Business Idea: ಕೇವಲ 15 ಸಾವಿರ ಹೂಡಿಕೆ ಮಾಡಿ ತಿಂಗಳಿಗೆ 1 ಲಕ್ಷಕ್ಕೂ ಅಧಿಕ ಆದಾಯ ಸಂಪಾದಿಸಿ

Business Idea: ನೀವೂ ಕೂಡ ನಿಮ್ಮ ಸ್ವಂತ ಉದ್ಯಮವನ್ನು ಆರಂಭಿಸಲು ಬಯಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಹೌದು, ಹೆಚ್ಚಿನ ಹೂಡಿಕೆ ಅಗತ್ಯವಿಲ್ಲದ ಒಂದು ಉದ್ಯಮದ ಪರಿಕಲ್ಪನೆಯನ್ನು ಇಂದು ನಾವು ತಿಳಿದುಕೊಳ್ಳೋಣ. ಈ ವ್ಯವಹಾರದಲ್ಲಿ ನೀವು ಕಡಿಮೆ ಹೂಡಿಕೆ ಮಾಡುವ ಮೂಲಕ ಮನೆಯಲ್ಲಿಯೇ ಕುಳಿತು ಉತ್ತಮ ಲಾಭವನ್ನು ಗಳಿಸಬಹುದು. 

Business Idea: ನೀವೂ ಕೂಡ ನಿಮ್ಮ ಸ್ವಂತ ಉದ್ಯಮವನ್ನು ಆರಂಭಿಸಲು ಬಯಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಹೌದು, ಹೆಚ್ಚಿನ ಹೂಡಿಕೆ ಅಗತ್ಯವಿಲ್ಲದ ಒಂದು ಉದ್ಯಮದ ಪರಿಕಲ್ಪನೆಯನ್ನು ಇಂದು ನಾವು ತಿಳಿದುಕೊಳ್ಳೋಣ. ಈ ವ್ಯವಹಾರದಲ್ಲಿ ನೀವು ಕಡಿಮೆ ಹೂಡಿಕೆ ಮಾಡುವ ಮೂಲಕ ಮನೆಯಲ್ಲಿಯೇ ಕುಳಿತು ಉತ್ತಮ ಲಾಭವನ್ನು ಗಳಿಸಬಹುದು. ಏಕೆಂದರೆ, ಈ ಬಿಸ್ನೆಸ್ ನ ವ್ಯಾಪ್ತಿ ತುಂಬಾ ದೊಡ್ಡದಾಗಿದೆ. ವಿಶ್ವಾದ್ಯಂತ ಸುಮಾರು 2 ಬಿಲಿಯನ್ ಟನ್ ತ್ಯಾಜ್ಯ ವಸ್ತುಗಳ ಉತ್ಪತ್ತಿಯಾಗುತ್ತದೆ. ಭಾರತದ ವಿಷಯಕ್ಕೆ ಬಂದರೆ ಭಾರತದಲ್ಲಿ 277 ಮಿಲಿಯನ್ ಗಿಂತಲೂ ಹೆಚ್ಚು ಜಂಕ್ ಉತ್ಪತ್ತಿಯಾಗುತ್ತದೆ. ಈ ಕುರಿತು ವಿಸ್ತೃತ ಮಾಹಿತಿ ಪಡೆದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-India's Cheapest 125 CC Bike Launch: ಸದ್ದಿಲ್ಲದೇ ಅಗ್ಗದ, ಸುಂದರ ಹಾಗೂ ದೀರ್ಘ ಬಾಳಿಕೆಯ ಬೈಕ್ ಬಿಡುಗಡೆ ಮಾಡಿದ ಬಜಾಜ್

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಯಾವ ಬಿಸ್ನೆಸ್ ಇದು? - ವೆಸ್ಟ್ ಮಟೀರಿಯಲ್ ರೀ ಸೈಕಲ್ ಬಿಸ್ನೆಸ್ ಇದಾಗಿದೆ. ಮನೆಯಲ್ಲಿ ಸಂಗ್ರಹವಾಗುವ ಸ್ಕ್ರ್ಯಾಪ್ ಗಳಿಂದ ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಈ ಉದ್ಯಮದಿಂದ ಹಲವರು ಲಕ್ಷಾಧಿಪತಿಗಳಾಗಿದ್ದಾರೆ. ಹಾಗಾದರೆ ಬನ್ನಿ ಈ ವ್ಯವಹಾರವನ್ನು ಎಲ್ಲಿ ಮತ್ತು ಹೇಗೆ ಪ್ರಾರಂಭಿಸಬೇಕು ತಿಳಿದುಕೊಳ್ಳೋಣ

2 /5

2. ಈ ಬಿಸ್ನೆಸ್ ವ್ಯಾಪ್ತಿ ದೊಡ್ಡದಾಗಿದೆ - ವಿಶ್ವಾದ್ಯಂತ, ಪ್ರತಿ ವರ್ಷ 2 ಶತಕೋಟಿ ಟನ್‌ಗಳಿಗಿಂತಲೂ ಹೆಚ್ಚು ತ್ಯಾಜ್ಯ ವಸ್ತುಗಳನ್ನು ಉತ್ಪಾದಿಸಲಾಗುತ್ತದೆ. ಇದೇ ವೇಳೆ, ಭಾರತದಲ್ಲಿಯೂ ಕೂಡ 277 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಜಂಕ್ ಉತ್ಪತ್ತಿಯಾಗುತ್ತದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ನಿರ್ವಹಣೆ ಅತ್ಯಂತ ಕಷ್ಟಕರವಾದ ಸಂಗತಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಇದೀಗ ಜನರು ಮನೆಯ ಅಲಂಕಾರ ವಸ್ತುಗಳು, ಆಭರಣಗಳು, ತ್ಯಾಜ್ಯ ವಸ್ತುಗಳಿಂದ ಪೇಂಟಿಂಗ್‌ಗಳಂತಹ ವಸ್ತುಗಳನ್ನು ಸಿದ್ಧಪಡಿಸುವ ಮೂಲಕ ಈ ದೊಡ್ಡ ಸಮಸ್ಯೆಯನ್ನು ವ್ಯಾಪಾರವಾಗಿ ಪರಿವರ್ತಿಸಿದ್ದಾರೆ. ಅನೇಕರು ಕಸದ ದಂಧೆಯಿಂದ ತಮ್ಮ ಭವಿಷ್ಯವನ್ನು ಕಂಡುಕೊಂಡಿದ್ದು, ಇಂದು ಲಕ್ಷಗಟ್ಟಲೆ ಲಾಭವನ್ನೂ ಸಹ ಗಳಿಸುತ್ತಿದ್ದಾರೆ

3 /5

3. ತ್ಯಾಜ್ಯ ಪದಾರ್ಥಗಳಿಂದ ನೀವು ಹಲವು ಸಂಗತಿಗಳನ್ನು ಮಾಡಬಹುದು. ಉದಾಹರಣೆಗೆ ನೀವು ಟೈಯರ್ ಗಳಿಂದ ಕುಳಿತುಕೊಳ್ಳಲು ಆಸನಗಳನ್ನು ತಯಾರಿಸಬಹುದು. ಅಮೆಜಾನ್ ನಲ್ಲಿ ಇಂತಹ ಆಸನ ಸುಮಾರು 700 ರೂ.ಗಳಿಗೆ ಮಾರಾಟವಾಗುತ್ತದೆ. ಇದಲ್ಲದೆ ಕಪ್ ಗಳು, ಮರದ ಕರಕುಶಲ ವಸ್ತುಗಳು. ಕೆಟಲ್ ತಯಾರಿಸಬಹುದು, ಗ್ಲಾಸ್ ತಯಾರಿಸಬಹುದು. ನಂತರ ಅವುಗಳನ್ನು ನೀವು ಇ-ಕಾಮರ್ಸ್ ವೇದಿಕೆಗಳಾಗಿರುವ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಗಳಲ್ಲಿ ಮಾರಾಟ ಮಾಡಬಹುದು. ಬೇಕಾದರೆ ನೀವು ಇವುಗಳನ್ನು ಆನ್ಲೈನ್ ಹಾಗೂ ಆಫ್ಲೈನ್ ಕೂಡ ಮಾರಾಟ ಮಾಡಬಹುದು. ಪೇಂಟಿಂಗ್ ನಲ್ಲಿ ನಿಮಗೆ ಅಭಿರುಚಿ ಇದ್ದರೆ, ನೀವು ಪೇಂಟಿಂಗ್ ಮೂಲಕ ಕೂಡ ಹಣ ಗಳಿಕೆ ಮಾಡಬಹುದು.

4 /5

4. ಈ ಬಿಸ್ನೆಸ್ ಆರಂಭಿಸಲು ಮೊದಲು ನೀವು ನಿಮ್ಮ ಮನೆಯ ಅಕ್ಕಪಕ್ಕದಲ್ಲಿರುವ ಅಥವಾ ನಿಮ್ಮ ಮನೆಯಲ್ಲಿಯೇ ಇರುವ ತ್ಯಾಜ್ಞವಸ್ತುಗಳನ್ನು ಸಂಗ್ರಹಿಸಬೇಕು. ಪಾಲಿಕೆಯಿಂದಲೂ ಕೂಡ ನೀವು ಅವುಗಳನ್ನು ಸಂಗ್ರಹಿಸಬಹುದು. ಗ್ರಾಹಕರೂ ಕೂಡ ತ್ಯಾಜ್ಯ ಪದಾರ್ಥಗಳನ್ನು ಒದಗಿಸುತ್ತಾರೆ ಮತ್ತು ಅವುಗಳನ್ನು ನೀವು ಖರೀದಿಸಬಹುದು. ಬಳಿಕ ಅವುಗಳನ್ನು ಸ್ವಚ್ಛಗೊಳಿಸಿ. ಬಳಿಕ ವಿವಿಧ ಸಾಮಗ್ರಿಗಳನ್ನು ವಿನ್ಯಾಸಗೊಳಿಸಿ ಅವುಗಳಿಗೆ ಬಣ್ಣ ಹಚ್ಚಿ.  

5 /5

5. ಈ ಕುರಿತು ಮಾತನಾಡಿರುವ 'ದಿ ಕಬಾಡಿ ಡಾಟ್ ಕಾಮ್' ನ ಮಾಲೀಕರಾಗಿರುವ ಶುಭಂ, ಆರಂಭದಲ್ಲಿ ಒಂದು ಆಟೋ ಹಾಗೂ ಮೂರು ಜನರು ಸೇರಿ ಮನೆ-ಮನೆಗೆ ತೆರಳಿ ತ್ಯಾಜ್ಯ ವಸ್ತುಗಳ ಸಂಗ್ರಹಣೆ ಆರಂಭಿಸಿದೆವು ಎನ್ನುತ್ತಾರೆ. ಇಂದು ತಮ್ಮ ಮಾಸಿಕ ಟರ್ನ್ ಓವರ್ 8 ರಿಂದ 10 ಲಕ್ಷಗಳಷ್ಟಾಗಿದೆ ಎಂದು ಅವರು ಹೇಳಿದ್ದಾರೆ. ಅವರ ಕಂಪನಿ ಒಂದು ತಿಂಗಳಿನಲ್ಲಿ 40 ರಿಂದ 50 ಟನ್ ಹಾಳಾದ ಸಾಮಗ್ರಿಗಳನ್ನು ಸಂಗ್ರಹಿಸುತ್ತದೆ ಎಂದು ಅವರು ಹೇಳಿದ್ದಾರೆ.