NRI News: ಗುಜರಾತ್ ನ ಅಹಮದಾಬಾದ್ ನಲ್ಲಿ 63 ವರ್ಷದ ಮಹಿಳೆಯೊಬ್ಬರಿಗೆ ವ್ಯಕ್ತಿಯೋರ್ವ ವಂಚನೆ ಮಾಡಿರುವ ಘಟನೆ ನಡೆದಿದೆ. ಎನ್ ಆರ್ ಐ ಮಹಿಳೆ ವಾಸ್ನಾ ಪ್ರದೇಶದಲ್ಲಿ ನೆಲೆಸಿದ್ದಾರೆ. ಶುಕ್ರವಾರ ಅವರು ಸೈಬರ್ ಕ್ರೈಂ ಪೊಲೀಸರಿಗೆ ವಂಚನೆ ಸಂಬಂಧ ದೂರು ನೀಡಿದ್ದಾರೆ. ವಿದೇಶಿ ಪ್ರಜೆಯಂತೆ ಸೋಗು ಹಾಕಿಕೊಂಡಿದ್ದ ವ್ಯಕ್ತಿ ತನ್ನ ಭಾವನೆಗಳ ಜೊತೆ ಆಟವಾಡಿದ್ದಲ್ಲದೆ, 34 ಲಕ್ಷ ರೂಪಾಯಿ ವಂಚಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಇದನ್ನೂ ಓದಿ: Omicron BF.7 detected: ಚೀನಾ ಕೋವಿಡ್ ಉಲ್ಬಣದ ನಡುವೆ ಗುಜರಾತ್-ಒಡಿಶಾದಲ್ಲಿ Omicron BF.7 ಪತ್ತೆ
ಅಮೆರಿಕದಲ್ಲಿ 8 ತಿಂಗಳು ಹಾಗೂ ಭಾರತದಲ್ಲಿ 4 ತಿಂಗಳು ನೆಲೆಸಿರುವ ಮಹಿಳೆಯೊಬ್ಬರು ನಗರದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಆಂಡ್ರೆಸ್ ಮಾರ್ಟಿನೆಜ್ ಎಂಬ ವ್ಯಕ್ತಿಯೊಂದಿಗೆ ಸಾಮಾಜಿಕ ಮಾಧ್ಯಮ ವೆಬ್‌ಸೈಟ್ ಮೂಲಕ ಸ್ನೇಹ ಬೆಳೆಸಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ. ಆ ವ್ಯಕ್ತಿ ತನ್ನನ್ನು ಸ್ಕಾಟಿಷ್ (ಸ್ಕಾಟ್ ಲ್ಯಾಂಡ್ ಮೂಲ) ಎಂದು ಪರಿಚಯ ಮಾಡಿಕೊಂಡಿದ್ದನು.
“ನನ್ನ ಗಂಡನ ಮರಣದ ನಂತರ ನಾನು ಖಿನ್ನತೆಗೆ ಒಳಗಾಗಿದ್ದೆ. ಮಾರ್ಟಿನೆಜ್ ನನ್ನು ಸೆಪ್ಟೆಂಬರ್ 2022 ರಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಭೇಟಿಯಾಗಿದ್ದೆ. ಈ ಸಮಯದಲ್ಲಿ ನಾನು ಅಹಮದಾಬಾದ್‌ನಲ್ಲಿ ಮಾತ್ರ ಇದ್ದೆ. ನನ್ನ ಗಂಡನ ಸಾವಿನಿಂದ ನಾನು ತೀವ್ರ ಖಿನ್ನತೆಗೆ ಒಳಗಾಗಿದ್ದೆ. ನನ್ನೊಂದಿಗೆ ಮಾರ್ಟಿನೆಜ್ ತುಂಬಾ ಸ್ನೇಹ ಬೆಳೆಸಿದ್ದ. ನನ್ನ ವಾಟ್ಸಾಪ್ ನಂಬರ್ ಕೂಡ ಅವರ ಜೊತೆ ಹಂಚಿಕೊಂಡಿದ್ದೆ. ಮಾರ್ಟಿನೆಜ್ ಅವರು ತುಂಬಾ ಶ್ರೀಮಂತರು ಮತ್ತು ಮೂರರಿಂದ ನಾಲ್ಕು ದೊಡ್ಡ ವ್ಯವಹಾರಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದ” ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ. .
ಪೊಲೀಸರಿಗೆ ನೀಡಿರುವ ದೂರಿನಲ್ಲಿ ಪೊಲೀಸರು, “ಆತನಿಗೆ ಹೇಗೋ ನನ್ನ ಪತಿ ಸಾವನ್ನಪ್ಪಿದ್ದಾರೆ ಎಂದು ತಿಳಿಯಿತು. ಈ ವಿಚಾರದಲ್ಲಿಯೇ ನನ್ನೊಂದಿಗೆ ಭಾವನಾತ್ಮಕವಾಗಿ ಮಾತನಾಡಲು ಪ್ರಾರಂಭಿಸಿದ. ಸ್ವಲ್ಪ ಸಮಯದ ಹಿಂದೆ ಅವನ ಹೆಂಡತಿಯೂ ನಿಧನರಾಗಿದ್ದರು ಎಂದು ಹೇಳಿದ್ದ. ನಾನು ಆತನೊಂದಿಗೆ ಭಾವನಾತ್ಮಕವಾಗಿ ಬೆರೆಯುವ ರೀತಿಯಲ್ಲಿ ಮಾತನಾಡುತ್ತಿದ್ದ” ಎಂದಿದ್ದಾರೆ.
ಮಾರ್ಟಿನೆಜ್ ತನ್ನನ್ನು ಮದುವೆಯಾಗಲು ಬಯಸಿರುವುದಾಗಿ ಹೇಳಿದ್ದಾಗಿ ಮಹಿಳೆ ಹೇಳಿದ್ದಾರೆ. ಆದರೆ ಮಹಿಳೆ ನಿರಾಕರಿಸಿದ್ದು, ಆತನೊಂದಿಗೆ ಸ್ನೇಹ ಉಳಿಸಿಕೊಳ್ಳುವುದಾಗಿ ಹೇಳಿದ್ದಾರೆ. ಸೆಪ್ಟೆಂಬರ್‌ನಲ್ಲಿ, ಮಾರ್ಟಿನೆಜ್ ಅವರು ವ್ಯಾಪಾರ ಸಭೆಗೆ ಹೊರಡುವುದಾಗಿ ಹೇಳಿದ್ದ.
ಕೆಲವು ದಿನಗಳ ನಂತರ ಆತ ಆಕೆಗೆ ಕರೆ ಮಾಡಿ ಕೆಲವು ಹಣಕಾಸಿನ ಸಮಸ್ಯೆಗಳಿಂದಾಗಿ ಅವರ ಖಾತೆಯನ್ನು ನಿರ್ಬಂಧಿಸಲಾಗಿದೆ. ಅವರ ಎಲ್ಲಾ ಹಣವನ್ನು ಸಹ ಲೂಟಿ ಮಾಡಲಾಗಿದೆ ಎಂದು ಹೇಳಿದ್ದಾನೆ. ಹೀಗಾಗಿ ಸಹಾಯ ಮಾಡಲು ಮುಂದಾದ ಮಹಿಳೆ, ಸೆಪ್ಟೆಂಬರ್ ಮತ್ತು ನವೆಂಬರ್ ತಿಂಗಳ ನಡುವೆ ಸುಮಾರು 19 ಲಕ್ಷ ರೂ. ಹಣವನ್ನು ವರ್ಗಾಯಿಸಿದ್ದಾರೆ.
ನಂತರ ನವೆಂಬರ್ ಮೊದಲ ವಾರದಲ್ಲಿ ಕೆಲವು ಉಡುಗೊರೆಗಳನ್ನು ಕಳುಹಿಸಿದ್ದಾಗಿ ಮಹಿಳೆ ಹೇಳಿದ್ದಾರೆ. ಇದಾದ ಬಳಿಕ ಮುಂಬೈ ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿಕೊಂಡ ಮಹಿಳೆಯಿಂದ ಫೋನ್ ಕರೆಗಳು ಬಂದವು. ಬಂದಿರುವ ಉಡುಗೊರೆಗೆ ದಂಡದ ಮೊತ್ತವನ್ನು ಪಾವತಿಸಬೇಕು ಎಂದು ಹೇಳಿದ್ದಾರೆ. ಹೀಗಾಗಿ 15 ಲಕ್ಷ ರೂ. ಪಾವತಿಸಿದೆ.
ಇದನ್ನೂ ಓದಿ: NRI Sammelan: ಯುಪಿ ಸಿಎಂ ಯೋಗಿ-ಉದಯಪುರ ರಾಜಕುಮಾರ ಭೇಟಿ: ಬಿಜೆಪಿಗೆ ಸೇರ್ಪಡೆಯಾಗ್ತಾರ ಪ್ರಿನ್ಸ್!
ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಯಂತೆ ನಟಿಸಿದ ವ್ಯಕ್ತಿಯೊಬ್ಬರು ಆತನಿಂದ ಸ್ವಲ್ಪ ಹಣಕ್ಕೆ ಬೇಡಿಕೆಯಿಟ್ಟರು. ಆದರೆ ನಂತರ ತಾನು ಮೋಸ ಹೋಗುತ್ತಿದ್ದೇನೆ ಎಂದು ಅರಿವಾಯಿತು. ಹೀಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ