NRI: ಅರಬ್ ರಾಷ್ಟ್ರದಲ್ಲಿ ಭಾರತೀಯ ಮಾಡಿದ ಈ ಕೆಲಸಕ್ಕೆ ಹರಿದುಬರುತ್ತಿದೆ ಶುಭಾಶಯಗಳ ಮಹಾಪೂರ

Indians in the UAE: ಖಲೀಜ್ ಟೈಮ್ಸ್ ವರದಿಯ ಪ್ರಕಾರ, ಉಪೇಂದ್ರ ನಾಥ್ ಚತುರ್ವೇದಿ ಎಂಬವರಿಗೆ ಸಾರ್ವಜನಿಕ ಸ್ಥಳದಲ್ಲಿ 1,34,930 ದಿರ್ಹಮ್ (ರೂ. 30,22,500) ನಗದು ಸಿಕ್ಕಿಬಿದ್ದಿದೆ. ಅದನ್ನು ತಕ್ಷಣವೇ ಚತುರ್ವೇದಿ ಅಲ್ ರಫಾ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಅವರಿಗೆ ನೀಡಿದ್ದಾರೆ.

Written by - Bhavishya Shetty | Last Updated : Jan 9, 2023, 10:27 AM IST
    • ಯುಎಇಯಲ್ಲಿ ಒಬ್ಬ ಭಾರತೀಯ ಮಾಡಿರುವ ಕೆಲಸದಿಂದ ಎಲ್ಲರೂ ಸಂತೋಷಗೊಂಡಿದ್ದಾರೆ
    • ಅಲ್ಲಿನ ಪೊಲೀಸರು ಕೂಡ ಈ ವ್ಯಕ್ತಿಯನ್ನು ಸನ್ಮಾನಿಸಿದ್ದಾರೆ
    • ಈ ಭಾರತೀಯ ತನಗೆ ಸಿಕ್ಕ ಲಕ್ಷಗಟ್ಟಲೆ ರೂಪಾಯಿಗಳನ್ನು ಹಿಂತಿರುಗಿಸಿ ಪೊಲೀಸರಿಗೆ ನೀಡಿದ್ದಾರೆ
NRI: ಅರಬ್ ರಾಷ್ಟ್ರದಲ್ಲಿ ಭಾರತೀಯ ಮಾಡಿದ ಈ ಕೆಲಸಕ್ಕೆ ಹರಿದುಬರುತ್ತಿದೆ ಶುಭಾಶಯಗಳ ಮಹಾಪೂರ title=
NRI

Indians in the UAE: ಯುಎಇಯಲ್ಲಿ ಒಬ್ಬ ಭಾರತೀಯ ಮಾಡಿರುವ ಕೆಲಸದಿಂದ ಎಲ್ಲರೂ ಸಂತೋಷಗೊಂಡಿದ್ದು, ಸಾಕಷ್ಟು ಪ್ರಶಂಸನೆಗಳು ಕೇಳಿಬರುತ್ತಿವೆ. ಅಲ್ಲಿನ ಪೊಲೀಸರು ಕೂಡ ಈ ವ್ಯಕ್ತಿಯನ್ನು ಸನ್ಮಾನಿಸಿದ್ದಾರೆ. ಇವೆಲ್ಲದಕ್ಕೂ ಕಾರಣ, ಈ ಭಾರತೀಯ ವಲಸಿಗನಿಗೆ ಸಿಕ್ಕ ಲಕ್ಷಗಟ್ಟಲೆ ರೂಪಾಯಿಗಳನ್ನು ಹಿಂತಿರುಗಿಸಿ ಪೊಲೀಸರಿಗೆ ನೀಡಿರುವುದು.  

ಇದನ್ನೂ ಓದಿ: Pravasi Bharathiya Diwas 2023: NRI ದಿನಾಚರಣೆಗೂ ಗಾಂಧೀಜಿಗೂ ಇದೆ ಮಹತ್ವದ ನಂಟು! ಏನದು ಗೊತ್ತಾ?

ಖಲೀಜ್ ಟೈಮ್ಸ್ ವರದಿಯ ಪ್ರಕಾರ, ಉಪೇಂದ್ರ ನಾಥ್ ಚತುರ್ವೇದಿ ಎಂಬವರಿಗೆ ಸಾರ್ವಜನಿಕ ಸ್ಥಳದಲ್ಲಿ 1,34,930 ದಿರ್ಹಮ್ (ರೂ. 30,22,500) ನಗದು ಸಿಕ್ಕಿಬಿದ್ದಿದೆ. ಅದನ್ನು ತಕ್ಷಣವೇ ಚತುರ್ವೇದಿ ಅಲ್ ರಫಾ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಅವರಿಗೆ ನೀಡಿದ್ದಾರೆ.

ಚತುರ್ವೇದಿಗೆ ಮೆಚ್ಚುಗೆ ಪ್ರಮಾಣ ಪತ್ರ:

ಭಾರತೀಯ ವಲಸಿಗರ ಈ ಪ್ರಾಮಾಣಿಕತೆಯನ್ನು ಕಂಡು ಪೊಲೀಸ್ ಠಾಣೆಯ ನಿರ್ದೇಶಕ ಕರ್ನಲ್ ಉಮರ್ ಮೊಹಮ್ಮದ್ ಬಿನ್ ಹಮ್ಮದ್ ಅವರು ತುಂಬಾ ಸಂತೋಷಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಚತುರ್ವೇದಿಯನ್ನು ಶ್ಲಾಘಿಸಿದರು. ಜೊತೆಗೆ ಭಾರತೀಯ ವ್ಯಕ್ತಿಗೆ ಪ್ರಶಂಸಾ ಪತ್ರವನ್ನು ಸಹ ನೀಡಿದ್ದಾರೆ. ಈ ಗೌರವಕ್ಕೆ ಚತುರ್ವೇದಿ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕಳೆದುಹೋದ ನಗದು, ಬೆಲೆಬಾಳುವ ವಸ್ತುಗಳು ಒಂದು ವೇಳೆ ಕಳೆದುಹೋಗಿದ್ದರೆ, ಅಂತಹ ವಸ್ತುಗಳನ್ನು ಮರಳಿ ಪೊಲೀಸರಿಗೆ ತಂದು ನೀಡಿದರೆ, ಆ ಜನರನ್ನು ಯುಎಇ ಪೊಲೀಸರು ಗೌರವಿಸುತ್ತಾರೆ.

ಈ ಹಿಂದೆ ಭಾರತೀಯ ವಲಸಿಗ ತಾರಿಕ್ ಖಾಲಿದ್ ಮೆಹಮೂದ್ ಎಂಬವರಿಗೆ ಕೂಡ ತಮ್ಮ ಕಟ್ಟಡದ ಲಿಫ್ಟ್‌ನಲ್ಲಿ 10 ಲಕ್ಷ ದಿರ್ಹಮ್‌ಗಳು ಸಿಕ್ಕಿ ಬಿದ್ದಿತ್ತು. ಅದನ್ನು ತನ್ನ ಬಳಿ ಇಟ್ಟುಕೊಳ್ಳದೆ ಪೊಲೀಸರಿಗೆ ಹಿಂತಿರುಗಿಸಿದ್ದರು. ಆ ಬಳಿಕ ಮೊಹಮ್ಮದ್ ಅವರನ್ನು ಪೊಲೀಸರು ಸನ್ಮಾನಿಸಿದ್ದರು.

ಇದನ್ನೂ ಓದಿ:  ವಿದೇಶದಲ್ಲಿ ಉದ್ಯೋಗದ ಕನಸನ್ನು ನನಸು ಮಾಡಲು ಸರ್ಕಾರದಿಂದ ಇಲ್ಲೊಂದು ದಿಟ್ಟ ನಿರ್ಧಾರ

ಯುಎಇಯಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಇಲ್ಲಿನ ಜನಸಂಖ್ಯೆಯ ಪ್ರಮುಖ ಭಾಗವಾಗಿದ್ದಾರೆ. 34,20,000ಕ್ಕೂ ಹೆಚ್ಚು ಭಾರತೀಯ ವಲಸಿಗರು UAE ನಲ್ಲಿ ವಾಸಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಇದು UAE ಯ ಒಟ್ಟು ಜನಸಂಖ್ಯೆಯ 38 ಪ್ರತಿಶತಕ್ಕಿಂತ ಹೆಚ್ಚು. ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ಸಂಬಂಧಗಳು ಸಾಂಪ್ರದಾಯಿಕವಾಗಿ ಸೌಹಾರ್ದಯುತವಾಗಿವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News