NRI News: ಭಾರತ ಬಿಲ್ ಪೇಮೆಂಟ್ ವ್ಯವಸ್ಥೆಯನ್ನು ಬಳಸಿ ಇನ್ಮುಂದೆ NRI ಗಳು ಕೂಡ ಯುಟಿಲಿಟಿ ಬಿಲ್ಸ್ ಪಾವತಿಸಬಹುದು

NRI News: ಭಾರತ್ ಬಿಲ್ ಪಾವತಿ ವ್ಯವಸ್ಥೆಯು (BBPS) ಪ್ರಮಾಣೀಕೃತ ಬಿಲ್ ಪಾವತಿಗಳಿಗೆ ಒಂದು ಇಂಟರ್‌ಆಪರೇಬಲ್ ವೇದಿಕೆಯಾಗಿದ್ದು. 20,000 ಕ್ಕೂ ಹೆಚ್ಚು ಬಿಲ್ಲರ್‌ಗಳು ಈ ವ್ಯವಸ್ಥೆಯ ಭಾಗವಾಗಿದ್ದಾರೆ ಮತ್ತು ಮಾಸಿಕ ಆಧಾರದ ಮೇಲೆ 8 ಕೋಟಿಗೂ ಅಧಿಕ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.  

Written by - Nitin Tabib | Last Updated : Sep 16, 2022, 11:28 AM IST
  • ಈ ಕುರಿತು ಹೇಳಿಕೆ ನೀಡಿದ್ದ ಶಕ್ತಿಕಾಂತ್ ದಾಸ್ ಈ ಕ್ರಮವು ಎನ್‌ಆರ್‌ಐಗಳಿಗೆ ಭಾರತದಲ್ಲಿರುವ ಅವರ ಕುಟುಂಬದ ಪರವಾಗಿ
  • ಯುಟಿಲಿಟಿ, ಶೈಕ್ಷಣಿಕ ಮತ್ತು ಇತರ ಪಾವತಿಗಳಿಗೆ ಬಿಲ್ ಪಾವತಿಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ
  • ಮತ್ತು ವಿಶೇಷವಾಗಿ ಹಿರಿಯ ನಾಗರಿಕರಿಗೆ ಇದು "ಹೆಚ್ಚು ಪ್ರಯೋಜನವನ್ನು ನೀಡುತ್ತದೆ" ಎಂದಿದ್ದಾರೆ.
NRI News: ಭಾರತ ಬಿಲ್ ಪೇಮೆಂಟ್ ವ್ಯವಸ್ಥೆಯನ್ನು ಬಳಸಿ ಇನ್ಮುಂದೆ NRI ಗಳು ಕೂಡ ಯುಟಿಲಿಟಿ ಬಿಲ್ಸ್ ಪಾವತಿಸಬಹುದು title=
NRI News

NRI News: ಭಾರತ ಬಿಲ್ ಪೇಮೆಂಟ್ ಸಿಸ್ಟಮ್ ಬಳಸಿ ಇನ್ಮುಂದೆ ಅನಿವಾಸಿ ಭಾರತೀಯರು ತಮ್ಮ ಕೂಡ ತಮ್ಮ ಕುಟುಂಬ ಸದಸ್ಯರ ಪರವಾಗಿ  ಯುಟಿಲಿಟಿ ಬಿಲ್ ಹಾಗೂ ಶೈಕ್ಷಣಿಕ ಶುಲ್ಕವನ್ನು ಪಾವತಿಸಬಹುದು. ಈ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಸುತ್ತೋಲೆಯನ್ನು ಹೊರಡಿಸಿದೆ.

ಭಾರತ್ ಬಿಲ್ ಪಾವತಿ ವ್ಯವಸ್ಥೆಯು (BBPS) ಪ್ರಮಾಣೀಕೃತ ಬಿಲ್ ಪಾವತಿಗಳಿಗೆ ಒಂದು ಇಂಟರ್‌ಆಪರೇಬಲ್ ವೇದಿಕೆಯಾಗಿದ್ದು. 20,000 ಕ್ಕೂ ಹೆಚ್ಚು ಬಿಲ್ಲರ್‌ಗಳು ಈ ವ್ಯವಸ್ಥೆಯ ಭಾಗವಾಗಿದ್ದಾರೆ ಮತ್ತು ಮಾಸಿಕ ಆಧಾರದ ಮೇಲೆ 8 ಕೋಟಿಗೂ ಅಧಿಕ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.

"ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ (BBPS) ಮೂಲಕ ಬಿಲ್ಲರ್ (ಫಲಾನುಭವಿ) ನ KYC ಹೊಂದಿದ ಬ್ಯಾಂಕ್ ಖಾತೆಗೆ ರುಪೀ ಡ್ರಾಯಿಂಗ್ ಅರೇಂಜ್ಮೆಂಟ್ (RDA) ಅಡಿಯಲ್ಲಿ ಸ್ವೀಕರಿಸಿದ ಫಾರಿನ್ ಇನ್ವರ್ಡ್ ರೆಮಿಟನ್ಸ್ ಗಳನ್ನು ಅನುಮತಿಸಲು ನಿರ್ಧರಿಸಲಾಗಿದೆ," ಎಂದು RBI ಗುರುವಾರ ಹೇಳಿದೆ. ಈ ಕುರಿತು ಕಳೆದ ತಿಂಗಳು ಆರ್ಬಿಐ ಗವರ್ನರ್ ಶಕ್ತಿಕಾಂತಾ ದಾಸ್ ಅವರು ಮಾಹಿತಿ ನೀಡಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. 

ಇದನ್ನೂ ಓದಿ-NRI News: ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸುವಲ್ಲಿ ಭಾರತ ನಂಬರ್ 1

ಈ ಕುರಿತು ಹೇಳಿಕೆ ನೀಡಿದ್ದ ಶಕ್ತಿಕಾಂತ್ ದಾಸ್ ಈ ಕ್ರಮವು ಎನ್‌ಆರ್‌ಐಗಳಿಗೆ ಭಾರತದಲ್ಲಿರುವ ಅವರ ಕುಟುಂಬದ ಪರವಾಗಿ ಯುಟಿಲಿಟಿ, ಶೈಕ್ಷಣಿಕ ಮತ್ತು ಇತರ ಪಾವತಿಗಳಿಗೆ ಬಿಲ್ ಪಾವತಿಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ವಿಶೇಷವಾಗಿ ಹಿರಿಯ ನಾಗರಿಕರಿಗೆ ಇದು "ಹೆಚ್ಚು ಪ್ರಯೋಜನವನ್ನು ನೀಡುತ್ತದೆ" ಎಂದಿದ್ದಾರೆ.

ಇದನ್ನೂ ಓದಿ-NRIಗಳು ಆಧಾರ್ ಕಾರ್ಡ್ ಪಡೆಯಲು ಅರ್ಹರೇ? ಇಲ್ಲಿದೆ ಮಹತ್ವದ ಮಾಹಿತಿ

ಪ್ರಸ್ತುತ ರೂಪೀ ಡ್ರಾಯಿಂಗ್ ಅರೆಂಜ್ ಮೆಂಟ್ ಅಡಿಯಲ್ಲಿ ಸ್ವೀಕರಿಸಲಾಗುವ ಫಾರಿನ್ ಇನ್ವರ್ಡ್ ರೆಮಿಟೆನ್ಸ್ ಕೆವೈಸಿ ಪೂರ್ಣಗೊಳಿಸಿದ ಫಲಾನುಭವಿ ಬ್ಯಾಂಕ್ ಖಾತೆಗಳಿಗೆ NEFT ಹಾಗೂ IMPS ನಂತಹ ಇಲೆಕ್ಟ್ರಾನಿಕ್ ಮೋಡ್ ಮೂಲಕ ವರ್ಗಾಯಿಸಬಹುದಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News