ವಿದೇಶದಲ್ಲಿ ಉದ್ಯೋಗದ ಕನಸನ್ನು ನನಸು ಮಾಡಲು ಸರ್ಕಾರದಿಂದ ಇಲ್ಲೊಂದು ದಿಟ್ಟ ನಿರ್ಧಾರ

ದೇಶದಲ್ಲಿ ಉದ್ಯೋಗ ಮಾಡುವುದು ಈಗಿನ ಯುವಜನತೆಯ ಕನಸಾಗಿದೆ. ಆದರೆ ಹಲವು ಬಾರಿ ವಿದೇಶದಲ್ಲಿ ಉದ್ಯೋಗ ಬಯಸಿ ಹೋದವರು ತೊಂದರೆಗೆ ಉಂಟಾಗುವುದು ಎಲ್ಲರಿಗು ತಿಳಿದ ವಿಷಯವಾಗಿದೆ. ಇಂತಹ ತೊಂದರೆಗಳನ್ನು ನಿವಾರಿಸಿ ಸಾಮಾನ್ಯ ಜನರಿಗೆ ವಿದೇಶದಲ್ಲಿ ಸುರಕ್ಷಿತವಾದ ಉದ್ಯೋಗವನ್ನು ಪಡೆಯಲು ಉಪಯುಕ್ತವಾಗಲೆಂದು ಸರಕಾರ ನೂತನವಾಗಿ ಅಂತಾರಾಷ್ಟ್ರೀಯ ವಲಸೆ ಕೇಂದ್ರಗಳನ್ನು ಎಲ್ಲಾ ಜಿಲ್ಲೆಗಳಲ್ಲಿ ಸ್ಥಾಪಿಸಿದೆ.

Written by - Zee Kannada News Desk | Last Updated : Jan 8, 2023, 12:29 AM IST
  • ವಿದ್ಯಾಭ್ಯಾಸ ಮತ್ತು ಕೆಲಸದ ಅನುಭವದ ಆಧಾರದ ಮೇಲೆ ದೊರೆಯುವಂತಹ ಅವಕಾಶಗಳ ಮಾಹಿತಿಯನ್ನು ತಿಳಿಯುವುದು
  • ವಿದೇಶದಲ್ಲಿ ಕನಿಷ್ಠ ಎರಡು ವರ್ಷಗಳಕಾಲ ಕೆಲಸಕ್ಕೆ ಹೋಗಲು ನಮ್ಮನ್ನು ನಾವು ಸಿದ್ಧಗೊಳಿಸುವುದು
  • ನಮ್ಮ ಕುಟುಂಬದ ಬೆಂಬಲವನ್ನು ಪಡೆಯುವುದು
ವಿದೇಶದಲ್ಲಿ ಉದ್ಯೋಗದ ಕನಸನ್ನು ನನಸು ಮಾಡಲು ಸರ್ಕಾರದಿಂದ ಇಲ್ಲೊಂದು ದಿಟ್ಟ ನಿರ್ಧಾರ  title=
ಸಾಂದರ್ಭಿಕ ಚಿತ್ರ

ಧಾರವಾಡ: ವಿದೇಶದಲ್ಲಿ ಉದ್ಯೋಗ ಮಾಡುವುದು ಈಗಿನ ಯುವಜನತೆಯ ಕನಸಾಗಿದೆ. ಆದರೆ ಹಲವು ಬಾರಿ ವಿದೇಶದಲ್ಲಿ ಉದ್ಯೋಗ ಬಯಸಿ ಹೋದವರು ತೊಂದರೆಗೆ ಉಂಟಾಗುವುದು ಎಲ್ಲರಿಗು ತಿಳಿದ ವಿಷಯವಾಗಿದೆ. ಇಂತಹ ತೊಂದರೆಗಳನ್ನು ನಿವಾರಿಸಿ ಸಾಮಾನ್ಯ ಜನರಿಗೆ ವಿದೇಶದಲ್ಲಿ ಸುರಕ್ಷಿತವಾದ ಉದ್ಯೋಗವನ್ನು ಪಡೆಯಲು ಉಪಯುಕ್ತವಾಗಲೆಂದು ಸರಕಾರ ನೂತನವಾಗಿ ಅಂತಾರಾಷ್ಟ್ರೀಯ ವಲಸೆ ಕೇಂದ್ರಗಳನ್ನು ಎಲ್ಲಾ ಜಿಲ್ಲೆಗಳಲ್ಲಿ ಸ್ಥಾಪಿಸಿದೆ.

ಧಾರವಾಡ ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿ ಕೌಶಲ್ಯ ಕರ್ನಾಟಕ ಯೋಜನೆಯ ಅಂಗವಾಗಿ ಪ್ರಾದೇಶಿಕ ಅಂತಾರಾಷ್ಟ್ರೀಯ ವಲಸೆ ಕೇಂದ್ರವನ್ನು ಧಾರವಾಡದಲ್ಲಿ ತರೆಲಾಗಿದೆ.

ಜಿಲ್ಲೆಯ ಯುವಜನತೆ ವಿದೇಶದಲ್ಲಿ ಉದ್ಯೋಗ ಬಯಸಿದಲ್ಲಿ ಸರಕಾರದ ಸುವ್ಯವಸ್ಥೆಯಲ್ಲಿ, ಕಾನೂನುಬದ್ಧ ಮತ್ತು ಮಾನವೀಯ ವಲಸೆಗೆ ಪ್ರಾಮುಖ್ಯತೆಯನ್ನು ನೀಡಲಾಗುವುದು. ಈ ಕೇಂದ್ರವು ಮಧ್ಯವರ್ತಿಗಳ ಹಾವಳಿಯಿಂದ ಜನರನ್ನು ಕಾಪಾಡುವಲ್ಲಿ ಸರಕಾರದ ಒಂದು ಯೋಜನೆಯಾಗಿದೆ. ಈ ಕೇಂದ್ರಗಳ ಮೂಲಕ ಕರ್ನಾಟಕದ ಯುವಜನತೆಗೆ ವಿದೇಶದಲ್ಲಿ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ ಕರ್ನಾಟಕವನ್ನು ಜಾಗತಿಕ ಮಾರುಕಟ್ಟೆಯಲ್ಲಿ ನುರಿತ ತರಬೇತಿ ಪಡೆದ ಹಾಗೂ ಪ್ರಮಾಣೀಕೃತ ಕಾರ್ಮಿಕರ ಕೇಂದ್ರವಾಗಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ : ಮಂಗಳೂರಿಗೆ ಎಂ.ಎಸ್.ಧೋನಿ ಭೇಟಿ; ಕೂಲ್ ಕ್ಯಾಪ್ಟನ್ ನೋಡಲು ಮುಗಿಬಿದ್ದ ಫ್ಯಾನ್ಸ್!

ವಿದೇಶದಲ್ಲಿ ಕೆಲಸ ಮಾಡುವ ಆಸೆ ಹೊಂದಿದ್ದರೆ, ಅದಕ್ಕೆತಕ್ಕಂತೆ ಕೆಲವು ಪೂರ್ವತಯಾರಿಯ ಅಗತ್ಯವಿರುತ್ತದೆ. ಪ್ರಮುಖವಾಗಿ ವಿದ್ಯಾಭ್ಯಾಸ ಮತ್ತು ಕೆಲಸದ ಅನುಭವದ ಆಧಾರದ ಮೇಲೆ ದೊರೆಯುವಂತಹ ಅವಕಾಶಗಳ ಮಾಹಿತಿಯನ್ನು ತಿಳಿಯುವುದು, ವಿದೇಶದಲ್ಲಿ ಕನಿಷ್ಠ ಎರಡು ವರ್ಷಗಳಕಾಲ ಕೆಲಸಕ್ಕೆ ಹೋಗಲು ನಮ್ಮನ್ನು ನಾವು ಸಿದ್ಧಗೊಳಿಸುವುದು, ನಮ್ಮ ಕುಟುಂಬದ ಬೆಂಬಲವನ್ನು ಪಡೆಯುವುದು, ನಾವು ಹೋಗಬಯಸುವ ದೇಶಗಳ ಸಾಮಾಜಿಕ ಜೀವನ ಪದ್ಧತಿಗಳ ಬಗ್ಗೆ ಹಾಗೂ ಅಲ್ಲಿಯ ಸಂಸ್ಕøತಿಯ ಬಗ್ಗೆ ತಿಳಿಯುವುದು, ಮತ್ತು ನಮಗೆ ಸಿಗಬಹುದಾದ ಉದ್ಯೋಗದಲ್ಲಿ ಸಿಗುವಂತಹ ಸಂಬಳದ ಬಗ್ಗೆ ಮಾಹಿತಿ ಪಡೆಯುವುದು ಮುಖ್ಯವಾಗಿದೆ. ಈ ಎಲ್ಲ ತಯಾರಿಗಳಲ್ಲಿ ಕೇಂದ್ರದ ಸಿಬ್ಬಂದಿಗಳು ಸಹಾಯ ಹಸ್ತವನ್ನು ನೀಡುವರು. ಅಷ್ಟೇ ಅಲ್ಲದೇ ಉದ್ಯೋಗ ಪಡೆಯಲು ಬೇಕಾಗುವ ಪ್ರಮುಖ ದಾಖಲಾತಿಗಳ ದಂತಹ ಪಾಸ್ಪೋರ್ಟ್ ಮಾಡಿಸುವುದು, ಬ್ಯಾಂಕ ಖಾತೆಯನ್ನು ತೆರೆಯುವುದು, ಕೆಲಸದ ಅನುಭವದ ಮತ್ತು ವಿದ್ಯಾರ್ಹತೆಯ ಪ್ರಮಾಣಪತ್ರಗಳನ್ನು ಸಿದ್ಧಪಡಿಸಿಕೊಳ್ಳುವ ಬಗ್ಗೆ ಮಾಹಿತಿ ಒದಗಿಸುವ ಮೂಲಕ ಕೇಂದ್ರವು ಸಂರ್ಪಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ.

ವಿದೇಶಿ ಉದ್ಯೋಗದಾತರ ಜೊತೆ ಸಂಭಾಷಿಸುವಾಗ ನಡೆದುಕೊಳ್ಳಬೇಕಾದ ರೀತಿ, ಇತರೆ ದೇಶಗಳಲ್ಲಿ ಇರುವ ಸಾಮಾಜಿಕ ಜೀವನ, ಅಲ್ಲಿಯ ಕಾನೂನು ವ್ಯವಸ್ಥೆ, ಜೀವನ ಉತ್ತಮಗೊಳಿಸಲು ಉಳಿತಾಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವಲ್ಲಿ ಕೇಂದ್ರದಲ್ಲಿ ಜಿಲ್ಲಾ ಆಪ್ತಸಮಾಲೋಚಕರಿಂದ ಮಾಹಿತಿಯನ್ನು ಒದಗಿಸಲಾಗುವುದು.

ವಿದೇಶದಲ್ಲಿ ಕೆಲಸಮಾಡುತ್ತಿರುವಾಗ ಸಂಬಳ, ಕೆಲಸದ ಸಮಯ, ಆರೊಗ್ಯ, ಕೆಲಸದ ಹೆಚ್ಚಿನ ಹೊರೆ, ಸುರಕ್ಷತೆ, ಉದ್ಯೊಗದಾತರ ಜೊತೆ ಆದಂತಹ ಒಪ್ಪಂದದ ಪಾಲನೆಯಾಗದಿರುವುದು, ಇಂತಹ ಇನ್ನೂ ಅನೇಕ ಸಂದರ್ಭಗಳಲ್ಲಿ ಕೆಲಸದಲ್ಲಿ ಏನಾದರೂ ತೊಂದರೆಗಳಾದರೆ ನೇರವಾಗಿ ಆ ದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಹಾಯಕ್ಕಾಗಿ ಸಂಪರ್ಕಿಸಬಹುದಾಗಿದೆ. ಅತೀ ಮುಖ್ಯವಾಗಿ ಮಹಿಳಾ ವಲಸಿಗರಿಗಾಗಿ ಸರಕಾರದಿಂದ ವಿಶೇಷ ಕಾಳಜಿಯನ್ನು ವಹಿಸಲಾಗಿದ್ದು, ಮನೆಗೆಲಸ ಮಾಡಲು ವಿದೇಶಕ್ಕೆ ಹೋಗಬಯಸುವ ಮಹಿಳೆಯರಿಗೆ ವಿಶೇಷವಾಗಿ ಉಚಿತವಾಗಿ ಆಪ್ತಸಮಾಲೋಚನೆ ಮಾಡಲಾಗುವುದು. ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮವು ವಿದೇಶದಲ್ಲಿ ಕೆಲಸ ಮಾಡಲು ಇಚ್ಛಿಸುವ ಮಹಿಳೆಯರನ್ನು ನೇಮಕ ಮಾಡಲು ಕೇಂದ್ರ ಸರಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಮಾನ್ಯತೆ ಪಡೆದ ಏಕೈಕ ಸಂಸ್ಥೆಯಾಗಿದೆ.

ವಲಸಿಗರು ಉದ್ಯೊಗ ಪಡೆದನಂತರ ಭಾರತದಿಂದ ಹೊರಡುವ ಮುಂಚಿತವಾಗಿ ಅವರಿಗೆ ನಿರ್ಗಮನ ಪೂರ್ವ ಹೊಸ ಪರಿಸರ ಮತ್ತು ಪರಿಸ್ಥಿತಿ ಪರಿಚಯಿಸುವ ತರಬೇತಿಯನ್ನು ಕೇಂದ್ರ ಸರಕಾರ ದಿಂದ ಗುರುತಿಸಲಾದ ತರಬೇತಿ ಕೇಂದ್ರಗಳಲ್ಲಿ ನೀಡಲಾಗುವುದು. ತರಬೇತಿಯಲ್ಲಿ ವಿದೇಶಿ ಸಂಸ್ಕøತಿ, ಅಲ್ಲಿನ ನಡೆ-ನುಡಿ, ಕಾನೂನು ವ್ಯವಸ್ಥೆ, ಭಾಷೆ, ಮೃದು ಕೌಶಲ್ಯಗಳು ಹಾಗೂ ನಿರ್ದಿಷ್ಟವಾದ ದೇಶಗಳಿಗೆ ಹೋಗಲು ಬೇಕಾದ ಇನ್ನಿತರ ವಿಷಯಗಳ ಬಗ್ಗೆ ತಿಳಿಸಲಾಗುವುದು.

ಇದನ್ನೂ ಓದಿ : Ind Vs SL : ಇಶಾನ್ ಕಿಶನ್ ಮೇಲೆ ಮುನಿಸಿಕೊಂಡ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ!

ಅದರ ಜೊತಗೆ ಹಲವು ವರ್ಷಗಳ ಕಾಲ ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಕುಟುಂಬಗಳಿಗೂ ಸಹ ಈ ಕೇಂದ್ರಗಳು ನೆರವಾಗಲಿವೆ. ಅದೇ ರೀತಿ ಕೆಲಸ ನಿರ್ವಹಿಸಿ ಮರಳಿ ಬಂದ ಕಾರ್ಮಿಕರಿಗೆ ತಮ್ಮ ಊರುಗಳಲ್ಲಿ ಸಾಮಾಜಿಕ ಜೀವನವನ್ನು ನೆಲೆಗೊಳಿಸುವಲ್ಲಿ ಸರಕಾರದಿಂದ ಸೇವೆಯನ್ನು ಒದಗಿಸುವಲ್ಲಿ ಕೇಂದ್ರವು ನೆರವಾಗಲಿದೆ.

ಕುವೈತ್ ದೇಶದಲ್ಲಿ ವೈದ್ಯರಿಗಾಗಿ ಭಾರಿ ಬೇಡಿಕೆ ಇದ್ದು 468 ಹುದ್ದೆಗಳಿಗೆ ಅಂತರಾಷ್ಟ್ರೀಯ ವಲಸೆ ಕೇಂದ್ರದಿಂದ ನೇರ ನೇಮಕಾತಿ ನಡೆಯಲಿದ್ದು ಜನೇವರಿ17 ರಿಂದ 27ರ ವರೆಗೆ ಬೆಂಗಳೂರಿನಲ್ಲಿ ಕುವೈತ್‍ನ ಉದ್ಯೋಗ ದಾತರಿಂದ ಸಂದರ್ಶನ ನಡೆಯಲಿದೆ. 6 ವರ್ಷ ಮೇಲ್ಪಟ್ಟು ಅನುಭವ ಹೊಂದಿರುವ ಅರವಳಿಕೆ ತಜÐರು, ಸಾಮಾನ್ಯ ಶಸ್ತ್ರಚಿಕಿತ್ಸಕರು, ಆಂತರಿಕ ಔಷಧಿ ತಜ್ಞರು, ಪ್ರಸೂತಿ ಶಾಸ್ತ್ರಜ್ಞರು, ಸ್ತ್ರೀರೋಗ ತಜ್ಞರು, ಹೃದ್ರೋಗತಜ್ಞರು, ಮೂಳೆ ಚಿಕಿತ್ಸಕರು, ಮಕ್ಕಳ ತಜ್ಞರು, ತುರ್ತು ವಿಭಾಗತಜ್ಞರು, ಕುಟುಂಬ ವೈದ್ಯರು, ತೀವ್ರ ನಿಗಾ ಘಟಕ ತಜ್ಞರು, ವಿಕಿರಣ ಶಾಸ್ತ್ರಜ್ಞರು, ಮತ್ತು ಎನ್‍ಇಟಿ ತಜ್ಞರು, ಜನೇವರಿ 11ರ ಒಳಗಾಗಿ https://www.kaushalkar.com/doctor-registration-kuwait/ ಲಿಂಕನಲ್ಲಿ ನೋಂದಾಯಿಸಬಹುದಾಗಿದೆ. ಮತ್ತು ಹೆಚ್ಚಿನ ಮಾಹಿತಿಗಾಗಿ 0836-2972388, 9945927305, 9113505020ಗೆ ಸಂಪರ್ಕಿಸಬಹುದು.

ಈ ಮೇಲೆ ತಿಳಿಸಿದ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿ ನೀಡಲು, ಮಾರ್ಗದರ್ಶನ ಮಾಡಲು ಅಂತಾರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರವು ಉತ್ತಮ ವೇದಿಕೆಯಾಗಿದೆ. ಅಂತಾರಾಷ್ಟ್ರೀಯ ವಲಸೆ ಕೇಂದ್ರ- ಕರ್ನಾಟಕವು ಬೆಂಗಳೂರನ್ನು ರಾಜ್ಯ ಕಛೇರಿಯಾಗಿಸಿಕೊಂಡು, ನಾಲ್ಕು ವಲಯವಾರು ಕಛೇರಿಗಳು ಹಾಗೂ ಎಂಟು ಮಾಹಿತಿ ಕೇಂದ್ರಗಳ ಮೂಲಕ ಭಾರತ ಸರಕಾರದ ಸಹಯೋಗದಲ್ಲಿ ವಿದೇಶಿ ಉದ್ಯೋಗದಾತರ ಆಯ್ಕೆಯಲ್ಲಿ ವಿಶೇಷ ಎಚ್ಚರ ವಹಿಸಲು ಭಾರತೀಯ ಧೂತವಾಸಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ. ಧಾರವಾಡ ಪ್ರಾದೇಶಿಕ ಕಛೇರಿಯಾಗಿದ್ದು, ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಉತ್ತರಕನ್ನಡ ವ್ಯಾಪ್ತಿಯನ್ನು ಹೊಂದಿರುತ್ತದೆ. ಆಸಕ್ತರು ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, 1ನೇ ಮಹಡಿ, ರಾಯಾಪೂರ, ಧಾರವಾಡ, ಕಛೇರಿಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ 0836-2972388, 9945927305, 9113505020 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News