ಬೆಂಗಳೂರು: ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಬಿಡುಗಡೆಯಾದಾಗಿನಿಂದ, ಇದು ಹಲವಾರು ದಾಖಲೆಗಳನ್ನು ಮುರಿದು ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಾ ಸಾಗುತ್ತಿದೆ.ಈಗ ಈ ಚಿತ್ರ ಬಿಡುಗಡೆಯಾಗಿ ಸುಮಾರು 26 ದಿನಗಳಾಗುತ್ತಾ ಬಂದಿದ್ದರೂ ಸಹ ಅದರ ಹವಾ ಮಾತ್ರ ಇನ್ನೂ ಕಡಿಮೆಯಾಗಿಲ್ಲ.
ತಮಿಳಿನ ಬೀಸ್ಟ್, ಹಿಂದಿಯ, ಜರ್ಸಿ, ರನ್ವೇ 34 ಹಾಗೂ ಹಿರೋಪಂತಿ 2 ಹಾಗೂ ಇತ್ತೀಚಿಗಿನ ಹಾಲಿವುಡ್ ಚಿತ್ರ ಡಾಕ್ಟರ್ ಸ್ಟ್ರೇಂಜ್ ನಂತಹ ಚಿತ್ರಗಳು ಬಿಡುಗಡೆಯಾದಾಗಲೂ ಸಹ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಆ ಮೂಲಕ ಸಾರ್ವಕಾಲಿಕ ಗಳಿಕೆ ಮಾಡಿದ ಚಿತ್ರಗಳಲ್ಲಿ ಕೆಜಿಎಫ್ ೨ ಈಗ ಮೂರನೇ ಸ್ಥಾನವನ್ನು ಅಲಂಕರಿಸಿದೆ.
ಇದನ್ನೂ ಓದಿ: Kriti Kartik Affair: ಕಾರ್ತಿಕ್ ಆರ್ಯನ್ ಮತ್ತು ಕೃತಿ ಸನೊನ್ ಸಂಬಂಧದ ಗುಟ್ಟು ರಟ್ಟು..!
#KGF2 shows no signs of fatigue in mass pockets, despite reduction of screens/shows… Proves a tough opponent to #Hollywood giant #DoctorStrange in those circuits... [Week 4] Fri 3.85 cr, Sat 4.75 cr, Sun 6.25 cr. Total: ₹ 412.80 cr. #India biz. #Hindi version. pic.twitter.com/9pdKwpMKWw
— taran adarsh (@taran_adarsh) May 9, 2022
ಇದುವರೆಗೂ 1150 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಗಳಿಕೆ ಮಾಡಿರುವ ಈ ಚಿತ್ರ, ಈಗ 1200 ಕೋಟಿ ರೂ ಗಡಿ ತಲುಪುತ್ತಿದೆ.ಅಷ್ಟೇ ಅಲ್ಲದೆ ಈಗಾಗಲೇ ನಾಲ್ಕು ಭಾಷೆಗಳಲ್ಲಿ 100 ಕೋಟಿ ಗಳಿಸಿದ ಮೊದಲ ಭಾರತೀಯ ಚಿತ್ರ ಎನ್ನುವ ಹೆಗ್ಗಳಿಕೆಗೂ ಕೂಡ ಕೆಜಿಎಫ್ ೨ ಚಿತ್ರ ಪಾತ್ರವಾಗಿದೆ.ಇದರ ದಾಖಲೆಗಳು ಇಷ್ಟಕ್ಕೆ ಮುಗಿಯಿತು ಎಂದುಕೊಳ್ಳಬೇಡಿ ಈಗ, ಅದು ದಕ್ಷಿಣ ಕೊರಿಯಾದಲ್ಲಿಯೂ ಕೂಡ ಬಿಡುಗಡೆಯಾಗಿದೆ.ಆ ಮೂಲಕ ಈ ಸಾಧನೆ ಮಾಡಿದ ಮೊದಲ ಕನ್ನಡದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.ಅಷ್ಟೇ ಅಲ್ಲದೆ ಕೊರೋನಾ ಸಾಂಕ್ರಾಮಿಕ ಕಾಲಾವಧಿ ನಂತರ ಅಲ್ಲಿ ಪ್ರದರ್ಶನವಾಗುತ್ತಿರುವ ಮೊದಲ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಕೆಯೂ ಕೂಡ ಈ ಚಿತ್ರದ್ದಾಗಿದೆ.ಸಿಯೋಲ್‌ನಲ್ಲಿ ಕೆಜಿಎಫ್ 2 ಸ್ಕ್ರೀನಿಂಗ್ ಅನ್ನು ಅಭಿಮಾನಿಗಳು ಆಚರಿಸುತ್ತಿರುವ ಚಿತ್ರಗಳು ಈಗ ಅಂತರ್ಜಾಲದಲ್ಲಿ ವೈರಲ್ ಆಗಿವೆ.
KGF Chapter 2 ಕನ್ನಡ ಚಲನಚಿತ್ರ ಪ್ರದರ್ಶನದಲ್ಲಿ ಕೊರಿಯಾ ಕನ್ನಡ ಕೂಟದ ಸದಸ್ಯರು. @TheNameIsYash @hombalefilms @TeamYashFC pic.twitter.com/PRK79NYg48
— ಕೊರಿಯಾ ಕನ್ನಡ ಕೂಟ l Korea Kannada Koota (@KootaKorea) May 9, 2022
ಇದನ್ನೂ ಓದಿ: Aishwarya Rajesh New Movie : ಐಶ್ವರ್ಯಾ ರಾಜೇಶ್ ನಟನೆಯ 'ಡ್ರೈವರ್ ಜಮುನಾ' ಸಿನಿಮಾದ ಫಸ್ಟ್ ಲುಕ್ ರಿಲೀಸ್
ಈಗ ಹಿಂದಿ ಬೆಲ್ಟ್ ನಲ್ಲಿ ಕೆಜಿಎಫ್ 2 ಚಿತ್ರ ಮಾಡುತ್ತಿರುವ ಬಾಕ್ಸ್ ಆಫೀಸ್ ಕಮಾಲ್ ಗೆ ಪ್ರತಿಕ್ರಿಯಿಸಿರುವ ಸಿನಿ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ "#ಕೆಜಿಎಫ್ 2 ಮಾಸ್ ಪಾಕೆಟ್ಸ್‌ನಲ್ಲಿ ಯಾವುದೇ ಆಯಾಸದ ಲಕ್ಷಣಗಳನ್ನು ತೋರಿಸುವುದಿಲ್ಲ, ಪರದೆಗಳು/ಪ್ರದರ್ಶನಗಳ ಕಡಿತದ ಹೊರತಾಗಿಯೂ... ಆ ಸರ್ಕ್ಯೂಟ್‌ಗಳಲ್ಲಿ ಹಾಲಿವುಡ್ ದೈತ್ಯ ಡಾಕ್ಟರ್‌ಸ್ಟ್ರೇಂಜ್‌ಗೆ ಕಠಿಣ ಎದುರಾಳಿಯನ್ನು ಸಾಬೀತುಪಡಿಸುತ್ತದೆ" ಎಂದು ಅವರು ಬರೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.