PM Modi: ಪ್ರಧಾನಿ ಮೋದಿಯವರ ಅಪರೂಪದ ಬಾಲ್ಯದ ಫೋಟೋಗಳು ಇಲ್ಲಿವೆ ನೋಡಿ

1950ರ ಸೆಪ್ಟೆಂಬರ್ 17ರಂದು ಜನಿಸಿದ ಮೋದಿಯವರು ಸ್ವತಂತ್ರ ಭಾರತದಲ್ಲಿ ಜನಿಸಿದ ಭಾರತದ ಮೊದಲ ಪ್ರಧಾನಿ ಅನ್ನೋ ಹೆಗ್ಗಳಿಕೆ ಹೊಂದಿದ್ದಾರೆ.

ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪ್ರಧಾನಿ ಮೋದಿ 72ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1950ರ ಸೆಪ್ಟೆಂಬರ್ 17ರಂದು ಜನಿಸಿದ ಮೋದಿಯವರು ಸ್ವತಂತ್ರ ಭಾರತದಲ್ಲಿ ಜನಿಸಿದ ಭಾರತದ ಮೊದಲ ಪ್ರಧಾನಿ ಅನ್ನೋ ಹೆಗ್ಗಳಿಕೆ ಹೊಂದಿದ್ದಾರೆ. ಮೋದಿಯವರು ಭಾರತದ 15ನೇ ಪ್ರಧಾನಿಯಾಗಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿದ ಅವರು ಬಾಲ್ಯದಲ್ಲಿ ಟೀ ಮಾರುತ್ತಿದ್ದೆ ಎಂದು ಸ್ವತಃ ಹೇಳಿಕೊಂಡಿದ್ದರು. ಬಡ ಕುಟುಂಬದಲ್ಲಿ ಹುಟ್ಟಿದ್ದರೂ ಕಷ್ಟಪಟ್ಟು ಭಾರತದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಪ್ರಧಾನಿ ಮೋದಿಯವರ ಕೆಲವು ಬಾಲ್ಯದ ಚಿತ್ರಗಳು ಇಲ್ಲಿವೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಪ್ರಧಾನಿ ನರೇಂದ್ರ ಮೋದಿಯವರು 1950 ಸೆಪ್ಟೆಂಬರ್ 17ರಂದು ಗುಜರಾತ್‌ನ ವಡ್ನಗರದಲ್ಲಿ ಜನಿಸಿದರು. ಅವರ ತಾಯಿ ಹೀರಾಬೆನ್ ಮತ್ತು ತಂದೆ ದಾಮೋದರದಾಸ್ ಮೂಲಚಂದ್ ಮೋದಿ. ಬಾಲ್ಯದಲ್ಲಿ ಅವರು ರೈಲ್ವೆ ನಿಲ್ದಾಣದಲ್ಲಿ ಟೀ ಮಾರಾಟ ಮಾಡುತ್ತಿದ್ದರಂತೆ. ಈ ಬಗ್ಗೆ ಸ್ವತಃ ಮೋದಿಯವರೇ ಹೇಳಿಕೊಂಡಿದ್ದಾರೆ. 1965ರ ಭಾರತ-ಪಾಕಿಸ್ತಾನ ಯುದ್ಧದ ಸಮದಲ್ಲಿ ಅವರು ರೈಲ್ವೆ ನಿಲ್ದಾಣದ ಮೂಲಕ ಹಾದುಹೋಗುವ ಸೈನಿಕರಿಗೆ ಚಹಾ ನೀಡಿ ಉಪಚರಿಸುತ್ತಿದ್ದರಂತೆ.

2 /5

ಮಾಹಿತಿಯ ಪ್ರಕಾರ ಪ್ರಧಾನಿ ಮೋದಿಯವರು ಓದಲು ವಡ್ನಗರದ ಭಾಗವತಾಚಾರ್ಯ ನಾರಾಯಣಾಚಾರ್ಯ ಶಾಲೆಗೆ ಹೋಗುತ್ತಿದ್ದರು. ಬಾಲ್ಯದಲ್ಲಿ ಒಮ್ಮೆ ಮೋದಿಯವರು ಕೊಳದಿಂದ ಮೊಸಳೆ ಮರಿಯನ್ನು ಹಿಡಿದು ತಮ್ಮ ಮನೆಗೆ ಕರೆತಂದಿದ್ದರಂತೆ. ಆದರೆ ತಾಯಿಯ ಮನವೊಲಿಕೆ ಬಳಿಕ ಆ ಮೊಸಳೆ ಮರಿಯನ್ನು ಮರಳಿ ಕೆರೆಗೆ ಬಿಟ್ಟಿದ್ದರಂತೆ.

3 /5

ಪ್ರಧಾನಿ ಮೋದಿಯವರು ಶಾಲಾ ಶಿಕ್ಷಣದ ಸಮಯದಲ್ಲಿ ಎನ್‌ಸಿಸಿಯ ಭಾಗವಾಗಿದ್ದರು. ಇದಲ್ಲದೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸದಸ್ಯರಾಗಿದ್ದರು. ಪ್ರಧಾನಿ ಮೋದಿ ಕಠಿಣ ಪರಿಶ್ರಮಿ ಮತ್ತು ನಿಷ್ಠಾವಂತರಾಗಿದ್ದರು. ನಂತರ ಅವರು ಆರ್‌ಎಸ್‌ಎಸ್‌ನ ದೊಡ್ಡ ಜವಾಬ್ದಾರಿಯನ್ನೂ ಪಡೆದರು. ಈ ರೀತಿ ಕ್ರಮೇಣ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಅವರ ಸ್ಥಾನಮಾನವೂ ಹೆಚ್ಚಾಯಿತು.

4 /5

ಗಮನಿಸಬೇಕಾದ ಅಂಶವೆಂದರೆ ಪ್ರಧಾನಿ ಮೋದಿಯವರು ಮೊದಲಿನಿಂದಲೂ ಗಡ್ಡ ಬಿಡಲು ಇಷ್ಟಪಡುತ್ತಾರೆ. ಅವರ ಹಿಂದಿನ ಚಿತ್ರಗಳಲ್ಲಿ ಅವರು ಗಡ್ಡ ಬಿಟ್ಟಿರುವುದನ್ನು ಕಾಣಬಹುದು. 1975ರಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದ ವೇಳೆ ಪ್ರತಿಪಕ್ಷದ ನಾಯಕರನ್ನು ಹಿಡಿದು ಜೈಲಿಗೆ ಹಾಕುತ್ತಿದ್ದಾಗ ಸಿಖ್ ವೇಷ ಧರಿಸಿ ಪೊಲೀಸರಿಂದ ಮೋದಿ ತಪ್ಪಿಸಿಕೊಂಡಿದ್ದರಂತೆ.

5 /5

ಪ್ರಧಾನಿ ಮೋದಿಯವರಿಗೆ ಬಾಲ್ಯದಿಂದಲೂ ಪ್ರಯಾಣದ ಬಗ್ಗೆ ಒಲವಿದೆ. ಅವರು 90 ರ ದಶಕದಲ್ಲಿ ಮೊದಲ ಬಾರಿಗೆ ಅಮೆರಿಕಕ್ಕೆ ಹೋಗಿದ್ದರು. ಅಮೆರಿಕದ ಶ್ವೇತಭವನದ ಹೊರಗೆ ತಮ್ಮ ಸ್ನೇಹಿತರ ಜೊತೆಗೂಡಿ ಫೋಟೋಗೆ ಪೋಸ್ ನೀಡಿದ್ದರು. ಪ್ರಧಾನಿಯಾಗುವ ಮುನ್ನವೇ ಮೋದಿಯವರು ಭಾರತದ ವಿವಿಧ ರಾಜ್ಯಗಳಿಗೆ ಪ್ರವಾಸ ಕೈಗೊಂಡಿದ್ದರು. ಬಿಜೆಪಿಯ ಉಳಿದ ಜವಾಬ್ದಾರಿಯನ್ನು ನಿರ್ವಹಿಸುವಾಗಲೂ ಅವರು ಅನೇಕ ರಾಜ್ಯಗಳಲ್ಲಿ ಉಳಿದುಕೊಂಡಿದ್ದರು.