Dhanashree Verma: ಯುಜ್ವೇಂದ್ರ ಚಹಾಲ್ ಪತ್ನಿ ಧನಶ್ರೀ ವರ್ಮಾ ಆಸ್ಪತ್ರೆಗೆ ದಾಖಲು..!

ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಅವರು 2020ರ ಡಿಸೆಂಬರ್  22ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರು ಏಷ್ಯಾ ಕಪ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಸದ್ಯ ಅವರ ಪತ್ನಿ ಧನಶ್ರೀ ವರ್ಮಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತೀಚೆಗೆ ಧನಶ್ರೀ ವರ್ಮಾ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ತಮ್ಮ ಶಸ್ತ್ರಚಿಕಿತ್ಸೆಯ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ರೀಲ್ಸ್ ಶೂಟಿಂಗ್ ವೇಳೆ ಧನಶ್ರೀ ವರ್ಮಾ ಕಾಲಿಗೆ ಅಸ್ಥಿರಜ್ಜು ಗಾಯವಾಗಿತ್ತು. ಇದೀಗ ಪೋಸ್ಟ್ ಶೇರ್ ಮಾಡುವ ಮೂಲಕ ಧನಶ್ರೀ ತಮ್ಮ ಶಸ್ತ್ರಚಿಕಿತ್ಸೆಯ ಬಗ್ಗೆ ಹೇಳಿಕೊಂಡಿದ್ದಾರೆ. ತಮಗಾದ ಗಾಯದ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.   

2 /5

ಗಾಯದ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಧನಶ್ರೀ ವರ್ಮಾ, ‘ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಪ್ರತಿ ಸಮಸ್ಯೆಯೂ ನಿಮ್ಮ ಹೊಸ ಮತ್ತು ಹುರುಪಿನ ಮರಳುವಿಕೆಗೆ ಸಹಕಾರಿ. ನಾನು ಮೊದಲಿಗಿಂತ ಬಲಶಾಲಿಯಾಗಿದ್ದೇನೆ. ನಿಮ್ಮ ಪ್ರಾರ್ಥನೆ ಮತ್ತು ಶುಭಾಶಯಗಳಿಗಾಗಿ ಎಲ್ಲರಿಗೂ ಧನ್ಯವಾದಗಳು’ ಅಂತಾ ಬರೆದುಕೊಂಡಿದ್ದಾರೆ.

3 /5

ಧನಶ್ರೀ ವರ್ಮಾ ಅವರ ಈ ಪೋಸ್ಟ್‌ಗೆ ಯುಜ್ವೇಂದ್ರ ಚಹಾಲ್ ಕೂಡ ಕಾಮೆಂಟ್ ಮಾಡಿದ್ದಾರೆ. ‘ಗೆಟ್ ವೆಲ್ ಸೂನ್ ವೈಫಿ’ ಎಂದು ಚಾಹಲ್ ಕಾಮೆಂಟ್ ಮಾಡಿದ್ದಾರೆ.       

4 /5

ಇತ್ತೀಚೆಗಷ್ಟೇ ಧನಶ್ರೀ ವರ್ಮಾ ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ನಿಂದ ಚಹಾಲ್ ಹೆಸರನ್ನು ತೆಗೆದುಹಾಕಿದ್ದಾರೆ. ಇದನ್ನು ನೋಡಿದ್ರೆ ದಂಪತಿ ನಡುವೆ ಏನೋ ಸರಿ ಇಲ್ಲವೆಂಬ ಊಹಾಪೋಹಗಳು ಕೇಳಿಬಂದಿತ್ತು. ಆದರೆ, ಈ ವದಂತಿ ತಳ್ಳಿಹಾಕಿರುವ ಈ ದಂಪತಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದರು.

5 /5

ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಅವರು 2020ರ ಡಿಸೆಂಬರ್  22 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಧನಶ್ರೀ ವರ್ಮಾ ನೃತ್ಯ ಸಂಯೋಜಕಿ ಮತ್ತು ದಂತ ವೈದ್ಯೆಯೂ ಹೌದು.