Modi Government Pension Plan: Modi ಸರ್ಕಾರದ ಈ ಯೋಜನೆಗಳಿಗೆ ಜನ ಮುಗಿಬಿದ್ದಿದ್ದಾರೆ, ನೀವು?

Modi Government Pension Plan: ಮೋದಿ ಸರ್ಕಾರದ ಯೋಜನೆಗಳಾಗಿರುವ NPS(New Pension Scheme)ಹಾಗೂ APY (Atal Pension Yojana)ಯೋಜನೆಗಳು ಈ ವರ್ಷ ದಾಖಲೆಯನ್ನೇ ನಿರ್ಮಿಸಿವೆ.

Modi Government Pension Plan - ಮೋದಿ ಸರ್ಕಾರದ ಯೋಜನೆಗಳಾಗಿರುವ NPS(New Pension Scheme)ಹಾಗೂ APY (Atal Pension Yojana)ಯೋಜನೆಗಳು ಈ ವರ್ಷ ದಾಖಲೆಯನ್ನೇ ನಿರ್ಮಿಸಿವೆ. ಈ ಪಿಂಚಣಿ ಯೋಜನೆಗಳ ಒಟ್ಟು ಷೇರುದಾರರ ಸಂಖ್ಯೆ ಈ ವರ್ಷದ ಜನವರಿ ಅಂತ್ಯದ ವೇಳೆಗೆ ಸುಮಾರು ಶೇ.22 ರಷ್ಟು ಏರಿಕೆಯಾಗಿ 4.05 ಕೋಟಿಗೆ ತಲುಪಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (PFRDA) ಮಾಹಿತಿಯ ಪ್ರಕಾರ, ಒಂದೇ ವರ್ಷದಲ್ಲಿ ಎರಡೂ ಯೋಜನೆಗಳಿಗೆ ಸಂಬಂಧಿಸಿದ ಷೇರುದಾರರ ಸಂಖ್ಯೆ 3.33 ಕೋಟಿಗೆ ತಲುಪಿದೆ. ಇದು ವಾರ್ಷಿಕ ಆಧಾರದ ಮೇಲೆ ಶೇ. 21.63 ರಷ್ಟು ಹೆಚ್ಚಳವನ್ನು ಬಿಂಬಿಸುತ್ತಿದೆ ಎಂದು PFRDA ಹೇಳಿದೆ. PFRDA ಅಂಕಿಅಂಶಗಳ ಪ್ರಕಾರ, ಅಟಲ್ ಪಿಂಚಣಿ ಯೋಜನೆಯಡಿ (APY) ಷೇರುದಾರರ ಸಂಖ್ಯೆ ಹಿಂದಿನ ವರ್ಷದಲ್ಲಿ 2.02 ಕೋಟಿಯಿಂದ 2021 ರ ಜನವರಿಯಲ್ಲಿ 31.17 ರಷ್ಟು ಏರಿಕೆ ಕಂಡು 2.65 ಕೋಟಿಗೆ ತಲುಪಿದೆ. ನಿಯಂತ್ರಕರ ಪ್ರಕಾರ, NPS ಅಡಿಯಲ್ಲಿ ಕೇಂದ್ರ ಸರ್ಕಾರಿ(Modi Governmant) ನೌಕರರ ಸಂಖ್ಯೆ 2021 ರ ಜನವರಿಯಲ್ಲಿ ಶೇಕಡಾ 3.74 ರಷ್ಟು ಹೆಚ್ಚಳಗೊಂಡು 21.61 ಲಕ್ಷಕ್ಕೆ ತಲುಪಿದ್ದರೆ, ರಾಜ್ಯ ಸರ್ಕಾರಿ ನೌಕರರ ಸಂಖ್ಯೆ 7.44 ರಷ್ಟು ಹೆಚ್ಚಳಗೊಂಡು 50.43 ಲಕ್ಷಕ್ಕೆ ತಲುಪಿದೆ.

 

ಇದನ್ನೂ ಓದಿ- Digital India: ಈಗ ಇನ್ನೂ ಸುಲಭವಾಗಲಿದೆ Passport ಪಡೆಯುವ ವಿಧಾನ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

1. How To Open NPS Account: NPS ಅಡಿಯಲ್ಲಿ, ಎಲ್ಲಾ ನಾಗರಿಕ ವಿಭಾಗಗಳಲ್ಲಿನ ಷೇರುದಾರರ ಸಂಖ್ಯೆ ಶೇ.31.72 ರಷ್ಟು ಹೆಚ್ಚಳಗೊಂಡು 14.95 ಲಕ್ಷಕ್ಕೆ ತಲುಪಿದ್ದರೆ, ಕಾರ್ಪೊರೇಟ್ ವಲಯದಲ್ಲಿ ಇದು ಶೆಲ್ 17.71 ರಷ್ಟು ಹೆಚ್ಚಳಗೊಂಡು 10.90 ಲಕ್ಷಗಳಿಗೆ ತಲುಪಿದೆ. NPS LITE ಅಡಿಯಲ್ಲಿ 2015 ರ ಏಪ್ರಿಲ್ 1 ರಿಂದ ನೋಂದಣಿ ನಡೆಯುತ್ತಿಲ್ಲ ಎಂದು PFRDA ತಿಳಿಸಿದೆ. ಜನವರಿ 2021 ರ ಕೊನೆಯಲ್ಲಿ ಇದರ ಅಡಿಯಲ್ಲಿ ಷೇರುದಾರರ ಸಂಖ್ಯೆ 43.07 ಲಕ್ಷಗಳಷ್ಟಾಗಿತ್ತು. ಆರ್ಥಿಕವಾಗಿ ದುರ್ಬಲವಾಗಿರುವವರನ್ನು ಗಮನದಲ್ಲಿಟ್ಟುಕೊಂಡು ಎನ್‌ಪಿಎಸ್ ಲೈಟ್ ವಿನ್ಯಾಸಗೊಳಿಸಲಾಗಿದೆ. ಪಿಎಫ್‌ಆರ್‌ಡಿಎ ಪ್ರಕಾರ, ಪಿಂಚಣಿ ನಿರ್ವಹಣೆಯಡಿ ಒಟ್ಟು ಆಸ್ತಿಗಳು 2021 ರ ಜನವರಿ 31 ರ ವೇಳೆಗೆ 5,56,410 ಕೋಟಿ ರೂ.ಗಳಾಗಿದ್ದು, ಇದು ವಾರ್ಷಿಕ ಆಧಾರದ ಮೇಲೆ ಶೇ. 35.94 ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ.

2 /6

2.  Atal Pension Yojana Account- How to Open Atal Pension Yojana Account - APY ಅನ್ನು ಮೋದಿ ಸರ್ಕಾರ 2015 ರಲ್ಲಿ ಪ್ರಾರಂಭಿಸಿದೆ. ಇದನ್ನು ಅಸಂಘಟಿತ ವಲಯದ ಜನರಿಗೆ ಮತ್ತು ಹೌಸ್ ವೈಫ್ ಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಖಾತೆಯನ್ನು 40 ವರ್ಷ ವಯಸ್ಸಿನವರೆಗೆ ತೆರೆಯಬಹುದು. ನೀವು ಎಪಿವೈ ಖಾತೆಯಲ್ಲಿ ಠೇವಣಿ ಇರಿಸಿದ ಮೊತ್ತದ ಮೇಲೆ ನಿಮಗೆ ಆದಾಯ ತೆರಿಗೆ ರಿಯಾಯಿತಿ ಸಿಗುತ್ತದೆ. ಇದಕ್ಕಾಗಿ, ಖಾತೆಯಲ್ಲಿನ ಠೇವಣಿಯ ರಶೀದಿಯನ್ನು ತೋರಿಸಬೇಕಾಗಿದೆ. ಅಟಲ್ ಪಿಂಚಣಿ ಯೋಜನೆ ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರಿಗೆ ಇರುವುದರಿಂದ. ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

3 /6

3. How To Open APY Account: ಈ ಪಿಂಚಣಿ ಯೋಜನೆಯಡಿ 18 ವರ್ಷದಿಂದ 40 ವರ್ಷ ವಯಸ್ಸಿನ ವ್ಯಕ್ತಿಗಳು ಖಾತೆ ತೆರೆಯಬಹುದು. ಇದರಲ್ಲಿ, ಕೊಡುಗೆದಾರರು 60 ವರ್ಷದ ನಂತರ ಅದೇ ಸ್ಥಿರ ಪಿಂಚಣಿ ಮೊತ್ತವನ್ನು ಅಥವಾ ಷೇರುದಾರರ ಮರಣದ ನಂತರ ತಮ್ಮ ಸಂಗಾತಿಗೆ ಖಾತರಿಪಡಿಸಿದ ಪಿಂಚಣಿಯನ್ನು ಪಡೆಯುತ್ತಾರೆ. 

4 /6

4. ಇದರಲ್ಲಿನ ಫಂಡ್ ನಾಮಿನಿ ಹೆಸರಿಗೂ ಕೂಡ ವರ್ಗಾವಣೆಗೊಳ್ಳುತ್ತದೆ  -  ಇದಲ್ಲದೆ, ಒಟ್ಟು ಸಂಗ್ರಹವಾದ ಪಿಂಚಣಿ ನಿಧಿಯನ್ನು ಷೇರುದಾರರಿಗೆ 60 ವರ್ಷ ತುಂಬುವವರೆಗೆ ನಾಮಿನಿಗೆ ಹಿಂದಿರುಗಿಸುವ ಅವಕಾಶವೂ ಇದೆ. ಎಪಿವೈ ಎರಡು ಪ್ರಯೋಜನಗಳನ್ನು ಹೊಂದಿದೆ, ಮೊದಲ ಪಿಂಚಣಿ ಮತ್ತು ಎರಡನೇ ಆದಾಯ ತೆರಿಗೆ ವಿನಾಯಿತಿ. ಈ ಯೋಜನೆಯು 60 ವರ್ಷ ವಯಸ್ಸಿನ ಜನರಿಗೆ 1000 ರಿಂದ 5000 ರೂಪಾಯಿಗಳವರೆಗೆ ಕನಿಷ್ಠ ಖಾತರಿಯ ಮಾಸಿಕ ಪಿಂಚಣಿ ನೀಡುತ್ತದೆ.

5 /6

5. National Pension system - How to open NPS Account : Wealth Management at Transcend Consultants ನ ಮ್ಯಾನೇಜರ್ ಕಾರ್ತಿಕ್ ಝವೇರಿ ಪ್ರಕಾರ NPSನಲ್ಲಿ ಹಣ ಹೂಡಿಕೆಗಾಗಿ ಎರಡು ಆಯ್ಕೆಗಳಿವೆ. ಆಕ್ಟಿವ್ ಮೋಡ್ ಇದು ಮೊದಲನೇ ಆಯ್ಕೆಯಾಗಿದ್ದು, ಇದರ ಅಡಿ ಪ್ರತಿ ವರ್ಷ ನಿಮ್ಮ ರಿಟರ್ನ್ ಅನ್ನು ಗಮನಿಸಿ ಅದನ್ನು ಇಕ್ವಿಟಿ ಅಥವಾ ಡೆಟ್ ಫಂಡ್ ಗಳಲ್ಲಿ ಅದನ್ನು ನೀವು ಪರಿವರ್ತಿಸಬಹುದು. ಎರಡನೇ ಆಯ್ಕೆಯಾಗಿರುವ ಆಟೋ ಮಾಡ್ ನಲ್ಲಿ ಹೂಡಿಕೆದಾರರ ಹೂಡಿಕೆಯನ್ನು ಒತ್ತು 8 ಫಂಡ್ ಮ್ಯಾನೇಜರ್ ಗಳು ನಿರ್ವಹಿಸುತ್ತಾರೆ ಹಾಗೂ ಅವರು ಮಾರುಕಟ್ಟೆಯ ಸ್ಥಿತಿಗತಿಯನ್ನು ಆದರಿಸಿ ಇಕ್ವಿಟಿ ಹಾಗೂ ಡೆಟ್ ಫಂಡ್ ಗಳಾಗಿ ವರ್ಗಾಯಿಸುತ್ತಾರೆ. NPS ನಲ್ಲಿನ ಹೂಡಿಕೆ ಮಾಡುವ ಮೂಲಕ ನೀವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80CCD ಅಡಿ ತೆರಿಗೆ ವಿನಾಯ್ತಿ ಪಡೆಯಬಹುದು.

6 /6

6. ಹೀಗೆ ಖಾತೆ ತೆರೆಯಿರಿ - How to open NPS Account : ಖಾತೆ ತೆರೆಯಲು ಬಯಸುವ ನೂತನ ಗ್ರಾಹಕರಿಗೆ KYC ಮಾಡಿಸಲು ಯಾವುದೇ ದಾಖಲೆಗಳನ್ನು ನೀಡಬೇಕಾದ ಅವಶ್ಯಕತೆ ಇಲ್ಲ. ಕೇವಲ ಆಫ್ ಲೈನ್ ಆಧಾರ್ ನೀಡುವುದರ ಮೂಲಕ ಖಾತೆ ತೆರೆಯಬಹುದು ಮತ್ತು ಇದಕ್ಕಾಗಿ ಫೋಟೋ ಕಾಪಿ ನೀಡುವ ಅವಶ್ಯಕತೆ ಇಲ್ಲ.