ಗ್ರಹಗಳ ಸೇನಾಪತಿಯ ರಾಶಿಯಲ್ಲಿ ಧನ-ಸಂಪತ್ತಿನ ಕಾರಕ ಗ್ರಹ, ಈ ರಾಶಿಗಳ ಜನರಿಗೆ ಭಾರಿ ವಿತ್ತೀಯ ಲಾಭ!

Venus In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳನ ರಾಶಿಯಲ್ಲಿ ಧನಸಂಪತ್ತಿನ ಕಾರಕ ಗ್ರಹವಾಗಿರುವ ಶುಕ್ರನ ಗೋಚರ ನೆರವೇರಲಿದೆ. ಮಂಗಳ ಮೇಷ ರಾಶಿಗೆ ಅಧಿಪತಿ. ಹೀಗಾಗಿ ಮೇಷ ರಾಶಿಯಲ್ಲಿ ಶುಕ್ರನ ಗೋಚರ 3 ರಾಶಿಗಳ ಜನರಿಗೆ ಅಪಾರ ಧನಸಂಪತ್ತು ಮತ್ತು ಅದೃಷ್ಟವನ್ನು ಕರುಣಿಸದ್ದಾನೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿಯೋಣ ಬನ್ನಿ,
 

Shukra Gochar 2023 In Aries: ದೈತ್ಯರ ಗುರು ಎಂದೇ ಕರೆಯಲಾಗುವ ಶುಕ್ರದೇವನ ರಾಶಿ ಪರಿವರ್ತನೆಯನ್ನು ಜೋತಿಷ್ಯ ಶಾಸ್ತ್ರದಲ್ಲಿ ಪ್ರಮುಖ ಎಂದು ಭಾವಿಸಲಾಗಿದೆ. ಏಕೆಂದರೆ ಜೋತಿಷ್ಯ ಪಂಡಿತರ ಪ್ರಕಾರ, ಶುಕ್ರನನ್ನು ಧನ, ವೈಭವ, ಐಶ್ವರ್ಯ ಹಾಗೂ ಭೌತಿಕ ಸುಖದ ಕಾರಕ ಗ್ರಹ ಎಂದು ಭಾವಿಸಲಾಗುತ್ತದೆ. ಅರ್ಥಾತ್ ಶುಕ್ರ ಗೋಚರ ಈ ಎಲ್ಲಾ ವಿಭಾಗಗಳ ಮೇಲೆ ಪ್ರಭಾವ ಬೀರುತ್ತದೆ ಎಂಬುದು ಇದರ ಅರ್ಥ. ಮಾರ್ಚ್ 12 ರಂದು ಶುಕ್ರ ಗ್ರಹ ಗ್ರಹಗಳ ಸೇನಾಪತಿ ಎಂದೇ ಕರೆಯಲ್ಪಡುವ ಮಂಗಳನ ಅಧಿಪತ್ಯದ ರಾಶಿಯಾಗಿರುವ ಮೇಷ ರಾಶಿಯಲ್ಲಿ ಪ್ರವೇಶಿಸಲಿದೆ. ಇದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ಉಂಟಾಗಲಿದೆ. ಆದರೆ, ಮೂರು ರಾಶಿಗಳ ಜಾತಕದವರ ಮೇಲೆ ಈ ಗೊಚಾರದ ವಿಶೇಷ ಮತ್ತು ಸಕಾರಾತ್ಮಕ ಪ್ರಭಾವ ಉಂಟಾಗಲಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ, 

 

ಇದನ್ನೂ ಓದಿ- Holi 2023 Horoscope: ಮುಂದಿನ ಹೋಳಿ ಹಬ್ಬದವರೆಗೆ ಈ 4 ರಾಶಿಗಳ ಜನರ ಜೀವನದಲ್ಲಿ ಹಣದ ಹೊಳೆಯೇ ಹರಿಯಲಿದೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

ಮಿಥುನ ರಾಶಿ: ಶುಕ್ರನ ಈ ಮೇಷ ಗೋಚರ ನಿಮಗೆ ಸಾಕಷ್ಟು ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ಶುಕ್ರ ಗ್ರಹವು ನಿಮ್ಮ ಜಾತಕದ ಆದಾಯದ ಭಾವದಲ್ಲಿ ಸಾಗುತ್ತಿದ್ದಾನೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಆದಾಯವು ಹೆಚ್ಚಾಗಬಹುದು. ವಿದೇಶದಿಂದಲೂ ಲಾಭದ ಸಾಧ್ಯತೆಗಳಿವೆ. ಈ ಅವಧಿಯಲ್ಲಿ, ನೀವು ಶುಭ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಸಂಪತ್ತು, ಐಶ್ವರ್ಯ ಪ್ರಾಪ್ತಿಯಾಗಬಹುದು. ಆದರೆ ಇದರ ಜೊತೆಗೆ ಅನಗತ್ಯ ವೆಚ್ಚಗಳೂ ಆಗಬಹುದು. ನಿಯಂತ್ರಿಸಲು ಪ್ರಯತ್ನಿಸಿ.  

2 /3

ಮಕರ ರಾಶಿ: ಶುಕ್ರನ ಈ ರಾಶಿ ಪರಿವರ್ತನೆ ಮಕರ ರಾಶಿಯ ಸ್ಥಳೀಯರಿಗೆ ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ಏಕೆಂದರೆ ನಿಮ್ಮ ಸಂಕ್ರಮಣ ಜಾತಕದಲ್ಲಿ ಶುಕ್ರ ಗ್ರಹವು ಕೇಂದ್ರ ತ್ರಿಕೋಣ ರಾಜಯೋಗವನ್ನು ನಿರ್ಮಿಸುತ್ತಿದೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಅದೃಷ್ಟವು ಹೆಚ್ಚಾಗುತ್ತದೆ. ಅಲ್ಲಿ ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ. ಇದರೊಂದಿಗೆ ನೆಮ್ಮದಿ, ಸೌಲಭ್ಯಗಳನ್ನು ನಿಮ್ಮದಾಗಲಿವೆ. ಈ ಸಮಯದಲ್ಲಿ ನೀವು ಯಾವುದೇ ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ಮತ್ತೊಂದೆಡೆ, ನೀವು ಈ ಸಮಯದಲ್ಲಿ ಯಾವುದೇ ಭೂಮಿಯನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಬಯಸಿದರೆ, ಈ ಸಮಯವು ಈ ಕೆಲಸಕ್ಕೆ ಅನುಕೂಲಕರವಾಗಿದೆ.   

3 /3

ಮೇಷ ರಾಶಿ: ಶುಕ್ರನ ಮೇಷ ಸಂಕ್ರಮಣ ಮೇಷ ರಾಶಿಯವರಿಗೆ ಮಂಗಳಕರವೆಂದು ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯಲ್ಲಿ  ಈಗಾಗಲೇ ರಾಹು ವಿರಾಜಮಾನನಾಗಿದ್ದು ಶುಕ್ರನ ಜೊತೆಗೆ ಆತನ ಮೈತ್ರಿ ನೆರವೇರಲಿದೆ. ಇದರೊಂದಿಗೆ ಶುಕ್ರನು ನಿಮ್ಮ ಜಾತಕದ ಸಪ್ತಮ ಭಾವದಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸಲಿದ್ದಾನೆ. ಆದ್ದರಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಶಾಂತಿ ಇರಲಿದೆ. ಇದರೊಂದಿಗೆ ಸಂಗಾತಿಯ ಸಹಕಾರದಿಂದ ಲಾಭವಾಗಲಿದೆ. ಇದರಲ್ಲಿ ನಿಮ್ಮ ಬಾಳಸಂಗಾತಿಯ ಏಳಿಗೆಯೂ ಇದೆ. ಇದರೊಂದಿಗೆ ವ್ಯಾಪಾರದಲ್ಲಿ ಪಾರ್ಟ್ನರ್ಶಿಪ್ ಲಾಭ ಮತ್ತು  ಸಹಕಾರವೂ ಸಿಗಲಿದೆ. ಅಲ್ಲಿಯೇ ನಿಮ್ಮ ಕೆಲಸಗಳು ಪೂರ್ಣಗೊಳ್ಳುತ್ತವೆ. ಇದರೊಂದಿಗೆ ಹಣದ ಒಳಹರಿವು ನಿಮ್ಮ ಜೀವನದಲ್ಲಿ ಹೆಚ್ಚಾಗಲಿದೆ. ಮತ್ತೊಂದೆಡೆ, ನಿಮ್ಮ ರಾಶಿಯ ಅಧಿಪತಿಯಾದ ಮಂಗಳನು ​​ಸಂಪತ್ತಿನ ಭಾವದಲ್ಲಿ ಉಳಿಯಲಿದ್ದಾನೆ. ಇದಲ್ಲದೆ ಸಂಪತ್ತಿನ ಅಧಿಪತಿಯಾಗಿರುವ ಶುಕ್ರನು ಮೇಷರಾಶಿಯಲ್ಲಿ ಇರುವ ಕಾರಣ ನಿಮಗೆ ಊಹಿಸಲಾಗದಷ್ಟು ಲಾಭ ಸಿಗಲಿದೆ. ಯಾವುದಾದರೊಂದು ಹೊಸ ಕೆಲಸ ಆರಂಭಿಸಲು ಯೋಜನೆ ರೂಪಿಸುತ್ತಿದ್ದರೆ ಈ ಸಮಯವೂ ನಿಮಗೆ ಸಾಕಷ್ಟು ಅನುಕೂಲಕರವಾಗಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)