Belly Fat: ತೂಕ ಹೆಚ್ಚಳ, ಸ್ಥೂಲಕಾಯತೆಗೆ ನಮ್ಮ ಬದಲಾದ ಜೀವನಶೈಲಿ ಪ್ರಮುಖ ಕರಣವಾದರೆ, ಆಹಾರ ಪಾನೀಯಗಳ ಬಳಕೆಯಲ್ಲಿ ನಿಗಾವಹಿಸದಿರುವುದು ಮತ್ತೊಂದು ಪ್ರಮುಖ ಕಾರಣ.
Weight Loss: ನೀವು ನಿಮ್ಮ ಆಹಾರ ಪದ್ದತಿಯ ಬಗ್ಗೆ ಸೂಕ್ತ ಗಮನವಹಿಸುವುದರಿಂದ ಬಹಳ ಸುಲಭವಾಗಿ ತೂಕವನ್ನು ನಿಯಂತ್ರಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಯಾವ ಆಹಾರ ಸೇವಿಸಬೇಕು, ನೀರು ಕುಡಿಯುವುದು ಹೇಗೆ, ಆಹಾರ ಸೇವಿಸುವಾಗ ಯಾವ ಕ್ರಮ ಅನುಸರಿಸಬೇಕು ಎಂಬಂತ ಸಣ್ಣ-ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ದೇಹದಲ್ಲಿ ಶೇಖರವಾಗಿರುವ ಎಂತಹ ಕಠಿಣ ಕೊಬ್ಬನ್ನೂ ಕೂಡ ಸುಲಭವಾಗಿ ಕರಗಿಸಬಹುದು.
ತೂಕ ಇಳಿಕೆಗಾಗಿ ಫೈಬರ್ ಸಮೃದ್ಧ ಆಹಾರ, ಪ್ರೊಟೀನ್ ಹೆರಳವಾಗಿರುವ ಫುಡ್ ಸೇವಿಸುವುದರ ಜೊತೆಗೆ ಸಂಸ್ಕರಿಸಿದ ಆಹಾರಳನ್ನು ತಪ್ಪಿಸುವುದು ಮುಖ್ಯವಾಗಿದೆ.
ನಿತ್ಯ ಸಾಕಷ್ಟು ನೀರು ಕುಡಿಯುವುದರಿಂದ ಚಯಾಪಚಯ ಹೆಚ್ಚಾಗುತ್ತದೆ. ಇದು ಹಸಿವನ್ನು ಸಹ ಕಡಿಮೆ ಮಾಡುವುದರಿಂದ ತೂಕ ಇಳಿಕೆಗೆ ಲಾಭದಾಯಕವಾಗಿದೆ.
ಆತುರಾತುರವಾಗಿ ತಿನ್ನುವುದರಿಂದ ಹೆಚ್ಚು ಆಹಾರ ತಿನ್ನುವಿರಿ. ಇದನ್ನು ಜೀರ್ಣಿಸಿಕೊಳ್ಳುವುದು ಕೂಡ ಕಷ್ಟವಾಗುತ್ತದೆ. ಇದರ ಬದಲಿಗೆ ಚೆನ್ನಾಗಿ ಅಗಿದು ತಿನ್ನುವುದರಿಂದ ಹೊಟ್ಟೆ ಬೇಗ ತುಂಬುತ್ತದೆ. ಹೆಚ್ಚು ತಿನ್ನುವುದನ್ನು ತಪ್ಪಿಸಬಹುದು. ಇದು ತೂಕ ಇಳಿಕೆಯಲ್ಲಿ ಪರಿಣಾಮಕಾರಿ ಆಗಿದೆ.
ಆಹಾರಪದ್ದತಿಯ ಜೊತೆಗೆ ನಿತ್ಯ ಒಂದಿಷ್ಟು ದೈಹಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದರಿಂದ ದೇಹದಲ್ಲಿ ಶೇಖರವಾಗಿರುವ ಫ್ಯಾಟ್ ಸುಲಭವಾಗಿ ಕರಗಿ, ಡುಮ್ಮ ಹೊಟ್ಟೆ ಚಪ್ಪಟೆಯಾಗುತ್ತದೆ.
ಸಕ್ಕರೆ, ಸೋಡಾ ಮಿಶ್ರಿತ ಕೊಲ್ಡ್ ಡ್ರಿಂಕ್ಸ್ ಸೇವನೆಯನ್ನು ತಪ್ಪಿಸಿದರೆ ಇದು ತೂಕ ಇಳಿಕೆಯಲ್ಲಿ ಪರಿಣಾಮಕಾರಿ ಕೊಡುಗೆ ನೀಡುತ್ತದೆ.
ತೂಕ ಇಳಿಕೆಗೆ ಪ್ರತಿದಿನ ಸಾಕಷ್ಟು ನಿದ್ರೆ ಮಾಡುವುದು ತುಂಬಾ ಅವಶ್ಯಕ. ನಿತ್ಯ 8-9 ಗಂಟೆಗಳ ಕಾಲ ನಿದ್ರೆ ಮಾಡುವುದರಿಂದ ತೂಕ ಇಳಿಕೆ ಸುಲಭವಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.