Venus Transit 2023: 48 ಗಂಟೆಗಳ ಬಳಿಕ ಯುವಾವಸ್ಥೆಗೆ ವೈಭವದಾತ ಶುಕ್ರ, 4 ರಾಶಿಗಳ ಜನರ ಅದೃಷ್ಟ ಚಿನ್ನದಂತೆ ಹೊಳೆಯಲಿದೆ!

Vanus Transit To Youth Stage: ಜೋತಿಷ್ಯ ಶಾಸ್ತ್ರದ ಪ್ರಕಾರ ಇತ್ತೀಚೆಗಷ್ಟೇ ವೈಭವದ ಕಾರಕ ಗ್ರಹ ಶುಕ್ರ ತನ್ನ ಸ್ವ ರಾಶಿಯಾಗಿರುವ ವೃಷಭ ರಾಶಿಗೆ ಪ್ರವೇಶಿಸಿದ್ದಾನೆ ಮತ್ತು ಶೀಘ್ರದಲ್ಲಿಯೇ ಆತ ತನ್ನ ಯುವಾವಸ್ಥೆಗೆ ಪ್ರವೇಶಿಸಲಿದ್ದು, ಇದರಿಂದ ನಾಲ್ಕು ರಾಶಿಗಳ ಜಾತಕದವರ ಅದೃಷ್ಟ ಚಿನ್ನದಂತೆ ಹೊಳೆಯಲಿದೆ. ಇದರಿಂದ ಅವರಿಗೆ ಅಪಾರ ಧನಲಾಭದ ಯೋಗ ರೂಪುಗೊಳ್ಳುತ್ತಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
 

Venus Transti To Youth Stage: ಜೋತಿಷ್ಯ ಶಾಸ್ತ್ರದ ಪ್ರಕಾರ ಇತ್ತೀಚೆಗಷ್ಟೇ ಧನ-ವೈಭವದ ಕಾರಕ ಗ್ರಹ ಎಂದೇ ಕರೆಯಲಾಗುವ ಶುಕ್ರದೇವ ತನ್ನ ಸ್ವರಾಶಿಯಾಗಿರುವ ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಸಾಮಾನ್ಯವಾಗಿ ಯಾವುದೇ ಒಂದು ಗ್ರಹ ಒಂದು ರಾಶಿಯನ್ನು ಬದಲಿಸಿ ಇನ್ನೊಂದು ರಾಶಿಗೆ ಪ್ರವೇಶಿಸಿದಾಗ ಅವು ಒಟ್ಟು ಮೂರು ಅವಸ್ಥೆಗಳಲ್ಲಿ ಆ ರಾಶಿಯಲ್ಲಿ ತಮ್ಮ ಸಂಚಾರವನ್ನು ಕೈಗೊಳ್ಳುತ್ತವೆ. ಅರ್ಥಾತ್ ಕುಮಾರಾವಸ್ಥೆ, ಯುವಾವಸ್ಥೆ ಹಾಗೂ ವೃದ್ಧಾವಸ್ಥೆಯಲ್ಲಿ ಅವು ಗೋಚರಿಸುತ್ತವೆ. ಇದರಲ್ಲಿ ಯುವಾವಸ್ಥೆಯನ್ನು ಅತ್ಯಂತ ಪ್ರಖರ ಖಾಗೂ ಅತ್ಯಂತ ಶುಭ ಫಲಪ್ರದಾಯಿ ಅವಸ್ಥೆ ಎಂದು ಹೇಳಲಾಗುತ್ತದೆ. ಬರುವ ಏಪ್ರಿಲ್ 17 ರಂದು ಧನ ಹಾಗೂ ವೈಭವ ಕರುಣಿಸುವಾತ ಶುಕ್ರ ತನ್ನ ಯುವಾವಸ್ಥೆಯನ್ನು ಪ್ರವೇಶಿಸಲಿದ್ದಾನೆ. ಇದರರ್ಥ ಆತ 12 ರಿಂದ 18 ಡಿಗ್ರಿ ಕೋನದಲ್ಲಿ ಸಂಚರಿಸುತ್ತಾನೆ. ಈ ಅವಧಿಯಲ್ಲಿ ಆತ  ಒಟ್ಟು 4 ರಾಶಿಗಳ ಜಾತಕದವರಿಗೆ ಅಪಾರ ಧನಲಾಭ, ಘನತೆ-ಗೌರವ ಮತ್ತು ಸ್ಥಾನಮಾನವನ್ನು ಕರುಣಿಸುತ್ತಾನೆ. ಆ ಅದೃಷ್ಟವಂತ ನಾಲ್ಕು ರಾಶಿಗಳು ಯಾವುವು ಬನ್ನಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ,

 

ಇದನ್ನೂ ಓದಿ-Auspicious Kedar Yog 2023: 5 ಶತಮಾನಗಳ ಬಳಿಕ ರೂಪುಗೊಳ್ಳುತ್ತಿದೆ ಈ ಅಪರೂಪದ ಕಾಕತಾಳೀಯ, ಈ ಜನರ ಮೇಲೆ ಹಣದ ಸುರಿಮಳೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಕರ್ಕ ರಾಶಿ: ವೃಷಭ ರಾಶಿಯಲ್ಲಿ ಧನದಾತ ಶುಕ್ರನ ಈ ಯುವಾವಸ್ಥೆಯ ಗೋಚರ ನಿಮ್ಮ ಪಾಲಿಗೆ ಅತ್ಯಂತ ಲಾಭಕಾರಿ ಸಾಬೀತಾಗಲಿದೆ. ನಿಮ್ಮ ಗೋಚರ ಜಾತಕದ ಏಕಾದಶ ಭಾವದಲ್ಲಿ ಶುಕ್ರ ಸಂಚರಿಸಲಿದ್ದಾನೆ. ಇದರಿಂದ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಉಂಟಾಗುವ ಸಾಧ್ಯತೆ ಇದೆ. ಇದಲ್ಲದೆ ಆದಾಯದ ಹೊಸ ಮೂಲಗಳು ನಿಮ್ಮ ಪಾಲಿಗೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಶುಕ್ರ ವೈಭವದಾತನಾಗಿರುಯ ಕಾರಣ ಈ ಅವಧಿಯಲ್ಲಿ ನಿಮಗೆ ಎಲ್ಲಾ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ಇಂಪೋರ್ಟ್-ಎಕ್ಸ್ಪೋರ್ಟ್ ಉದ್ಯಮಕ್ಕೆ ಸಂಬಂಧಿಸಿದ ಜನರಿಗೆ ಅಪಾರ ಧನಲಾಭವಾಗುವ ಸಾಧ್ಯತೆ ಇದೆ.   

2 /4

ಸಿಂಹ ರಾಶಿ: ಶುಕ್ರನ ಯುವಾವಸ್ಥೆಯ ಭ್ರಮಣೆ ನಿಮ್ಮ ಪಾಲಿಗೆ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಜಾತಕದ ಕರ್ಮ ಭಾವದಲ್ಲಿ ಶುಕ್ರನ ಈ ಗೋಚರ ನೆರವೇರುತ್ತಿದೆ. ಹೀಗಾಗಿ ನೌಕರವರ್ಗದ ಜನರಿಗೆ ಈ ಅವಧಿಯಲ್ಲಿ ಇಂಕ್ರೀಮೆಂಟ್ ಹಾಗೂ ಬಡ್ತಿ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಸಿಂಹ ರಾಶಿಗೂ ಕೂಡ ಶುಕ್ರ ಅಧಿಪತಿಯಾಗಿರುವ ಕಾರಣ ಈ ರಾಶಿಯಲ್ಲಿಯೂ ಕೂಡ ಆತ ಮಾಲವ್ಯ ರಾಜಯೋಗ ರೂಪಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅಪಾರ ಕಾರ್ಯಸಿದ್ಧಿಯ ಪ್ರಾಪ್ತಿಯ ಜೊತೆಗೆ ನಿಮ್ಮ ಎಲ್ಲಾ ಆಸೆ ಆಕಾಂಕ್ಷೆಗಳು ಈಡೇರಲಿವೆ. ಈ ಅವಧಿಯಲ್ಲಿ ವ್ಯಾಪಾರಿಗಳಿಗೆ ಅತ್ಯುತ್ತಮ ಧನಲಾಭವಾಗುವ ಸಾಧ್ಯತೆ ಇದೆ. ಹೊಸ ಕಾರ್ಯ ಆರಂಭಿಸಲು ಈ ಸಮಯ ಉತ್ತಮವಾಗಿದೆ.   

3 /4

ಮೇಷ ರಾಶಿ: ಧನ-ವೈಭವ ಕಾರಕ ಶುಕ್ರನ ಯುವಾವಸ್ಥೆಯ ಗೋಚರ ಮೇಷ ರಾಶಿಯ ಜಾತಕದವರ ಪಾಲಿಗೆ. ಆತಂತ್ಯ ಶುಭ ಫಲಪ್ರದಾಯಿ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಶುಕ್ರ ನಿಮ್ಮ ಗೋಚರ ಜಾತಕದ ಆರ್ಥಿಕ ಭಾವದಲ್ಲಿ ಗೋಚರಿಸಲಿದ್ದಾನೆ. ಶುಕ್ರ ಸ್ವಗ್ರಹಿಯಾಗಿರುವ ಹಾಗೂ ದಾಂಪತ್ಯ ಜೀವನಕ್ಕೆ ಅಧಿಪತಿಯಾಗಿರುವ ಕಾರಣ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನ ಪ್ರಾಪ್ತಿ ಯೋಗ ನಿರ್ಮಾಣಗೊಳ್ಳುತ್ತಿದೆ. ಅಷ್ಟೇ ಅಲ್ಲ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವ ಸಾಧ್ಯತೆ ಇದೆ. ವಿವಾಹಿತರಿಗೆ ಈ ಅವಧಿಯಲ್ಲಿ ಬಾಳಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ ಹಾಗೂ ಅವರ ಉನ್ನತಿಯೂ ಕೂಡ ನೆರವೇರಲಿದೆ.   

4 /4

ವೃಷಭ ರಾಶಿ: ವೃಷಭ ರಾಶಿಗೆ ಶುಕ್ರನೆ ಅಧಿಪತಿ ಹೀಗಾಗಿ ಶುಕ್ರನ ಈ ಯುವಾವಸ್ಥೆಯ ಗೋಚರ ನಿಮ್ಮ ಪಾಲಿಗೂ ಕೂಡ ಅತ್ಯಂತ ಅನುಕೂಲಕರ ಸಾಬೀತಾಗಲಿದೆ. ಸ್ವರಾಶಿಯ ಲಗ್ನ ಭಾವದಲ್ಲಿ ಸಂಚರಿಸುವ ಶುಕ್ರ ಅಲ್ಲಿ ಮಾಲವ್ಯ ರಾಜಯೋಗ ಕೂಡ ನಿರ್ಮಿಸುತ್ತಿದ್ದಾನೆ. ಇದರಿಂದ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳವನ್ನು ನೀವು ಕಾಣಬಹುದು. ಹಳೆ ಹೂಡಿಕೆಗಳಿಂದ ನೀವು ಉತ್ತಮ ಲಾಭವನ್ನು ಗಳಿಸಬಹುದು. ಐಷಾರಾಮಿ ವಸ್ತುಗಳನ್ನು ಖರೀದಿಸುವತ್ತ ನೀವು ಒಲವು ತೋರುವ ಸಾಧ್ಯತೆ ಇದ್ದು, ಕೋರ್ಟ್-ಕಚೇರಿ ವ್ಯವಹಾರಗಳಲ್ಲಿ ನಿಮಗೆ ಯಶಸ್ಸು ಸಿಗಲಿದ್ದು, ಇದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ನೀವು ಹೊಸ ಹೊಳಪನ್ನೆ ಕಾಣಬಹುದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)