ಮಗು ಎಷ್ಟೇ ಓದಿದರೂ ನೆನಪು ಉಳಿಯುವುದಿಲ್ಲವೇ !ಈ ದಿಕ್ಕಿಗೆ ಮುಖ ಹಾಕಿ ಕುಳಿತು ಓದಿದರೆ ಸರಾಗವಾಗಿ ಒಲಿಯುತ್ತಾಳೆ ವಿದ್ಯಾ ಲಕ್ಷ್ಮೀ !ಶತ ದಡ್ಡ ಕೂಡಾ ಉತ್ತಮ ಅಂಕ ಗಳಿಸುವುದು ಗ್ಯಾರಂಟಿ !

Written ByRanjitha R K
Published: Sep 09, 2024, 12:21 PM IST|Updated: Sep 09, 2024, 12:21 PM IST

ಓದುವ ಕೋಣೆಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ಒಳ್ಳೆಯದಾಗುವುದು ನೂರಕ್ಕೆ ನೂರು ಪ್ರತಿಶತ ಸತ್ಯ. 

ಬೆಂಗಳೂರು :ಕೆಲವರು ರಾತ್ರಿ ಹಗಲು ಎದ್ದು ಬಿದ್ದು ಓದುತ್ತಾರೆ.ಆದರೆ ಓದಿದ ವಿದ್ಯೆ ಮಾತ್ರ ತಲೆಗೆ ಹತ್ತುವುದೇ ಇಲ್ಲ.ಎಷ್ಟೇ ಓದಿದರೂ ಅದು ಮನಸ್ಸಿನಲ್ಲಿ ಕೂರುವುದಿಲ್ಲ.ಬದಲಾಗಿ,ಓದಿದ ಮರು ಕ್ಷಣವೇ ಮರೆತು ಹೋಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Vastu tips 1/9

ವಾಸ್ತು ಶಾಸ್ತ್ರ

ವಾಸ್ತು ಶಾಸ್ತ್ರದ ಪ್ರಕಾರ ಮಕ್ಕಳು ಓದುವುದು  ಮಾತ್ರವಲ್ಲ, ಓದಲು ಕುಳಿತುಕೊಳ್ಳುವ ಸ್ಥಳ ಕೂಡಾ ಬಹಳ ಮುಖ್ಯ. ಓದುವ ಕೋಣೆಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ಒಳ್ಳೆಯದಾಗುವುದು ನೂರಕ್ಕೆ ನೂರು ಪ್ರತಿಶತ ಸತ್ಯ.   

Best place 2/9

ಎಲ್ಲಿ ಕುಳಿತು ಓದಬೇಕು

ವಾಸ್ತು ಶಾಸ್ತ್ರದ ಪ್ರಕಾರ ಮಕ್ಕಳು ಓದಲು ಕುಳಿತುಕೊಳ್ಳುವ ಕೋಣೆ ಉತ್ತರ ದಿಕ್ಕಿನಲ್ಲಿರಬೇಕು. ಇದು ಸಾಧ್ಯವಾಗದೇ ಹೋದರೆ ಈಶಾನ್ಯ ದಿಕ್ಕಿನಲ್ಲಿದ್ದರೂ ಪರವಾಗಿಲ್ಲ.

Book Place 3/9

ಪುಸ್ತಕ ಇಡುವ ಜಾಗ

ಇನ್ನು ಪುಸ್ತಕಗಳನ್ನು ಇಡುವ ರ್ಯಾಕ್ ಕೂಡಾ ಪೂರ್ವ ದಿಕ್ಕಿನಲ್ಲಿಯೇ ಇರಬೇಕು. ರ್ಯಾಕ್ ಇಲ್ಲದೆ ಹೋದರೂ ಪುಸ್ತಕಗಳನ್ನು ಪೂರ್ವ ದಿಕ್ಕಿಗೆ ಮುಖ ಮಾಡಿ ಇಡಬೇಕು. 

Best Direction4/9

ಈ ದಿಕ್ಕಿಗೆ ಮುಖ ಇರಲಿ

ಇನ್ನು ಎಲ್ಲಿಯೇ ಕುಳಿತು ಓದುವಗಾಲೂ ಮಗುವಿನ ಮುಖವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಹಾಕಿ ಕುಳಿತು ಓದಬೇಕು.ಮಕ್ಕಳು ಓದುವಾಗ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಲೇ ಬಾರದು. 

Very Lucky 5/9

ಇದು ಬಹಳ ಲಕ್ಕಿ

ಇನ್ನು ಓದುವ ಪುಸ್ತಕಗಳನ್ನು ಇಡುವ ಜಾಗದಲ್ಲಿ ಗ್ಲೋಬ್ ಅಥವಾ ಪಿರಾಮಿಡ್ ಅನ್ನು ಇಟ್ಟರೆ ಅದು ಫಲಕಾರಿಯಾಗುತ್ತದೆ.ಈ ಎರಡೂ ವಸ್ತುಗಳು ನಿಮ್ಮ ಓದುವ ಕೋಣೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತವೆ.  

Clock Direction 6/9

ಗಡಿಯಾರ ಇದೆಯಾ

ಮಕ್ಕಳು ಓದಲು ಕೂರುವ ಕೋಣೆಯಲ್ಲಿ ಗಡಿಯಾರ ಇದ್ದರೆ  ಅದು ಈಶಾನ್ಯ ದಿಕ್ಕಿನಲ್ಲೇ ಇರಬೇಕು ಎನ್ನುವುದು ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶ.

Two Photos7/9

ಈ ಎರಡು ಫೋಟೋ ಇರಲಿ

ಇನ್ನು ಮಕ್ಕಳ ವಿದ್ಯೆಗೆ ಗಣೇಶ ಮತ್ತು ಸರಸ್ವತಿ ಇಬ್ಬರ ಆಶೀರ್ವಾದ ಕೂಡಾ ಮುಖ್ಯ. ಹಾಗಾಗಿ ಅವರು ಓದಲು ಕೂರುವ ಜಾಗದಲ್ಲಿ ಗಣಪತಿ ಅಥವಾ ಸರಸ್ವತಿ ಫೋಟೊ ಹಾಕಿದರೆ ಒಳ್ಳೆಯದು.   

boosts interest 8/9

ಆಸಕ್ತಿ ಹೆಚ್ಚಿಸುತ್ತದೆ

ಇನ್ನು ಏನೇ ಮಾಡಿದರೂ ಮಗು ಓದುವುದರಲ್ಲಿ ಆಸಕ್ತಿಯೇ ತೋರುವುದಿಲ್ಲ ಎಂದಾದರೆ ಮಗು ಓದಲು ಕುಳಿತು ಕೊಳ್ಳುವ ಕೋಣೆಯಲ್ಲಿ ನವಿಲುಗರಿಯನ್ನು ಇರಿಸಿ.ಇದು ಮಗುವಿನ ಏಕಾಗ್ರತೆ ಹೆಚ್ಚಿಸುತ್ತದೆ.  

Vastu tips for student9/9

ವಿದ್ಯಾರ್ಥಿಗಳಿಗೆ ವಾಸ್ತು

ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು ಝೀ ಮೀಡಿಯಾ ಖಚಿತಪಡಿಸಿಲ್ಲ.