Business Idea: ಸರ್ಕಾರದ ನೆರವಿನೊಂದಿಗೆ ಈ ಉದ್ಯಮ ಆರಂಭಿಸಿ ಪ್ರತಿ ತಿಂಗಳು 6 ಲಕ್ಷ ಗಳಿಸಿ

ಪ್ರತಿಯೊಬ್ಬರಿಗೂ ಅಗತ್ಯವಾಗಿ ಬೇಕಾಗಿರುವ ಸೋಪ್ ತಯಾರಿಕೆ ಬ್ಯುಸಿನೆಸ್‍ಗೆ ಸರ್ಕಾರವು ನಿಮಗೆ ನೆರವು ನೀಡುತ್ತದೆ.

ನವದೆಹಲಿ: ನೀವು ಸಹ ನಿಮ್ಮ ಸ್ವಂತ ವ್ಯವಹಾರ ಪ್ರಾರಂಭಿಸಲು ಬಯಸಿದರೆ ಇಲ್ಲಿದೆ ಸೂಪರ್ ಡೂಪರ್ ಬ್ಯುಸಿನೆಸ್ ಐಡಿಯಾ. ಇದು ಎಲ್ಲಾ ವರ್ಗದ ಜನರಿಂದ ಬೇಡಿಕೆಯಿರುವ ವ್ಯವಹಾರವಾಗಿದೆ. ಇದು ಸೋಪ್ ತಯಾರಿಕೆಯ ವ್ಯವಹಾರವಾಗಿದೆ. ಈ ವ್ಯವಹಾರದಲ್ಲಿ ನೀವು ಹೆಚ್ಚು ಹೂಡಿಕೆ ಮಾಡಬೇಕಾಗಿಲ್ಲ ಮತ್ತು ಸರ್ಕಾರವೂ ನಿಮಗೆ ನೆರವು ನೀಡುತ್ತದೆ. ಈ ವ್ಯವಹಾರದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /7

ಪ್ರತಿಯೊಬ್ಬರಿಗೂ ಅಗತ್ಯವಾಗಿ ಬೇಕಾಗಿರುವ ಸೋಪ್ ತಯಾರಿಕೆ ಬ್ಯುಸಿನೆಸ್‍ಗೆ ಸರ್ಕಾರವು ನಿಮಗೆ ನೆರವು ನೀಡುತ್ತದೆ. ಸಾಬೂನು ತಯಾರಿಕಾ ಘಟಕ ಸ್ಥಾಪಿಸಿ ನೀವು ಕೈತುಂಬಾ ಹಣ ಸಂಪಾದಿಸಬಹುದು. ಸರ್ಕಾರದ ನೆರವಿನಿಂದ ಈ ವ್ಯವಹಾರ ಪ್ರಾರಂಭಿಸಿದರೆ ನಿಮಗೆ ಲಾಭವೂ ಹೆಚ್ಚಿರುತ್ತದೆ.

2 /7

ಯಂತ್ರದ ಸಹಾಯದಿಂದ ಸೋಪ್ ತಯಾರಿಸಿ ಮಾರುಕಟ್ಟೆಯಲ್ಲಿ ನಿಮಗಿಷ್ಟದ ಬೆಲೆಗೆ ಮಾರಾಟ ಮಾಡಬಹುದು. ಇಂದು ಅನೇಕರು ಕೈಯಿಂದ ತಯಾರಿಸಿದ ಸಾಬೂನುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಒಳ್ಳೆಯ ವಿಷಯವೆಂದರೆ ಈ ವ್ಯವಹಾರವನ್ನು ಸಣ್ಣ ಪ್ರಮಾಣದಲ್ಲಿಯೂ ಪ್ರಾರಂಭಿಸಬಹುದು. ಬೇಡಿಕೆ ಕಾರಣದಿಂದ ಈ ವ್ಯವಹಾರವು ಪ್ರತಿಯೊಂದು ಋತುವಿನಲ್ಲಿಯೂ ನಿಮ್ಮ ಕೈಹಿಡಿಯುತ್ತದೆ.

3 /7

ಭಾರತದಲ್ಲಿ ಸಾಬೂನು ಮಾರುಕಟ್ಟೆಯಲ್ಲಿ ಹಲವು ವರ್ಗಗಳಿವೆ. ಸೋಪ್ ಮಾರುಕಟ್ಟೆಯನ್ನು ಅದರ ಬಳಕೆಯ ಆಧಾರದ ಮೇಲೆ ವಿವಿಧ ವರ್ಗಗಳಾಗಿ ವಿಂಗಡಿಸಬಹುದು. ಲಾಂಡ್ರಿ ಸೋಪ್, ಬ್ಯೂಟಿ ಸೋಪ್, ಮೆಡಿಕೇಟೆಡ್ ಸೋಪ್, ಕಿಚನ್ ಸೋಪ್, ಪರ್ಫ್ಯೂಮ್ಡ್ ಸೋಪ್ ಇತ್ಯಾದಿ. ಬೇಡಿಕೆ ಮತ್ತು ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ನೀವು ಈ ವರ್ಗಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದು.

4 /7

ಕೇಂದ್ರ ಸರ್ಕಾರದ ಮುದ್ರಾ ಸ್ಕೀಮ್ ಪ್ರಾಜೆಕ್ಟ್ ವಿವರದ ಪ್ರಕಾರ, ನೀವು 1 ವರ್ಷದಲ್ಲಿ ಒಟ್ಟು 4 ಲಕ್ಷ ಕೆಜಿ ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆ. ಇದರ ಒಟ್ಟು ಮೌಲ್ಯ 47 ಲಕ್ಷ ರೂ. ಈ ಯೋಜನೆಯಡಿ ಎಲ್ಲಾ ವೆಚ್ಚಗಳು ನಂತರ ನೀವು 6 ಲಕ್ಷ ರೂ. ಅಂದರೆ ಪ್ರತಿ ತಿಂಗಳು 50 ಸಾವಿರ ರೂ. ನಿವ್ವಳ ಲಾಭ ಗಳಿಸುತ್ತೀರಿ.

5 /7

ಸೋಪ್ ತಯಾರಿಕಾ ಘಟಕ ಸ್ಥಾಪಿಸಲು ನಿಮಗೆ ಒಟ್ಟು 750 ಚದರ ಅಡಿ ಜಾಗ ಬೇಕಾಗುತ್ತದೆ. ಇದಕ್ಕೆ 500 ಚದರ ಅಡಿ ವಿಸ್ತೀರ್ಣ ಮತ್ತು ಉಳಿದ ತೆರೆದ ಜಾಗದ ಅಗತ್ಯವಿದೆ. ಇದಕ್ಕೆ ಎಲ್ಲಾ ರೀತಿಯ ಯಂತ್ರಗಳ ಜೊತೆಗೆ 8 ರೀತಿಯ ಉಪಕರಣಗಳು ಬೇಕಾಗುತ್ತವೆ. ಯೋಜನಾ ವರದಿ ಪ್ರಕಾರ ಈ ಯಂತ್ರಗಳನ್ನು ಅಳವಡಿಸಲು ಒಟ್ಟು 1 ಲಕ್ಷ ರೂ. ಬೇಕಾಗುತ್ತದೆ.

6 /7

ಹಳ್ಳಿ, ಪಟ್ಟಣ ಮತ್ತು ನಗರ ಹೀಗೆ ಎಲ್ಲಿ ಬೇಕಾದರೂ ನೀವು ಸಾಬೂನುಗಳನ್ನು ಸುಲಭವಾಗಿ ಮಾರಾಟ ಮಾಡಬಹುದು. ಬೇಡಿಕೆ ಹೆಚ್ಚಿರುವ ಕಾರಣ ನಿಮಗೆ ಈ ವ್ಯವಹಾರದಲ್ಲಿ ಯಶಸ್ಸು ಖಚಿತ. ಗುಣಮಟ್ಟದ ಜೊತೆಗೆ ಅತ್ಯುತ್ತಮ ಬೆಲೆಗೆ ಸೋಪ್ ಮಾರಾಟ ಮಾಡಬಹುದು. ನೀವು ಕಡಿಮೆ ಹಣದಲ್ಲಿ ಸೋಪ್ ಕಾರ್ಖಾನೆ ತೆರೆಯಬಹುದು. ಈ ವ್ಯವಹಾರ  ಪ್ರಾರಂಭಿಸಲು ನೀವು ಮುದ್ರಾ ಯೋಜನೆಯಡಿ ಶೇ.80 ಪ್ರತಿಶತದಷ್ಟು ಸಾಲವನ್ನು ಸಹ ತೆಗೆದುಕೊಳ್ಳಬಹುದು.

7 /7

ಸೋಪ್ ತಯಾರಿಕೆಯ ಉತ್ಪಾದನಾ ಘಟಕವನ್ನು ಸ್ಥಾಪಿಸಲು ನಿಮಗೆ ಒಟ್ಟು 15,30,000 ರೂ.ನಷ್ಟು ಖರ್ಚಾಗುತ್ತದೆ. ಜಾಗ, ಯಂತ್ರೋಪಕರಣ ಮತ್ತು 3 ತಿಂಗಳ ಕೆಲಸದ ಬಂಡವಾಳ ನಿಮಗೆ ಬೇಕಾಗುತ್ತದೆ. ಸುಮಾರು 4 ಲಕ್ಷ ರೂ.ನಷ್ಟು ಆರಂಭಿಕ ಬಂಡವಾಳ ನಿಮ್ಮ ಬಳಿ ಇದ್ದರೆ, ಇನ್ನುಳಿದ ಹಣಕ್ಕೆ ನೀವು ಮುದ್ರಾ ಯೋಜನೆಯಡಿ ಸಾಲ ಪಡೆದುಕೊಳ್ಳಬಹುದು.