Samantha Ruth Prabhu: ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಸಮಂತಾ ರುತ್ ಪ್ರಭು ಕೂಡ ಒಬ್ಬರು. ಇವರ ಅಭಿನಯ, ನೃತ್ಯ, ಸಂಭಾಷಣೆ, ಅಂದಕ್ಕೆ ಮರುಳಾಗದವರಿಲ್ಲ. ಇವರ ಪ್ರತಿಭೆಯಿಂದಲೇ ಅನೇಕ ಅಭಿಮಾನಿ ಬಳಗವನ್ನು ಒಳಗೊಂಡ ನಟಿ ಇದೀಗ ಆಸ್ಪತ್ರೆ ಸೇರಿದ್ದಾರೆ. ಈ ಬಗ್ಗೆ ಸ್ವತಃ ಭಾವನಾತ್ಮಕ ಪೋಸ್ಟ್ ಅಪ್ಲೋಡ್ ಮಾಡುವ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ:ಅಪ್ಪು ʼನೆನಪಿನ ಸಾಗರದಲ್ಲಿ' ಪತ್ರ ಬರೆದ ಅಶ್ವಿನಿ ಪುನೀತ್ ರಾಜ್‌ಕುಮಾರ್
ತನ್ನ ಆರೋಗ್ಯ ಸಮಸ್ಯೆಗಳ ಕುರಿತಾದ ಊಹಾಪೋಹಗಳಿಗೆ ಅಂತ್ಯ ಹಾಡಿರುವ ಸ್ಯಾಮ್, ತಾನು ಮೈಯೋಸಿಟಿಸ್(Myositis) ಕಾಯಿಲೆಯಿಂದ ಹೋರಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಸಮಂತಾ, "ಯಶೋಧ ಟ್ರೈಲರ್‌ಗೆ ನಿಮ್ಮ ಪ್ರತಿಕ್ರಿಯೆ ಅಗಾಧವಾಗಿದೆ. ನನ್ ಮೇಲೆ ನೀವು ತೋರಿಸಿರುವ ಪ್ರೀತಿಯೇ, ಜೀವನದಲ್ಲಿ ನನಗೆ ಸಮಸ್ಯೆ ಎದುರಿಸಲು ಶಕ್ತಿಯನ್ನು ನೀಡುತ್ತದೆ. ಕೆಲವು ತಿಂಗಳುಗಳ ಹಿಂದೆ ನನಗೆ ಮೈಯೋಸಿಟಿಸ್ ಎಂಬ ಸ್ವಯಂ ನಿರೋಧಕ ಸ್ಥಿತಿ ಇರುವುದು ಪತ್ತೆಯಾಯಿತು. ಅದರ ಸಲುವಾಗಿ ಚಿಕಿತ್ಸೆಗೆ ಒಳಗಾಗಿದ್ದೇನೆ. ಹಾಗಾಗಿ ಈ ಪೋಸ್ಟ್ ಹಂಚಿಕೊಳ್ಳುತ್ತಿದ್ದೇನೆ. ಆದರೆ ನಾನು ನಿರೀಕ್ಷಿಸಿದ್ದಕ್ಕಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ನಾನು ಶೀಘ್ರದಲ್ಲೇ ಸಂಪೂರ್ಣ ಚೇತರಿಸಿಕೊಳ್ಳುತ್ತೇನೆ ಎಂದು ವೈದ್ಯರು ಭರವಸೆ ನೀಡಿದ್ದಾರೆ. ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ನಾನು ಉತ್ತಮ ಮತ್ತು ಕೆಟ್ಟ ದಿನಗಳನ್ನು ಹೊಂದಿದ್ದೇನೆ. ಕೆಲವೊಂದು ದುರ್ಬಲತೆಯನ್ನು ಒಪ್ಪಿಕೊಳ್ಳಲು ನಾನು ಇನ್ನೂ ಹೋರಾಡುತ್ತಿದ್ದೇನೆ. ಹೇಗಾದರೂ ಆ ಕ್ಷಣವು ಹಾದುಹೋಗುತ್ತದೆ. ನಾನು ಚೇತರಿಸಿಕೊಳ್ಳಲು ಒಂದಷ್ಟು ದಿನ ಹತ್ತಿರವಾಗಿದ್ದೇನೆ ಎಂದು ಮಾತ್ರ ಅರ್ಥೈಸಬಹುದು” ಎಂದು ಬರೆದುಕೊಂಡಿದ್ದಾರೆ.
— Samantha (@Samanthaprabhu2) October 29, 2022
ಇನ್ನು ಸಮಂತಾ ತಮ್ಮ ಮುಂಬರುವ ಬಹುಭಾಷಾ ಚಿತ್ರ 'ಯಶೋಧ' ದೊಂದಿಗೆ ಮತ್ತೊಮ್ಮೆ ಪ್ರೇಕ್ಷಕರನ್ನು ಆಕರ್ಷಿಸಲು ಸಿದ್ಧರಾಗಿದ್ದಾರೆ, ಇದರ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಎಲ್ಲಾ ಭಾಷೆಗಳಲ್ಲಿ ಅಪಾರ ಪ್ರೀತಿಯನ್ನು ಗಳಿಸಿದೆ.
ಇದನ್ನೂ ಓದಿ: ಅಪ್ಪು ಮುಡಿಗೆ ʼಕರ್ನಾಟಕ ರತ್ನʼ : ಗೆಳೆಯನ ಕಾರ್ಯಕ್ರಮದಲ್ಲಿ ಎನ್‌ಟಿಆರ್ ಭಾಗಿ..!
ಏನಿದು ಮೈಯೋಸಿಟಿಸ್ ಸ್ಥಿತಿ:
ಸಮಂತಾಗೆ ವಕ್ಕರಿಸಿಕೊಂಡಿರುವ ಈ ರೋಗದ ಹೆಸರು ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಸ್ಥಿತಿ. ಇದು ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ಅಷ್ಟೇ ಅಲ್ಲದೆ, ದಣಿದ ಮತ್ತು ನೋವಿನಿಂದ ಕೂಡಿದ ಅಪರೂಪದ ಪರಿಸ್ಥಿತಿಗಳನ್ನು ಮನುಷ್ಯನಿಗೆ ತಂದೊಡ್ಡುತ್ತದೆ. ಇದು ಸಾಮಾನ್ಯವಾಗಿ ಪ್ರತಿರಕ್ಷಣಾ ವ್ಯವಸ್ಥೆಯ ಸಮಸ್ಯೆಯಿಂದ ಉಂಟಾಗುತ್ತದೆ. ಜೊತೆಗೆ ಮನುಷ್ಯನ ಆರೋಗ್ಯಕರ ಅಂಗಾಂಶವನ್ನು ಆಕ್ರಮಿಸುತ್ತದೆ.
— Samantha (@Samanthaprabhu2) October 29, 2022
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ