Turkey Earthquake 2023: ಮತ್ತೆ ನಡುಗಿದ ಟರ್ಕಿ: ಭಾರತೀಯ ಸೇನೆಯ ಫೀಲ್ಡ್ ಆಸ್ಪತ್ರೆಯಲ್ಲೂ ತಲ್ಲಣ ಸೃಷ್ಟಿ!

Turkey Earthquake 2023 Latest News: ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ತಡರಾತ್ರಿ ಸಂಭವಿಸಿದ ಭೂಕಂಪದಿಂದಾಗಿ, ಟರ್ಕಿಯ ಜನರಲ್ಲಿ ಮತ್ತೆ ಭಯ ಆವರಿಸಿದೆ. ಜನರು ತಮ್ಮ ಮನೆಗಳನ್ನು ತೊರೆದು ಬಯಲಿನತ್ತ ಓಡಲಾರಂಭಿಸಿದ್ದಾರೆ. ಪ್ರಬಲ ಭೂಕಂಪದಿಂದಾಗಿ ಕಟ್ಟಡಗಳು ಮತ್ತೆ ನಡುಗಲಾರಂಭಿಸಿವೆ.

Written by - Bhavishya Shetty | Last Updated : Feb 14, 2023, 01:33 AM IST
    • ತೀವ್ರ ಹೊಡೆತದಿಂದ ನರಳುತ್ತಿರುವ ಟರ್ಕಿಯಲ್ಲಿ ಮತ್ತೊಮ್ಮೆ ಭೂಕಂಪನದ ಅನುಭವವಾಗಿದೆ
    • ಸೋಮವಾರ ಸಂಜೆ ಸಂಭವಿಸಿದ ಭೂಕಂಪನಕ್ಕೆ ಅನೇಕ ಕಟ್ಟಡಗಳಲ್ಲಿಯೂ ಸಹ ಬಿರುಕು ಬಿಟ್ಟಿವೆ
    • ಪರಿಹಾರ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೇನೆಯ ಫೀಲ್ಡ್ ಆಸ್ಪತ್ರೆಯೂ ತತ್ತರಿಸಿದೆ
Turkey Earthquake 2023: ಮತ್ತೆ ನಡುಗಿದ ಟರ್ಕಿ: ಭಾರತೀಯ ಸೇನೆಯ ಫೀಲ್ಡ್ ಆಸ್ಪತ್ರೆಯಲ್ಲೂ ತಲ್ಲಣ ಸೃಷ್ಟಿ!  title=
Turkey

Turkey Earthquake 2023 Latest News: ಪ್ರಕೃತಿಯ ತೀವ್ರ ಹೊಡೆತದಿಂದ ನರಳುತ್ತಿರುವ ಟರ್ಕಿಯಲ್ಲಿ ಮತ್ತೊಮ್ಮೆ ಭೂಕಂಪನದ ಅನುಭವವಾಗಿದೆ. ಸೋಮವಾರ ಸಂಜೆ ಸಂಭವಿಸಿದ ಭೂಕಂಪವು ಎಷ್ಟು ಪ್ರಬಲವಾಗಿದೆ ಎಂದರೆ ಉಳಿದ ಅನೇಕ ಕಟ್ಟಡಗಳಲ್ಲಿಯೂ ಸಹ ಬಿರುಕು ಬಿಟ್ಟಿವೆ. ಭೂಕಂಪದಿಂದಾಗಿ ಟರ್ಕಿಯಲ್ಲಿ ಪರಿಹಾರ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೇನೆಯ ಫೀಲ್ಡ್ ಆಸ್ಪತ್ರೆಯೂ ತತ್ತರಿಸಿದೆ. ಜನರು ಜಾಗರೂಕರಾಗಿರಿ ಮತ್ತು ಶಿಥಿಲಗೊಂಡ ಕಟ್ಟಡಗಳಿಂದ ದೂರವಿರಿ ಎಂದು ಟರ್ಕಿಯ ಆಡಳಿತವು ಸಲಹೆಯನ್ನು ನೀಡಿದೆ.

ಇದನ್ನೂ ಓದಿ: ಈ ದೇಶದಲ್ಲಿ ಸೂರ್ಯ ಮುಳುಗುವುದು ಕೇವಲ 40 ನಿಮಿಷ ಮಾತ್ರ! ಇದು ಅತೀ ಹೆಚ್ಚು ಹಣವುಳ್ಳ ರಾಷ್ಟ್ರದ ವಿಶೇಷತೆ

ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ತಡರಾತ್ರಿ ಸಂಭವಿಸಿದ ಭೂಕಂಪದಿಂದಾಗಿ, ಟರ್ಕಿಯ ಜನರಲ್ಲಿ ಮತ್ತೆ ಭಯ ಆವರಿಸಿದೆ. ಜನರು ತಮ್ಮ ಮನೆಗಳನ್ನು ತೊರೆದು ಬಯಲಿನತ್ತ ಓಡಲಾರಂಭಿಸಿದ್ದಾರೆ. ಪ್ರಬಲ ಭೂಕಂಪದಿಂದಾಗಿ ಕಟ್ಟಡಗಳು ಮತ್ತೆ ನಡುಗಲಾರಂಭಿಸಿವೆ. ಮುಂಚಿನ ಭೂಕಂಪದಿಂದ ಉಳಿದುಕೊಂಡಿರುವ ಕಟ್ಟಡಗಳಲ್ಲಿ ಸಹ ಬಿರುಕುಗಳು ಕಾಣಿಸಿಕೊಂಡಿವೆ. ಟರ್ಕಿಯಲ್ಲಿ ಸಂಭವಿಸಿದ ಈ ಭೀಕರ ಭೂಕಂಪದ ಪ್ರಭಾವದಿಂದ ಅಲ್ಲಿ ಸ್ಥಾಪಿಸಲಾದ ಭಾರತೀಯ ಸೇನೆಯ ಫೀಲ್ಡ್ ಹಾಸ್ಪಿಟಲ್ ಕೂಡ ತತ್ತರಿಸಿವೆ.

ಭಾರತೀಯ ಸೇನೆಯ ಈ ಫೀಲ್ಡ್ ಆಸ್ಪತ್ರೆ ಕೂಡ ಅಲ್ಲೋಲಕಲ್ಲೋಲವಾಗಿದ್ದು, ಅದರ ಹಲವು ಭಾಗಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಸದ್ಯ ಆಸ್ತಿ-ಪಾಸ್ತಿ ನಷ್ಟದ ವರದಿಯಾಗಿಲ್ಲ. ಇಂತಹ ಭೂಕಂಪಗಳ ಅಪಾಯಗಳನ್ನು ನೋಡಿದ ಭಾರತೀಯ ಸೇನೆ ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿ ಕಟ್ಟಡಗಳ ಬದಲಿಗೆ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ಟರ್ಕಿಯ ಆಡಳಿತವು ಕೆಲವು ದಿನಗಳ ಕಾಲ ಕಟ್ಟಡಗಳಿಂದ ದೂರವಿದ್ದು ಟೆಂಟ್‌ಗಳನ್ನು ನಿರ್ಮಿಸುವ ಮೂಲಕ ಅಲ್ಲಿ ಉಳಿಯಲು ಮನವಿ ಮಾಡಿದೆ.

ಇದನ್ನೂ ಓದಿ: Turkey Syria earthquake : ಟರ್ಕಿ - ಸಿರಿಯಾ ಭೂಕಂಪ.. 33,000 ಗಡಿ ದಾಟಿದ ಸಾವಿನ ಸಂಖ್ಯೆ

ಸಾವಿನ ಸಂಖ್ಯೆ 36 ಸಾವಿರ ದಾಟಿದೆ?

2023 ರ ಟರ್ಕಿ ಭೂಕಂಪದಲ್ಲಿ ಸತ್ತವರ ಸಂಖ್ಯೆ 36 ಸಾವಿರ ದಾಟಿದೆ. ಎರಡೂ ದೇಶಗಳ ವಿವಿಧ ನಗರಗಳಲ್ಲಿ ಕಟ್ಟಡಗಳ ಅವಶೇಷಗಳ ರಾಶಿಯಿದ್ದು, ಇವುಗಳ ಅಡಿಯಲ್ಲಿ ಜೀವಗಳನ್ನು ಹುಡುಕುವ ಪ್ರಯತ್ನಗಳು ನಡೆಯುತ್ತಿವೆ. ಭಾರತದ ವಿಪತ್ತು ಪರಿಹಾರ ಸಂಸ್ಥೆ ಎನ್‌ಡಿಆರ್‌ಎಫ್ ಸೇರಿದಂತೆ ವಿವಿಧ ದೇಶಗಳ ಶೋಧ ತಂಡಗಳು ತಮ್ಮ ತರಬೇತಿ ಪಡೆದ ಶ್ವಾನಗಳು ಮತ್ತು ಯಂತ್ರಗಳ ಸಹಾಯದಿಂದ ಬದುಕುಳಿದವರನ್ನು ಹುಡುಕುತ್ತಿವೆ. ಭಾರತೀಯ ಸೇನೆಯು ಆಧುನಿಕ ಯಂತ್ರಗಳೊಂದಿಗೆ ಟರ್ಕಿಯಲ್ಲಿ ಫೀಲ್ಡ್ ಆಸ್ಪತ್ರೆಯನ್ನು ಸ್ಥಾಪಿಸಿದೆ. ಅಲ್ಲಿ ಭೂಕಂಪದಿಂದ ಬದುಕುಳಿದವರಿಗೆ ಚಿಕಿತ್ಸೆ ನೀಡಲು ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News