EPFO Latest News: ದೇಶದ 6 ಕೋಟಿ ಚಂದಾದಾರರಿಗೆ EPFO ನೀಡಲಿದೆಯೇ ಶಾಕ್ ! ಮಾ.4 ರಂದು ನಿರ್ಧಾರ

EPFO Latest News - ನೌಕರರ ಭವಿಷ್ಯ ನಿಧಿ ಸಂಘಟನೆ (EPFO) 2021 ಮಾರ್ಚ್ 4 ರಂದು 2020-21ರ ಆರ್ಥಿಕ ವರ್ಷಕ್ಕೆ ಇಪಿಎಫ್‌ ಮೇಲಿನ  ಬಡ್ಡಿದರಗಳನ್ನು (EPF Interest Rates) ಘೋಷಿಸುವ ಸಾಧ್ಯತೆ ಇದೆ. ಈ ಕುರಿತು ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) ಮಾರ್ಚ್ 4 ರಂದು ಶ್ರೀನಗರದಲ್ಲಿ ಸಭೆ ಸೇರಲಿದೆ. ಈ ಬಾರಿ ಬಡ್ಡಿದರಗಳನ್ನು ಶೇಕಡಾ 8.5 ಕಡಿಮೆ ಮಾಡಲಾಗುತ್ತಿದೆ ಎನ್ನಲಾಗಿದೆ. ಕಳೆದ ವರ್ಷ, ಸಂಸ್ಥೆ ಬಡ್ಡಿದರವನ್ನು 7 ವರ್ಷಗಳ ಕನಿಷ್ಠ ಮಟ್ಟಕ್ಕೆ ಅಂದರೆ, ಶೇ.8.5 ಕ್ಕೆ ಇಳಿಕೆ ಮಾಡಿತ್ತು.

ನವದೆಹಲಿ:  EPFO Latest News - ನೌಕರರ ಭವಿಷ್ಯ ನಿಧಿ ಸಂಘಟನೆ (EPFO) 2021 ಮಾರ್ಚ್ 4 ರಂದು 2020-21ರ ಆರ್ಥಿಕ ವರ್ಷಕ್ಕೆ ಇಪಿಎಫ್‌ ಮೇಲಿನ  ಬಡ್ಡಿದರಗಳನ್ನು (EPF Interest Rates) ಘೋಷಿಸುವ ಸಾಧ್ಯತೆ ಇದೆ. ಈ ಕುರಿತು ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) ಮಾರ್ಚ್ 4 ರಂದು ಶ್ರೀನಗರದಲ್ಲಿ ಸಭೆ ಸೇರಲಿದೆ. ಈ ಸಭೆಯಲ್ಲಿ, ಇಪಿಎಫ್‌ಒನ ಗಳಿಕೆ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಲಾಗುವುದು. ಇದೇ ವೇಳೆ, 2020-21ರ ಆರ್ಥಿಕ ವರ್ಷದ ಬಡ್ಡಿದರ ಪರಿಷ್ಕರಣೆ ಕೂಡ ನಿರೀಕ್ಷಿಸಲಾಗಿದೆ. ಕರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಇಪಿಎಫ್ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡುವ ಮೂಲಕ ಸಂಸ್ಥೆ 6 ಕೋಟಿ ಚಂದಾದಾರರಿಗೆ ಶಾಕ್ ನೀಡುವ ನಿರೀಕ್ಷೆ ಇದೆ.

 

ಇದನ್ನೂ ಓದಿ- 'EPFO’ ನಿಂದ ಹೊಸ ಮಾರ್ಗಸೂಚಿ: ಇವು ನಿಮ್ಮ ಮೇಲೆ ಬೀಳಲಿದೆ ನೇರ ಪರಿಣಾಮ..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

1. Latest News On EPFO Interest Rates - ಮಾರುಕಟ್ಟೆಯಲ್ಲಿನ ಪರಿಸ್ಥಿತಿ ಸರಿಯಾಗಿಲ್ಲ - ಬಡ್ಡಿ ಪಾವತಿಸುವ ಕುರಿತು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಸಘಟನೆ, 2021 ರ ಮಾರ್ಚ್ 31 ರ ಅಂತ್ಯದ ವೇಳೆಗೆ ಚಂದಾದಾರರಿಗೆ ಎರಡು ಕಂತುಗಳಲ್ಲಿ ಶೇ .8.50 ರಷ್ಟು ಬಡ್ಡಿದರವನ್ನು ನೀಡಲಾಗುವುದು ಎಂದು ಹೇಳಿತ್ತು. ಚಂದಾದಾರರಿಗೆ ಮೊದಲ ಕಂತಿನಲ್ಲಿ ಶೇ 8.15 ರಷ್ಟು ಬಡ್ಡಿ ಮತ್ತು ಎರಡನೇ ಕಂತಿನಲ್ಲಿ ಶೇ 0.35 ರಷ್ಟು ಬಡ್ಡಿ ನೀಡಲಾಗುವುದು ಎಂದು ತಿಳಿಸಿತ್ತು. ಶೇ. 8.15ರಷ್ಟು ಡೆಟ್ ಇನ್ಕಮ್ ಮತ್ತು ಉಳಿದ ಶೇ.0.35 ರಷ್ಟನ್ನು ಇಟಿಎಫ್ ಮಾರಾಟ ಪ್ರಕ್ರಿಯೆಯ ಮೂಲಕ  ಒಟ್ಟು ಶೇ .8.50 ರಷ್ಟು ಬಡ್ಡಿಯನ್ನು ನೀಡಲಾಗುವುದು ಎಂದು ಇಪಿಎಫ್‌ಒ ತಿಳಿಸಿತ್ತು. 2019-20ರ ಹಣಕಾಸು ವರ್ಷದ ಬಡ್ಡಿದರಗಳಲ್ಲಿ ಯಾವುದೇ ಕಡಿತವಾಗುವುದಿಲ್ಲ, ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅದನ್ನು ಎರಡು ಕಂತುಗಳಲ್ಲಿ ಮರುಪಾವತಿ ಮಾಡಲಾಗುವುದು ಎಂದು ಇಪಿಎಫ್‌ಒ ಮಂಡಳಿಯ ಸದಸ್ಯ ಬೃಜೇಶ್ ಉಪಾಧ್ಯಾಯ ಹೇಳಿದ್ದಾರೆ. ಮಾರುಕಟ್ಟೆಯಲ್ಲಿ  ಪರಿಸ್ಥಿತಿ ಸರಿಯಾಗಿಲ್ಲದ ಈ ಸಮಯದಲ್ಲಿ ಕೆಲವು ಹೂಡಿಕೆಗಳನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

2 /3

2. Latest News On EPFO Interest Rates - EPFO ಬಡ್ಡಿ ದರ ಇಳಿಕೆ ಯಾಕೆ? - ಈ ಕುರಿತು ಹೇಳಿಕೆ ನೀಡಿರುವ EPFO ಟ್ರಸ್ಟೀ ಸದಸ್ಯರಾಗಿರುವ ಕೆ. ಇ. ರಘುನಾಥನ್, ಶ್ರೀನಗರ್ ನಲ್ಲಿ ಮಾರ್ಚ್ 4 ರಂದು ನಡೆಸಲು ಉದ್ದೇಶಿಸಲಾಗಿರುವ ಈ ಸಭೆಯ ಕುರಿತು ತಮಗೆ ಈಗಾಗಲೇ ಸೂಚನೆ ಬಂದಿದೆ, ಹಾಗೂ ಶೀಘ್ರದಲ್ಲಿಯೇ ಈ ಸಭೆಯ ಅಜೆಂಡಾ ಕೂಡ ಬರಲಿದೆ. ಆದರೆ, ಸಭೆಯ ಕುರಿತಾಗಿ ಬಂದಿರುವ ಇ-ಮೇಲ್ ನಲ್ಲಿ ಬಡ್ಡಿದರದ ಚರ್ಚೆಯ ಕುರಿತು ಯಾವುದೇ ಉಲ್ಲೇಖವಿಲ್ಲ ಎಂದು ಅವರು ಹೇಳಿದ್ದಾರೆ. ಏತನ್ಮಧ್ಯೆ ಕೇಂದ್ರ ಭವಿಷ್ಯನಿಧಿ ಸಂಘಟನೆ ಆರ್ಥಿಕ ವರ್ಷ 2020-21ಕ್ಕಾಗಿ ನೌಕರರ ಭವಿಷ್ಯನಿಧಿ ಮೇಲಿನ ಬಡ್ಡಿ ದರ ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ಅಂದಾಜು ವ್ಯಕ್ತಪಡಿಸಲಾಗುತ್ತಿದೆ.

3 /3

3. Latest News On EPFO Interest Rates - 2020ರಲ್ಲಿ 7 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಬಡ್ಡಿ ನೀಡಲಾಗಿತ್ತು - ವರ್ಷ 2019-20 ರಲ್ಲಿ ಪ್ರಾವಿಡೆಂಟ್ ಫಂಡ್ ಮೇಲಿನ ಬಡ್ಡಿದರವನ್ನು ಶೇ.8.5 ರಷ್ಟು ನಿಗದಿಪಡಿಸಲಾಗಿತ್ತು. ಕಳೆದ 7 ವರ್ಷಗಳಲ್ಲೇ ಇದು ಅತ್ಯಂತ ಕಡಿಮೆ ಬಡ್ಡಿದರ ಇದಾಗಿದೆ. ಈ ಮೊದಲು 2012-13ರಲ್ಲಿ ಶೇ.8.5 ರಷ್ಟು ಬಡ್ಡಿದರ ನಿಗದಿಪಡಿಸಲಾಗಿತ್ತು. ಚಂದಾದಾರರು 2018-19ರ ಆರ್ಥಿಕ ವರ್ಷದಲ್ಲಿ ಪಿಎಫ್ ಠೇವಣಿಗಳ ಮೇಲೆ ಶೇ 8.65 ರಷ್ಟು ಬಡ್ಡಿ ಪಡೆದಿದ್ದರು. ಇಪಿಎಫ್‌ಒ 2016-17ನೇ ಸಾಲಿನ ಪಿಎಫ್ ಠೇವಣಿಗಳ ಮೇಲೆ ಶೇ 8.65, 2017-18ರಲ್ಲಿ ಶೇ 8.55 ಮತ್ತು 2015-16ರಲ್ಲಿ ಶೇ 8.8 ರಷ್ಟುಬಡ್ಡಿಯನ್ನು ಪಡೆದಿದ್ದರು. ಇದೇ ವೇಳೆ  2013-14ರಲ್ಲಿ ಪಿಎಫ್ ಠೇವಣಿಗಳ ಮೇಲೆ ಶೇಕಡಾ 8.75 ರಷ್ಟು ಬಡ್ಡಿಯನ್ನು ನೀಡಲಾಗಿತ್ತು ಮತ್ತು ಇದು 2012-13ರ ಆರ್ಥಿಕ ವರ್ಷದ ಶೇ 8.5 ಬದ್ದಿದರಕ್ಕಿಂತ ಹೆಚ್ಚಾಗಿದೆ.