Auspicious Rajyog: 30 ವರ್ಷಗಳ ಬಳಿಕ 'ಮಹಾಭಾಗ್ಯ ರಾಜಯೋಗ' ನಿರ್ಮಾಣ, ಶುಕ್ರ ಕೃಪೆಯಿಂದ 3 ರಾಶಿಗಳ ಜನರಿಗೆ ಭಾರಿ ಧನಲಾಭ!

Auspicious Rajyog: ಶೀಘ್ರದಲ್ಲಿಯೇ ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸುದೀರ್ಘ 30 ವರ್ಷಗಳ ಕಾಲಾವಧಿಯ ಬಳಿಕ ಮಹಾಭಾಗ್ಯ ರಾಜಯೋಗ ರೂಪುಗೊಳ್ಳಲಿದೆ. ಈ ರಾಜಯೋಗ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದ್ದು, 3 ರಾಶಿಗಳ ಜನರಿಗೆ ಇದರಿಂದ ಒಳ್ಳೆಯ ದಿನಗಳು ಆರಂಭಗೊಳ್ಳಲಿದ್ದು, ಅವರ ಜೀವನದಲ್ಲಿ ಅಪಾರ ವಿತ್ತೀಯ ಲಾಭ ಹರಿದುಬರಲಿದೆ.
 

Mahabhagya Rajyog: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ತಮ್ಮ ತಮ್ಮ ರಾಶಿಗಳನ್ನು ಬದಲಾಯಿಸುವ ಮೂಲಕ  ಶುಭ ಮತ್ತು ಅಶುಭ ಯೋಗಗಳನ್ನು ಸೃಷ್ಟಿಸುತ್ತವೆ. ಇದರ ಪರಿಣಾಮವು ಮಾನವ ಜೀವನ ಮತ್ತು ಭೂಮಿಯ ಮೇಲೆ ಕಂಡುಬರುತ್ತದೆ. ಪ್ರಸ್ತುತ 30 ವರ್ಷಗಳ ಸುದೀರ್ಘ ಅವಧಿಯ ನಂತರ 'ಮಹಾಭಾಗ್ಯ ರಾಜಯೋಗ' ರಚನೆಯಾಗುತ್ತಿದೆ. ಇದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಕಂಡುಬರಲಿದೆ. ಆದರೆ ಮೂರು ರಾಶಿಗಳ ಜನರ ಮೇಲೆ  ಈ ರಾಜಯೋಗವು ಭಾರಿ ಸಕಾರಾತ್ಮಕ ಪ್ರಭಾವವನ್ನು ಬೀರಲಿದ್ದು, ಈ ರಾಶಿಗಳ ಜನರ ಜೀವನದಲ್ಲಿ ಅಪಾರ ಆರ್ಥಿಕ ಲಾಭ ಹರಿದುಬರಲಿದೆ.

 

ಇದನ್ನೂ ಓದಿ-ಗ್ರಹಗಳ ಸೇನಾಪತಿಯ ರಾಶಿಯಲ್ಲಿ ಧನ-ಸಂಪತ್ತಿನ ಕಾರಕ ಗ್ರಹ, ಈ ರಾಶಿಗಳ ಜನರಿಗೆ ಭಾರಿ ವಿತ್ತೀಯ ಲಾಭ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /3

ಮಿಥುನ ರಾಶಿ: ಮಹಾಭಾಗ್ಯ ರಾಜಯೋಗದ ರೂಪುಗೊಳ್ಳುವಿಕೆ ನಿಮ್ಮ ಪಾಲಿಗೆ ಅತ್ಯಂತ ಲಾಭಕಾರಿ ಸಾಬೀತಾಗಲಿದೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಧೈರ್ಯ ಮತ್ತು ಶಕ್ತಿಯಲ್ಲಿ ಹೆಚ್ಚಳವನ್ನು ನೀವು ಗಮನಿಸಬಹುದು. ಅಲ್ಲದೆ, ನೀವು ಪಿತ್ರಾರ್ಜಿತ ಆಸ್ತಿಯಿಂದ ಅಪಾರ  ಪ್ರಯೋಜನಗಳನ್ನು ಪಡೆಯಬಹುದು. ಪ್ರೀತಿ ಮತ್ತು ಸಂತೋಷವು ಕೌಟುಂಬಿಕ ಜೀವನದಲ್ಲಿ ಉಳಿಯಲಿದೆ. ಇದೇ ವೇಳೆ  ನಿಮ್ಮ ಸಂಕ್ರಮಣ ಜಾತಕದಲ್ಲಿ ಹಂಸ ರಾಜಯೋಗ ಕೂಡ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನೀವು ಹಠಾತ್ ಧನಲಾಭವನ್ನು ಪಡೆಯಬಹುದು. ವ್ಯಾಪಾರಗಳಿಗೆ ಹಲವು ದಿನಗಳಿಂದ ಬರಬೇಕಾದ ಹಣ ಅವರತ್ತ ಮರಳಲಿದೆ. ದೀರ್ಘ ಕಾಲದಿಂದ ಹಣಕಾಸಿನ ಮುಗ್ಗಟ್ಟನ್ನು ಎದುರಿಸುತಿರುವವರ ಆದಾಯದ ಒಳ ಹರಿವು ಉತ್ತಮವಾಗಿರಲಿದ್ದು, ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಭಾರಿ ಸುಧಾರಿಸಲಿದೆ.   

2 /3

ಕರ್ಕ ರಾಶಿ: ಮಹಾಭಾಗ್ಯ ರಾಜಯೋಗದ ರೂಪಗೊಳ್ಳುವಿಕೆ, ಕರ್ಕ ರಾಶಿಯವರಿಗೆ ಒಳ್ಳೆಯ ದಿನಗಳನ್ನು ತರಲಿದೆ. ಈ ಅವಧಿಯಲ್ಲಿ ನೀವು ವಿದೇಶಿ ಪ್ರವಾಸಕ್ಕೆ ಹೋಗಬಹುದು. ಇದರೊಂದಿಗೆ, ವಿದೇಶಗಳಿಗೆ ಸಂಬಂಧಿಸಿದ ವ್ಯವಹಾರವನ್ನು ಹೊಂದಿರುವ ಜನರು ಉತ್ತಮ ಪ್ರಯೋಜನಗಳನ್ನು ಈ ಅವಧಿಯಲ್ಲಿ ಪಡೆಯಬಹುದು. ಮತ್ತೊಂದೆಡೆ, ಈ ಸಮಯವು ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾಗಿದೆ ಸಾಬೀತಾಗಲಿದೆ. ಅಂದರೆ ಅವರು ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ವಾಹನ ಮತ್ತು ಆಸ್ತಿಯ ಆನಂದವನ್ನು ಸಹ ಪಡೆಯುವ ಸಾಧ್ಯತೆ ಇದೆ.  

3 /3

ಧನು ರಾಶಿ: ಧನು ರಾಶಿಯವರಿಗೆ ಅಪಾರ ಆರ್ಥಿಕ ಲಾಭ ಮತ್ತು ಪ್ರಗತಿಯನ್ನು ದಯಪಾಲಿಸಲು ಮಹಾಭಾಗ್ಯ ರಾಜಯೋಗ ರೂಪುಗೊಳ್ಳುತ್ತಿದೆ. ಈ ಸಮಯದಲ್ಲಿ, ನಿಮ್ಮಲ್ಲಿನ ವ್ಯಾಪಾರಸ್ಥರು ವ್ಯವಹಾರದಲ್ಲಿ ಉತ್ತಮ ಆರ್ಡರ್ ಗಳನ್ನು ಪಡೆಯುವ ಸಾಧ್ಯತೆ ಇದೆ. ಮತ್ತೊಂದೆಡೆ, ಉದ್ಯೋಗಿಗಳಿಗೆ ಮಾರ್ಚ್ ನಂತರ ಬಡ್ತಿ ಮತ್ತು ಇನ್ಕ್ರಿಮೆಂಟ್ ನ ಅವಕಾಶಗಳು ನಿರ್ಮಾಣಗೊಳ್ಳುತ್ತಿವೆ. ನಿಮ್ಮ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ವೃತ್ತಿಪರ ಜೀವನದಲ್ಲಿ ಆ ಪ್ರಮುಖ ಅಪಾಯಗಳನ್ನು ತೆಗೆದುಕೊಳ್ಳಲು ನಿಮಗೆ ಈ ಅವಧಿಯಲ್ಲಿ ಸಾಧ್ಯವಾಗಲಿದೆ. ಮತ್ತೊಂದೆಡೆ, ನಿರುದ್ಯೋಗಿಗಳು ಹೊಸ ಉದ್ಯೋಗವನ್ನು ಪಡೆಯಬಹುದು. ಇದಲ್ಲದೆ ಜನವರಿ 17ರಿಂದ ನಿಮಗೆ ಶನಿಯ ಸಾಡೇಸಾತಿಯಿಂದ ಕೂಡ ಮುಕ್ತಿ ದೊರೆತಿದೆ. ಹೀಗಾಗಿ ನೀವು ಈ ಮೊದಲು ನಿಲ್ಲಿಸಿದ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯಬಹುದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)