ಸರ್ಕಾರದ ಯೋಜನೆಗೆ lOGO ಡಿಸೈನ್ ಮಾಡಿ 50 ಸಾವಿರ ನಗದು ಗೆಲ್ಲಿ

ನೀವು ಸೃಜನಶೀಲರಾಗಿದ್ದು, ವಿನ್ಯಾಸದಲ್ಲಿ ಪರಿಣತಿ ಹೊಂದಿದ್ದರೆ, ಇಲ್ಲೊಂದು ಉತ್ತಮ ಅವಕಾಶವಿದೆ. ಈ ಅವಕಾಶ ನೀಡಿರುವುದ ಕೇಂದ್ರ ಸರ್ಕಾರ ಎನ್ನುವುದು ಮತ್ತೊಂದು ವಿಶೇಷ . 

ನವದೆಹಲಿ : ನೀವು ಸೃಜನಶೀಲರಾಗಿದ್ದು, ವಿನ್ಯಾಸದಲ್ಲಿ ಪರಿಣತಿ ಹೊಂದಿದ್ದರೆ, ಇಲ್ಲೊಂದು ಉತ್ತಮ ಅವಕಾಶವಿದೆ. ಈ ಅವಕಾಶ ನೀಡಿರುವುದ ಕೇಂದ್ರ ಸರ್ಕಾರ ಎನ್ನುವುದು ಮತ್ತೊಂದು ವಿಶೇಷ . ನೀವು ಮಾಡಬೇಕಿರುವುದು ಇಷ್ಟೇ. ಸರ್ಕಾರದ ಯೋಜನೆಯೊಂದಕ್ಕೆ, ಲೋಗೋ ಡಿಸೈನ್ ಮಾಡಬೇಕು. ನಿಮ್ಮ ಕೆಲಸ ಸರ್ಕಾರಕ್ಕೆ ಇಷ್ಟವಾದರೆ ನಗದು ಬಹುಮಾನ ಸಿಗಲಿದೆ. ಬರೀಯ ನಗದು ಬಹುಮಾನ ಮಾತ್ರವಲ್ಲ ಪ್ರಮಾಣಪತ್ರ ಕೂಡಾ ಸಿಗಲಿದೆ. ಈ ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಈ ಕೇಂದ್ರ ಸರ್ಕಾರದ ಸ್ಪರ್ಧೆಯಡಿಯಲ್ಲಿ, ಒನ್ ನೇಷನ್ ಒನ್ ರೇಷನ್ ಕಾರ್ಡ್ (One Nation One Ration Card) ಯೋಜನೆಗಾಗಿ ಲೋಗೋವನ್ನು ವಿನ್ಯಾಸಗೊಳಿಸಬೇಕಾಗಿದೆ. ಸರ್ಕಾರದ ಸಿಟಿಜನ್ ಪ್ಲಾಟ್‌ಫಾರ್ಮ್  MyGov  ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನುಹಂಚಿಕೊಂಡಿದೆ.   

2 /4

ಈ ಸ್ಪರ್ಧೆಯಲ್ಲಿ ಜಯಗಳಿಸಿದ ಸ್ಪರ್ಧಿಗೆ 50,000 ರೂ.ಗಳ ನಗದು ಬಹುಮಾನ ನೀಡಲಾಗುವುದು ಎಂದು ನನ್ನ ಸರ್ಕಾರ ಟ್ವೀಟ್‌ನಲ್ಲಿ ತಿಳಿಸಿದೆ. ಇದರೊಂದಿಗೆ ವಿಜೇತರಿಗೆ ಇ-ಪ್ರಮಾಣಪತ್ರವೂ ಸಿಗುತ್ತದೆ.  ಇದಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸುವ ಮೂವರಿಗೆ ಸಮಾಧಾನಕರ ಬಹುಮಾನವಾಗಿ, ಇ-ಪ್ರಮಾಣಪತ್ರವನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಮೇ 31 ಮೇ 2021 ರ ಒಳಗೆ ಅರ್ಜಿ ಸಲ್ಲಿಸಬಹುದು.  

3 /4

ಸರ್ಕಾರದ ಈ ಸ್ಪರ್ಧೆಯಲ್ಲಿ ಭಾಗವಹಿಸಲು, ಮೊದಲು  myGov.in ಪೋರ್ಟಲ್‌ಗೆ ಭೇಟಿ ನೀಡಬೇಕಾಗುತ್ತದೆ. ಇಲ್ಲಿ, ಅವರು ಲಾಗಿನ್ ಟು ಪಾರ್ಟಿಸಿಪೇಟ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ.  ಇದರ ನಂತರ, ನೋಂದಣಿ ವಿವರಗಳನ್ನು ಭರ್ತಿ ಮಾಡಿ. ನೋಂದಣಿ ಆದ ನಂತರ ನಿಮ್ಮ ಎಂಟ್ರಿಯನ್ನು ಸಲ್ಲಿಸಿ.   

4 /4

ಈ ಸರ್ಕಾರಿ ಲೋಗೋ ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಲು ವಯಸ್ಸಿನ ಮಿತಿಯಿಲ್ಲ. ಸ್ಪರ್ಧಿಗಳು ಮೂರು ಬಾಋಇ ಎಂಟ್ರಿನ್ನು ದಾಖಲಿಸಬಹುದು. ಲೋಗೋ jpg, bmp ಅಥವಾ  tiff ನ ಹೈರೆಸೆಲ್ಯುಶನ್ (600 ಡಿಪಿಐ)  ಚಿತ್ರವಾಗಿರಬೇಕು. ಲೋಗೀ ಹಿಂದಿ ಅಥವಾ ಇಂಗ್ಲಿಷ್ ಯಾವ ಭಾಷೆಯಲ್ಲಾದರೂ ಇರಬಹುದು. ಲೋಗೋದ ಬಗ್ಗೆ 100 ಪದಗಳಲ್ಲಿ ಮಾಹಿತಿಯನ್ನು ಕೂಡಾ ನೀಡುವುದು ಅವಶ್ಯಕವಾಗಿದೆ.