ ದಿಂಬಿನಲ್ಲಿ ಲಂಚ! ಸಿದ್ದರಾಮಯ್ಯನವರೇ, ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗಗಳ ಹಾಸ್ಟೆಲ್ ಅನುದಾನವನ್ನು ಕಬಳಿಸಿದವರು ನಿಮ್ಮ ಸಂಪುಟದಲ್ಲಿ ಸಚಿವರಾಗಿದ್ದಿದ್ದು ಮರೆತು ಹೋಯಿತೇ? #PillowPe ಹಗರಣದ ಸೂತ್ರಧಾರರು ನೀವೇ ಅಲ್ವೇ ಸಿದ್ದರಾಮಯ್ಯ?’ ಅಂತಾ ಟೀಕಿಸಿದೆ.
ಹುದ್ದೆಗಾಗಿ ಅರ್ಜಿ ಸಲ್ಲಿಸದವರನ್ನು ಲಂಚ ಪಡೆದು ನೇಮಕಾತಿ ಮಾಡಿದ್ದು ಕಾಂಗ್ರೆಸ್.
ರೈತರಿಗೆ ಮೋಸ ಮಾಡಿ ಸೋಲಾರ್ ಹಗರಣ ಮಾಡಿದ್ದು ಕಾಂಗ್ರೆಸ್.
ಬಿಡಿಎಯನ್ನು ಭ್ರಷ್ಟರ ಅಂಗಳ ಮಾಡಿದ್ದು ಕಾಂಗ್ರೆಸ್.
ಇದನ್ನು ಹಿರಿಯ ಯುವನಾಯಕ ರಾಹುಲ್ ಗಾಂಧಿ ಅವರ ಗಮನಕ್ಕೆ ಏಕೆ ತಂದಿಲ್ಲ #ಭ್ರಷ್ಟರಾಮಯ್ಯ?
— BJP Karnataka (@BJP4Karnataka) October 19, 2022
ಇದನ್ನೂ ಓದಿ: ಪ್ರಧಾನಿ ಮೋದಿ ಮತ್ತು ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಿ ಮನೆಗೆ ಹೋಗಲಿ: ಸಿದ್ದರಾಮಯ್ಯ
‘ಈಗ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗ ಸೋಲಾರ್ ಹಗರಣದಲ್ಲಿ "ಲಕ್ಷ್ಮಿ ಭಾಗ್ಯ" ಪಡೆದಿದ್ದು ಯಾರು? ಸಂಬಂಧಿಕರೇ ಸೋಲಾರ್ ಉತ್ಪಾದಕರಾಗಿದ್ದು ಯಾರ ಕೃಪೆಯಿಂದ? ಈ ಹಗರಣದಲ್ಲಿ #LaxmiPayಯಿಂದ ಎಷ್ಟು ಲಂಚ, #PayDK ಆಗಿದೆ? ಮೌನವೇಕೆ? #SayDK’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.
‘ಸಿದ್ದರಾಮಯ್ಯ ಅವಧಿಯಲ್ಲಿ ಸಚಿವರಾಗಿದ್ದ ಆಂಜನೇಯ ಅವರ "ವಿಜಯ ಬ್ಯಾಂಕ್" ಖಾತೆಯಲ್ಲಿ ಠೇವಣಿಯಾಗಿದ್ದು ಯಾರ ಹಣ? ಆಯ್ಕೆ 1 – ಸಿದ್ದರಾಮಯ್ಯ, 2 - ಅಂದಿನ ಕಾಂಗ್ರೆಸ್ ಸಿಎಂ, 3 - ಇಂದಿನ ವಿಪಕ್ಷ ನಾಯಕ. #BankPe ಮೂಲಕ ಸಿದ್ದರಾಮಯ್ಯಗೆ ಎಷ್ಟು ಸಂದಾಯವಾಗಿದೆ? ಡೀಯರ್ ಕಾಂಗ್ರೆಸ್ ಇದಕ್ಕೆ ಒಂದೇ ವಾಕ್ಯದಲ್ಲಿ ಉತ್ತರಿಸಿ’ ಅಂತಾ ಬಿಜೆಪಿ ಕುಟುಕಿದೆ.
ಟಾಯ್ಲೆಟ್ ಚೊಂಬಿನಲ್ಲಿ ಲಂಚ, ಹಾಸ್ಟೆಲ್ ದಿಂಬಿನಲ್ಲಿ ಲಂಚ!@siddaramaiah ಅವರೇ, ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗಗಳ ಹಾಸ್ಟೆಲ್ ಅನುದಾನವನ್ನು ಕಬಳಿಸಿದವರು ನಿಮ್ಮ ಸಂಪುಟದಲ್ಲಿ ಸಚಿವರಾಗಿದ್ದಿದ್ದು ಮರೆತು ಹೋಯಿತೇ?#PillowPe ಹಗರಣದ ಸೂತ್ರಧಾರರು ನೀವೇ ಅಲ್ವೇ ಸಿದ್ದರಾಮಯ್ಯ?#ಭ್ರಷ್ಟಕಾಂಗ್ರೆಸ್
— BJP Karnataka (@BJP4Karnataka) October 19, 2022
‘ಹುದ್ದೆಗಾಗಿ ಅರ್ಜಿ ಸಲ್ಲಿಸದವರನ್ನು ಲಂಚ ಪಡೆದು ನೇಮಕಾತಿ ಮಾಡಿದ್ದು ಕಾಂಗ್ರೆಸ್. ರೈತರಿಗೆ ಮೋಸ ಮಾಡಿ ಸೋಲಾರ್ ಹಗರಣ ಮಾಡಿದ್ದು ಕಾಂಗ್ರೆಸ್. ಬಿಡಿಎಯನ್ನು ಭ್ರಷ್ಟರ ಅಂಗಳ ಮಾಡಿದ್ದು ಕಾಂಗ್ರೆಸ್. ಇದನ್ನು ಹಿರಿಯ ಯುವನಾಯಕ ರಾಹುಲ್ ಗಾಂಧಿಯವರ ಗಮನಕ್ಕೆ ತಂದಿಲ್ಲ ಏಕೆ #ಭ್ರಷ್ಟರಾಮಯ್ಯ?’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಪಿಎಸ್ಐ ಅಕ್ರಮ ನೇಮಕಾತಿ : ಪುಟ್ ಪಾತ್ ನಲ್ಲಿ ಕೋಟಿ ಹಣ ಪಡೆದಿದ್ದ ಶಾಂತಕುಮಾರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ